ರಸ್ತೆ ಅಪಘಾತದಿಂದ ಶಾಸಕರೊಬ್ಬರು ಕೊಂಚದರಲ್ಲಿ ಪಾರಾಗಿದ್ದಾರೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ್  ಅಪಘಾತದಿಂದ ಪಾರಾಗಿದ್ದಾರೆ.

ಕಾರವಾರ[ಜ.03] ವಿಧಾನಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ್ ಅದೃಷ್ಟವಶಾತ್ ಅಪಘಾತದಿಂದ ಪಾರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರಕನ್ನಡ ಜಿಲೆಯ ಹಳಿಯಾಳ ತಾಲೂಕಿನ ತಾಟವಾಳ ಬಳಿ ಅಪಘಾತ ಆಗಿದೆ. ಘೋಟ್ನೆಕರ್ ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಹಳಿಯಾಳದಿಂದ ಶಿರಸಿಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.

ಪಲ್ಟಿ ವೇಳೆ ಘೋಟ್ನೆಕರ್ ಕಾರಿನಲ್ಲೇ ಇದ್ದರು. ಫಾರ್ಚೂನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.(ಸಾಂದರ್ಭಿಕ ಚಿತ್ರ]