Asianet Suvarna News Asianet Suvarna News

ಕಾಂಗ್ರೆಸ್‌ ನಡೆಸಿದ್ದು ರಾವಣನ ಆಡಳಿತ, ಬಿಜೆಪಿಯದ್ದು ರಾಮನ ಆಡಳಿತ: ಕಟೀಲ್‌

*ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗ
*ಎರಡು ದಿನಗಳ ಚಿಂತನಾ ವರ್ಗಕ್ಕೆ ಶುಕ್ರವಾರ ಕಟೀಲ್‌ ಚಾಲನೆ 
*ಕಾಂಗ್ರೆಸ್‌ ನಡೆಸಿದ್ದು ರಾವಣನ ಆಡಳಿತ, ಬಿಜೆಪಿಯದ್ದು ರಾಮನ ಆಡಳಿತ
*ಕಾಂಗ್ರೆಸ್‌ ವಿಸರ್ಜಿಸದಿದ್ದಲ್ಲಿ ದೇಶದ ಭವಿಷ್ಯಕ್ಕೆ ತೊಂದರೆ ಎಂದು ಗಾಂಧೀಜಿಯೇ ಹೇಳಿದ್ದರು

Congress rule is Ravana type whereas BJP rule is rama type said Nalin kumar Katil in Manglore mnj
Author
Bengaluru, First Published Nov 13, 2021, 12:51 AM IST
  • Facebook
  • Twitter
  • Whatsapp

ಮಂಗಳೂರು(ನ.13): ಕಾಂಗ್ರೆಸ್‌ನ (Congress) ಸುದೀರ್ಘ ಕಾಲದ ಆಡಳಿತ ರಾವಣನದ್ದಾಗಿದ್ದು, ಮನೆ ಮನೆಗಳಲ್ಲಿ ರಾವಣರ (Ravana) ಸೃಷ್ಟಿಗೆ ಯತ್ನಿಸಿದೆ. ಆದರೆ ನಂತರದ ಬಿಜೆಪಿ ಆಡಳಿತ ರಾಮನದ್ದಾಗಿದೆ (Rama) ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಬಿಜೆಪಿಯ (BJP) ರಾಜ್ಯ ಪ್ರಕೋಷ್ಠಗಳ ಎರಡು ದಿನಗಳ ಚಿಂತನಾ ವರ್ಗಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಸ್ವಾತಂತ್ರ್ಯ ತಂದುಕೊಟ್ಟಗಾಂಧೀಜಿ (Mahata Ganhi) ದೇಶಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಹೇಳಿಲ್ಲ, ಬದಲು ರಾಮರಾಜ್ಯದ (Ramarajya) ಮಾತನ್ನು ಹೇಳಿದ್ದರು. ಅಲ್ಲದೆ ಸ್ವಾತಂತ್ರ್ಯ (Independence) ಲಭಿಸಿದ ಕೂಡಲೇ ಕಾಂಗ್ರೆಸ್‌ನ್ನು ವಿಸರ್ಜಿಸಬೇಕು. ಇಲ್ಲದಿದ್ದರೆ, ಕಾಂಗ್ರೆಸ್‌ ದೇಶದ ಭವಿಷ್ಯಕ್ಕೆ ತೊಂದರೆ ಎಂದಿರುವುದು ನಿಜವಾಗಿದೆ ಎಂದರು.

ಮೋದಿ  ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ!

ಕಾಂಗ್ರೆಸ್‌ನ ಸುದೀರ್ಘ ಕಾಲದ ಆಡಳಿತ ರಾವಣನದ್ದಾಗಿದ್ದು, ಮನೆ ಮನೆಗಳಲ್ಲಿ ರಾವಣರ ಸೃಷ್ಟಿಗೆ ಯತ್ನಿಸಿದೆ. ಆದರೆ ನಂತರದ ಬಿಜೆಪಿ ಆಡಳಿತ ರಾಮನದ್ದಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ (Narendra Modi) ಸಹಿತ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ (Curroption) ಹಗರಣ ನಡೆದಿಲ್ಲ. ದೇಶದಲ್ಲಿ ದೇಶ ವಿಭಜನೆ, ಮತೀಯ ವಿಭಜನೆ, ಹೊಡೆದಾಟ, ಏಕತೆ ಭಂಗಕ್ಕೆ ಕಾಂಗ್ರೆಸ್‌ ಆಡಳಿತವೇ ಕಾರಣವಾಗಿದೆ ಎಂದರು.

ಮೋದಿಯನ್ನು ಹಾಡಿ ಹೊಗಳಿದ ಕರ್ನಾಟಕದ ಕಾಂಗ್ರೆಸ್ ನಾಯಕ: ಚರ್ಚೆಗೆ ಗ್ರಾಸ

ಬಿಜೆಪಿ ಈಗಲೂ ಗಟ್ಟಿಯಾಗಿದೆ: ದೇಶದ ರಾಜಕೀಯ ಇತಿಹಾಸ ಗಮನಿಸಿದರೆ ಕಾಂಗ್ರೆಸ್‌, ಜನತಾ ಪರಿವಾರದಲ್ಲಿ ಸಾಕಷ್ಟುಒಡಕು ಮೂಡಿದೆ. ಅವರಿಗೆ ಸಿದ್ಧಾಂತಗಳಿಲ್ಲ, ಗೊತ್ತು ಗುರಿ ಇಲ್ಲ. ಯಾವುದೇ ವಿಚಾರದ ಜೊತೆ ನಮಗೆ ರಾಜಿ ಇಲ್ಲ. ಸಿದ್ಧಾಂತದ ರಾಜಕಾರಣ ನಡೆಸುವ ಬಿಜೆಪಿ ಯಾವುದೇ ತುಷ್ಠೀಕರಣ ನಡೆಸುತ್ತಿಲ್ಲ. ಬಿಜೆಪಿಯಲ್ಲಿ ಪ್ರಧಾನಿ ಹಾಗೂ ಸಿಎಂನ ವ್ಯಕ್ತಿ ಪೂಜೆ ಇಲ್ಲ, ಇವರೆಲ್ಲ ವ್ಯಕ್ತಿಯಾದರೂ ಆದರ್ಶರಾಗಿದ್ದಾರೆ. ಜನಸಂಘದಿಂದ ರಚನೆಗೊಂಡ ಬಳಿಕ ಬಿಜೆಪಿ ಅಂದಿನಿಂದ ಇಂದಿನವರೆಗೂ ಗಟ್ಟಿಯಾಗಿಯೇ ಇದೆ ಎಂದು ಹೇಳಿದರು.

ದೇಶದಲ್ಲಿ ಪ್ರಥಮ ಬಾರಿಗೆ ಮಂಗಳೂರಲ್ಲಿ ಚಿಂತನಾ ವರ್ಗ

ಬಿಜೆಪಿಯ ಎಲ್ಲ 24 ಪ್ರಕೋಷ್ಠಗಳ ಸಂಯೋಜಕರು, ಸಹ ಸಂಯೋಜಕರು ಹಾಗೂ ರಾಜ್ಯ ಸಮಿತಿ ಸದಸ್ಯರು ಸೇರಿ 225 ಮಂದಿ ಚಿಂತನಾ ವರ್ಗಕ್ಕೆ ಆಗಮಿಸಿದ್ದಾರೆ. ಈ ಚಿಂತನಾ ವರ್ಗ ದೇಶದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿದೆ. ಎರಡು ದಿನಗಳ ಈ ವರ್ಗದಲ್ಲಿ ಒಟ್ಟು ಆರು ಅವಧಿ ಇದೆ. ಶುಕ್ರವಾರ ಅಪರಾಹ್ನ ಕೇಂದ್ರ ಆರ್ಥಿಕ ನೀತಿ ಬಗ್ಗೆ ಆರ್ಥಿಕ ತಜ್ಞ ಡಾ.ಸಮೀರ್‌ ಖಾಡಿಲ್ಕರ್‌, ಸಂಘಟನಾತ್ಮಕ ವಿಚಾರ ಕುರಿತು ಭಾನುಪ್ರಕಾಶ್‌, ಕೇಂದ್ರ ಕಾನೂನು ಹಾಗೂ ಪರಿಣಾಮ ಕುರಿತು ಹಿರಿಯ ವಕೀಲ ಶಂಭು ಶರ್ಮಾ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ್ದಾರೆ. ಶನಿವಾರ ಬೆಳಿಗ್ಗೆ 9ರಿಂದ ಸಂಘಟನಾತ್ಮಕ ಪ್ರಕೋಷ್ಠ, ಜವಾಬ್ದಾರಿಗಳ ಬಗ್ಗೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಮಾತನಾಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಸಮಾರೋಪ ನಡೆಯಲಿದೆ.

ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್!

ರಾಜ್ಯದಲ್ಲಿ ನಾಯಕತ್ವ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ (BJP National Secretary Arun Singh), ಪ್ರತಿಪಕ್ಷ ಕಾಂಗ್ರೆಸ್‌ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆಪಾದಿಸಿದ್ದಾರೆ.

ಜೋರಾಯ್ತು ಬಿಟ್ ಕಾಯಿನ್ ಬಡಿದಾಟ: ಅಶ್ವತ್ಥ್ ನಾರಾಯಣರಿಂದ ಒಂದು ಸವಾಲು

ಸೋಮವಾರ (ನ.8) ಸಂಜೆ ಬೆಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ (Congress) ಬಳಿ ಯಾವುದೇ ವಿಷಯಗಳಿಲ್ಲದ ಕಾರಣ ಅದು ಬಿಜೆಪಿ ಬಗ್ಗೆ ಸುಳ್ಳು ಆರೋಪ- ಆಧಾರರಹಿತ ಟೀಕೆ ಮಾಡುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಕಾರ್ಯಚಟುವಟಿಕೆಯನ್ನೂ ಶ್ಲಾಘಿಸಿದರು.

Follow Us:
Download App:
  • android
  • ios