MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ದಾಂಡೇಲಿ ರೆಸಾರ್ಟ್‌ನಲ್ಲಿ ಜಿಪ್ ಲೈನ್ ತುಂಡಾಗಿ 40 ಅಡಿ ಎತ್ತರದಿಂದ ಬಿದ್ದ ಪ್ರವಾಸಿಗ; 15 ದಿನದ ಬಳಿಕ FIR ದಾಖಲು!

ದಾಂಡೇಲಿ ರೆಸಾರ್ಟ್‌ನಲ್ಲಿ ಜಿಪ್ ಲೈನ್ ತುಂಡಾಗಿ 40 ಅಡಿ ಎತ್ತರದಿಂದ ಬಿದ್ದ ಪ್ರವಾಸಿಗ; 15 ದಿನದ ಬಳಿಕ FIR ದಾಖಲು!

ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಆಡುವಾಗ ಸುರಕ್ಷತಾ ಬೆಲ್ಟ್ ತುಂಡಾಗಿ ಪ್ರವಾಸಿಗರೊಬ್ಬರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ದಿನದ ಬಳಿಕ ರೆಸಾರ್ಟ್ ಸಿಬ್ಬಂದಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

2 Min read
Author : Sathish Kumar KH
Published : Jul 21 2026, 12:08 PM IST
Share this Photo Gallery
  • FB
  • TW
  • Linkdin
  • Whatsapp
15
ದಾಂಡೇಲಿಯಲ್ಲಿ ಜಿಪ್‌ಲೈನ್ ದುರಂತ
Image Credit : Asianet News

ದಾಂಡೇಲಿಯಲ್ಲಿ ಜಿಪ್‌ಲೈನ್ ದುರಂತ

ಉತ್ತರ ಕನ್ನಡ (ಜು.21): ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದಾಂಡೇಲಿಯಲ್ಲಿ ಜು.3ರಂದು ಭೀಕರ ಅವಘಡವೊಂದು ಸಂಭವಿಸಿದೆ. ಇಲ್ಲಿನ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ನಲ್ಲಿ (Sterling River Resort) ಜಿಪ್ ಲೈನ್ (Zip-line) ಆಟವಾಡುತ್ತಿದ್ದಾಗ ಸುರಕ್ಷತಾ ಬೆಲ್ಟ್ (Safety Belt) ತುಂಡಾಗಿ ಪ್ರವಾಸಿಗರೊಬ್ಬರು ಸುಮಾರು 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು (Viral Video), ನೋಡಿದವರ ಎದೆ ಝಲ್ಲೆನ್ನುವಂತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಏನಿದು ಘಟನೆ?:
Image Credit : Asianet News

ಏನಿದು ಘಟನೆ?:

ವಿಜಯಪುರ (Vijayapura) ನಗರದ ನಿವಾಸಿ ಕುಬೇರ ಸುರಪುರ (Kuber Surpur, 40) ಅವರು ಕಳೆದ ಜುಲೈ 3 ರಂದು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ಗೆ ಪ್ರವಾಸಕ್ಕೆ ಬಂದಿದ್ದರು. ರೆಸಾರ್ಟ್‌ನಲ್ಲಿ ಸಾಹಸ ಕ್ರೀಡೆಯಾದ ಜಿಪ್ ಲೈನ್ ಆಡುತ್ತಿದ್ದಾಗ, ಹಠಾತ್ತಾಗಿ ಜಿಪ್ ಲೈನ್ ಲಾಕ್ (Lock Cut) ಕಟ್ ಆಗಿದೆ. ಪರಿಣಾಮ ಕುಬೇರ ಅವರು 30 ರಿಂದ 40 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ.

Related Articles

Related image1
ದಾಂಡೇಲಿ ಜಿಪ್‌ ಲೈನ್ ಅಪಘಾತ: 40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು? ಈಗ ಯುವಕನ ಸ್ಥಿತಿ ಏನಾಗಿದೆ?
Related image2
ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!
35
ಸಹೋದರನ ಮೊಬೈಲ್‌ನಲ್ಲಿ ಸೆರೆಯಾಯ್ತು ಲೈವ್ ವಿಡಿಯೋ:
Image Credit : Asianet News

ಸಹೋದರನ ಮೊಬೈಲ್‌ನಲ್ಲಿ ಸೆರೆಯಾಯ್ತು ಲೈವ್ ವಿಡಿಯೋ:

ಕುಬೇರ ಅವರು ಜಿಪ್ ಲೈನ್‌ನಲ್ಲಿ ಬರುತ್ತಿದ್ದ ದೃಶ್ಯವನ್ನು ಅವರ ಸಹೋದರ ಪ್ರಶಾಂತ್ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರು. ಖುಷಿಯಿಂದ ಕಿರುಚುತ್ತಾ ಬರುತ್ತಿದ್ದ ಕುಬೇರ, ಕ್ಷಣಾರ್ಧದಲ್ಲಿ ಬೆಲ್ಟ್ ತುಂಡಾಗಿ ಕೆಳಕ್ಕೆ ಬೀಳುವ ದೃಶ್ಯ ಕಂಡು ಪ್ರಶಾಂತ್ ಬೆಚ್ಚಿಬಿದ್ದಿದ್ದಾರೆ. ಈ ಅಪಘಾತದಲ್ಲಿ ಕುಬೇರ ಅವರ ಎರಡೂ ಕೈ ಮತ್ತು ಎರಡೂ ಕಾಲುಗಳ ಎಲುಬು ಮುರಿದಿದ್ದು (Multiple Fractures), ನರಗಳಿಗೂ ಗಂಭೀರ ಹಾನಿಯಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

45
ರೆಸಾರ್ಟ್ ಸಿಬ್ಬಂದಿ ನಿರ್ಲಕ್ಷ್ಯದ ಆರೋಪ:
Image Credit : Asianet News

ರೆಸಾರ್ಟ್ ಸಿಬ್ಬಂದಿ ನಿರ್ಲಕ್ಷ್ಯದ ಆರೋಪ:

ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯವೇ (Staff Negligence) ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್ ಮ್ಯಾನೇಜ್‌ಮೆಂಟ್ (Resort Management), ಈಗ ಸ್ಪಂದಿಸುತ್ತಿಲ್ಲ ಎಂದು ಗಾಯಾಳುವಿನ ಕುಟುಂಬದವರು ದೂರಿದ್ದಾರೆ. ಸದ್ಯ ಕುಬೇರ ಅವರು ಮೀರಜ್ ಆಸ್ಪತ್ರೆಯಲ್ಲಿ (Miraj Hospital) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹಾಸಿಗೆ ಹಿಡಿದಿದ್ದಾರೆ.

55
ಪೊಲೀಸ್ ದೂರು ಮತ್ತು ಎಫ್‌ಐಆರ್:
Image Credit : Asianet News

ಪೊಲೀಸ್ ದೂರು ಮತ್ತು ಎಫ್‌ಐಆರ್:

ಈ ಘಟನೆಗೆ ಸಂಬಂಧಿಸಿದಂತೆ ಜುಲೈ 21 ರಂದು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Dandeli Rural Police Station) ಪ್ರಕರಣ ದಾಖಲಾಗಿದೆ. ರೆಸಾರ್ಟ್ ಮಾಲೀಕ ಉಸ್ಮಾನ್ ವಹಾಬ್, ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ ಮತ್ತು ಪವನ್ ಎಂಬುವವರ ಮೇಲೆ ಬಿಎನ್ಎಸ್ (BNS 2023) ಕಾಯ್ದೆಯಡಿ ವಿವಿಧ ಕಲಂಗಳಲ್ಲಿ ಕೇಸ್ ದಾಖಲಿಸಲಾಗಿದೆ. ಸಾಹಸ ಕ್ರೀಡೆಗಳ ಹೆಸರಿನಲ್ಲಿ ಪ್ರವಾಸಿಗರ ಪ್ರಾಣದ ಜೊತೆ ಆಟವಾಡುತ್ತಿರುವ ರೆಸಾರ್ಟ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಉತ್ತರ ಕನ್ನಡ
ಪ್ರವಾಸ
ಪ್ರವಾಸೋದ್ಯಮ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನ 8 ಕಡೆ ಇಡಿ ದಾಳಿ: ಐಸಿಸ್ ಉಗ್ರ ಸಂಘಟನೆಗೆ ಫಂಡಿಂಗ್ ಜಾಲ ಪತ್ತೆ, ವಿದೇಶದಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ!
Recommended image2
ಆಲಮಟ್ಟಿ ಡ್ಯಾಂಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ, ರಾಜ್ಯದ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟು?
Recommended image3
Shivamogga: ವಸತಿ ಶಾಲೆ ಪ್ರವೇಶಕ್ಕೆ ₹20,000 ಲಂಚ ಕೇಳಿದ ಚೇಲ: ಹಣದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಪ್ರಿನ್ಸಿಪಾಲ!
Related Stories
Recommended image1
ದಾಂಡೇಲಿ ಜಿಪ್‌ ಲೈನ್ ಅಪಘಾತ: 40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು? ಈಗ ಯುವಕನ ಸ್ಥಿತಿ ಏನಾಗಿದೆ?
Recommended image2
ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved