Asianet Suvarna News Asianet Suvarna News

ಚುನಾವಣೆ ಮುಂದೂಡಲು ಕೋರ್ಟ್ ಮೆಟ್ಟಿಲೇರಲು ಮುಂದಾದ ಕಾಂಗ್ರೆಸ್

ಕಾಂಗ್ರೆಸ್ ಮುಖಂಡರು ಚುನಾವಣೆಯೊಂದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. 

Congress leader oppose To Hassan Co operative Bank Election
Author
Bengaluru, First Published Sep 14, 2020, 2:07 PM IST

ಚನ್ನರಾಯಪಟ್ಟಣ (ಸೆ.14) :  ಜಿಲ್ಲೆಯಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆ ನಡೆಸದೇ ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಮುಂದಾಗಿರುವ ಕ್ರಮ ಸರಿಯಲ್ಲ, ಇದನ್ನು ಪ್ರಶ್ನಿಸಿ ಕಾಂಗ್ರೆಸ್‌ ಕೋರ್ಟ್‌ ಮೆಟ್ಟಲೇರುವುದಾಗಿ ವಿಧಾನ ಪರಿಷತ್ತು ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ಜುಟ್ಟನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ 204 ಕೃಷಿಪತ್ತಿನ ಸಹಕಾರ ಸೊಸೈಟಿಗಳ ಪೈಕಿ 35 ಸೊಸೈಟಿಗಳಲ್ಲಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸದೇ ಜಿಲ್ಲಾ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಗೆ ಮುಂದಾಗಿರುವುದು ಸರಿಯಲ್ಲ, ಇದರಲ್ಲಿ ತಾಲೂಕಿನ ಪೂಮಡಿಹಳ್ಳಿ, ಸುಂಡಹಳ್ಳಿ, ಕಾಂತರಾಜಪುರು, ಮತ್ತು ಬಳಘಟ್ಟಸೊಸೈಟಿಗಳು ಸೇರಿದ್ದು, ಈ ಮೂಲಕ 35 ಸೊಸೈಟಿಗಳ ನಿರ್ದೇಶಕರುಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದರು.

ಈ ಕುರಿತು ಚುನಾವಣಾ​ಕಾರಿಯಾಗಿರುವ ಜಿಲ್ಲಾ​ಕಾರಿಗಳಿಗೆ ಚುನಾವಣೆ ಮುಂದೂಡುವಂತೆ ಪಕ್ಷದಿಂದ ಪತ್ರ ಬರೆಯಲಾಗಿದೆ, ಆದಾಗ್ಯೂ ಚುನಾವಣೆ ಮುಂದೂಡದಿದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದರು.

ಶಿರಾ ಭಿನ್ನಮತ ಕಾಂಗ್ರೆಸ್‌ಗೆ ತಲೆನೋವು ...

ಹೆಚ್‌ಎಸ್‌ಎಸ್‌ಕೆ ಆಡಳಿತ ಮಂಡಳಿಯ ನಡೆಯಿಂದ ರೈತರಿಗೆ ಪ್ರತಿತಿಂಗಳು ಸೇರಬೇಕಾದ 25 ಲಕ್ಷ ರು. ಹಣ ವ್ಯರ್ಥವಾಗುತ್ತಿದೆ. ಖಾಸಗಿಯವರ ಪರವಾಗಿ ನಿಂತಿರುವ ಆಡಳಿತ ಮಂಡಳಿ ರೈತರನ್ನು ಮರೆತು ಅ​ಕಾರಕ್ಕೆ ಅಂಟಿಕೊಂಡು ಕೂತಿದೆ. ಪ್ರತಿ 5ವರ್ಷಕ್ಕೊಮ್ಮೆ ನಡೆಯಬೇಕಾಗಿರುವ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯ ಅವ​ಯನ್ನು 9 ವರ್ಷಗಳಗೆ ಏರಿಕೆ ಮಾಡಿಕೊಂಡಿರುವ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿರುವುದಾಗಿ ತಿಳಿಸಿದರು.

ಇನ್ನೂ ಕೋವಿಡ್‌ ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ 10ಸಾವಿರ ಸೋಂಕಿತರಿದ್ದು, ಇವರಿಗೆ 500 ವೆಂಟಿಲೇಟರ್‌ಗಳ ಅವಶ್ಯಕತೆಯಿದೆ. ಇದನ್ನು ಸೇರಿ ಕೋವಿಡ್‌ಗೆ ಅಗತ್ಯ ಸಾಮಾಗ್ರಿಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ರಾರ‍ಯಪೀಡ್‌ ಟೆಸ್ಟ್‌ನ ಹೆಸರಿನಲ್ಲಿ ಬೇಕಾಬಿಟ್ಟಿಹಣ ವ್ಯಯಿಸುವ ಬದಲು ಇರುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕೆಂದರು.

ಬ್ಲಾಕ್‌ ಅಧ್ಯಕ್ಷ ಜೆ.ಎಂ.ರಾಮಚಂದ್ರ ಮಾತನಾಡಿ, ದಿನವೊಂದಕ್ಕೆ 10 ಸಾವಿರ ಕೊರೋನಾ ಕೇಸ್‌ಗಳು ದಾಖಲಾಗುತ್ತಿದ್ದರೂ ರಾಜ್ಯ ಸರ್ಕಾರ ಕಡಿವಾಣಕ್ಕೆ ಮುಂದಾಗದೇ ಕೈಚೆಲ್ಲಿ ಕೂತಿದೆ. ಆರಂಭದ ದಿನಗಳಲ್ಲಿ ಕೊರೋನಾ ತಡೆಗಟ್ಟುವ ಸಲುವಾಗಿ ವೈಜ್ಞಾನೀಕವಾಗಿ ನೀತಿನಿಯಮಗಳನ್ನು ಕೈಗೊಳ್ಳದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಇನ್ನೂ ಚಿಕಿತ್ಸೆಗೆ ಖಾಸಗಿ ಆಸ್ಪತೆಗಳ ದುಬಾರಿ ಬಿಲ್‌ ಜನಸಾಮಾನ್ಯನಿಗೆ ಹೊರೆಯಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲಿನ ಜನರ ಆರೋಗ್ಯದ ಕುರಿತಾಗಿ ನಿರ್ಲಕ್ಷತ್ರ್ಯವಹಿಸಿರುವ ರಾಜ್ಯ ಸರ್ಕಾರವನ್ನು ನಂಬಿ ಉಪಯೋಗವಿಲ್ಲವೆಂದು ಮನಗಂಡು ಕಾಂಗ್ರೆಸ್‌ ಪಕ್ಷದಿಂದ ಪ್ರತಿ ಪಂಚಾಯಿತಿಗೆ ಮೂವರನ್ನು ಸ್ವಯಂಸೇವಕರನ್ನು ನೇಮಿಸಿ ಪ್ರತಿ ಮನೆಗೆ ತೆರಳಿ ಜನರ ಆರೋಗ್ಯ ಪರೀಕ್ಷಿಸುವ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಕ್ಷೇತ್ರದ ಶಾಸಕರು ಕೋವಿಡ್‌ ನೆಪದಲ್ಲಿ ಯಾರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳದೇ ಜನರ ಕಷ್ಟಆಲಿಸುತ್ತಿಲ್ಲ, ತಾಲೂಕಿನ ಅಭಿವೃದ್ಧಿ ಕಾರ್ಯಗಳಲ್ಲಿ ಕಾಂಗ್ರೆಸ್‌ ಮತ್ತು ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡರ ಶ್ರಮವಿದೆ. ಹಿರಿಸಾವೆ ಏತನೀರಾವರಿ ಯೋಜನೆಯೂ ಆದರ ಭಾಗವಾಗಿದೆ. ಸದ್ಯವೀಗ ನಡೆಯುತ್ತಿರುವ ಕಾಮಗಾರಿಯಲ್ಲಿ ಇದನ್ನೆ ಲಾಭ ಮಾಡಿಕೊಳ್ಳಲು ಮುಂದಾಗಿರುವ ಶಾಸಕರು ಪ್ರತಿಯೊಂದಕ್ಕೂ ಪೂಜೆ ಮಾಡುವ ಮೂಲಕ ಪ್ರಚಾರದ ಹುಚ್ಚಿಗೆ ಬಿದ್ದಿದ್ದಾರೆ.

ಎಪಿಎಂಸಿ ನಿರ್ದೇಶಕ ಎಂ.ಶಂಕರ್‌ ಮಾತನಾಡಿ, ಕೋವಿಡ್‌ನ್ನು ಸಮರ್ಪಕವಾಗಿ ಎದುರಿಸುತ್ತಿರುವ ಮಾತುಗಳನ್ನಾಡುವ ಸರ್ಕಾರ ಸರಿಯಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ, ತಮ್ಮ ಪತ್ನಿ ಜಿ.ಪ.ಸದಸ್ಯೆ ಮಂಜುಳಾರವರನ್ನು ಕೋವಿಡ್‌ ಪರೀಕ್ಷೆಗೆಂದು ತಾಲೂಕು ಆಸ್ಪತ್ರೆಗೆ ಕರೆದೊಯ್ದರೆ ಕಿಟ್‌ ಇಲ್ಲವೆನ್ನುವ ವೈದ್ಯರು ಸಾಮಾನ್ಯ ಜನರ ಆರೋಗ್ಯದ ಸ್ಥಿತಿ ಇನ್ಯಾವ ರೀತಿ ಇರಲಿದೆ ಎಂದ ಅವರು ಜಿ.ಪ.ಸದಸ್ಯರಿಗೆ ಗೌರವ ನೀಡದ ವೈದ್ಯರುಗಳ ನಡೆ ಬಗೆ ಆರೋಗ್ಯ ಸಮಿತಿ ಅಧ್ಯಕ್ಷರಾಗಿರುವ ಶಾಸಕರು ಗಮನಹರಿಸಬೇಕೆಂದರು.

ನಂತರ ಜುಟ್ಟನಹಳ್ಳಿ ಪಂಚಾಯಿತಿಯ ಮೂವರು ಸ್ವಯಂ ಸೇವಕರಿಗೆ ಆರೋಗ್ಯ ಹಸ್ತ ಕಿಟ್‌ ನೀಡಿ, ಸಾಂಕೇತಿಕವಾಗಿ ಕೆಲ ಮನೆಗಳಿಗೆ ತೆರಳಿ ಜನರ ದೇಹದ ಉಷ್ಣಾಂಶ ಪರೀಕ್ಷಿಸಲಾಯಿತ್ತು.

ಕೆಪಿಸಿಸಿ ವೀಕ್ಷಕರಾದ ಸಂಜಯ್‌ಗೌಡ, ಕಮಲಾಕ್ಷಿರಾಜಣ್ಣ, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ, ತಾ.ಪ.ಅಧ್ಯಕ್ಷೆ ಶ್ಯಾಮಲಾ, ಸದಸ್ಯೆ ಪ್ರಮೀಳಾ, ಮುಖಂಡರಾದ ಎಂ.ಕೆ.ಮಂಜೇಗೌಡ, ಹೆಚ್‌.ಸಿ.ದೀಪು, ಪಿ.ಎ.ನಾಗರಾಜ್‌ ಸೇರಿ ಇತರರು ಇದ್ದರು.

Follow Us:
Download App:
  • android
  • ios