ಮಂಗಳೂರು, [ಆ.31]: 'ಕುಣಿಯಲಾರದ ಸೂ...ನೆಲ ಡೊಂಕು ಅಂದಳಂತೆ' ಎನ್ನುವ ಮಾತಿಗೆ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

 ಇಂದು [ಶನಿವಾರ] ಮೈಸೂರಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕುಣಿಯಲಾರದ ಸೂ... ನೆಲ ಡೊಂಕು ಅಂದಳಂತೆ ಎನ್ನುವ ಉತ್ತರ ಕೊಟ್ಟಿದ್ದರು.ಈ ಮಾತಿಗೆ ಈಗ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. 

ಕರ್ನಾಟಕಕ್ಕೆ ಹೊಸ ಸಿಎಂ, ಮೋದಿಗೆ ಸ್ವಾಮಿ ಶಾಕ್; ಇಲ್ಲಿವೆ ಆ.31ರ ಟಾಪ್ 10 ಸುದ್ದಿ!

ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಬಿಜೆಪಿ ಯವರನ್ನು ಉದ್ದೇಶಿಸಿ ಮಾತು ಹೇಳಿರುವುದು. ಇದು ಹಳ್ಳಿಯ ಸಾಮಾನ್ಯ ಗಾದೆ ಮಾತು. ಕುಣಿಯಲಾರದ ನೃತ್ಯಗಾರ್ತಿ ನೆಲಡೊಂಕು ಎಂದು ಹೇಳಿದ್ದೇನೆ ಎಂದು  ಸ್ಪಷ್ಟಪಡಿಸಿದರು.

ವೇಗವಾಗಿ ಹೋಗ್ಬೇಡಿ, ಅಪಘಾತವಾಗ್ಬಹುದು: ರವಿಗೆ ಸಿದ್ದು ಆ್ಯಕ್ಸಿಡೆಂಟ್ ಟಾಂಗ್!

ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಅವರಿಗೆ ವಿವಾದ ಮಾಡೋದೇ ಒಂದು ಕೆಲಸ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. 

ಇನ್ನು ಸಿದ್ದು ಅವರ ಈ ಮಾತಿನ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ಖಂಡಿಸಿದ್ದು, ಸಿದ್ದರಾಮಯ್ಯ ಅವರ ಈ ಮಾತು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಇವರು ಹೆಣ್ಣನ್ನು ಗೌರವಿಸುವ ಪರಿ ಇದು ಎಂದು ಕಿಡಿಕಾರಿದ್ದಾರೆ.