ಗೋಕಾಕ(ಮಾ.06): 'ಇದು ರಾಜಕೀಯ ಷಡ್ಯಂತ್ರ, ಈ ಕೇಸ್‌ನಲ್ಲಿ ರಮೇಶಣ್ಣ ಗೆದ್ದು ಬರ್ತಾರೆ’ ಎಂದು ಉದ್ಯಮಿ, ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ ಹೇಳಿದ್ದಾರೆ. 

ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮೊದಲ ಬಾರಿ ಪ್ರತಿಕ್ರಿಯಿಸಿದ ಅವರು, ಸೋದ​ರ ರಮೇಶ್‌ ಅವರನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ನಕಲಿ ಸಿ.ಡಿ. ಮಾಡಲಾಗಿದೆ. ರಾಜಕೀಯವಾಗಿ ಬೆಳೆಯುವ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಆದ​ರೆ, ಇದರಲ್ಲಿ ವಿರೋಧಿಗಳು ಯಶಸ್ವಿಯಾಗುವುದಿಲ್ಲ ಎಂದರು.

ರಾಸಲೀಲೆ ವಿಡಿಯೋ ಹಿಂದೆ ಕನಕಪುರ, ಬೆಳಗಾವಿಯ ಷಡ್ಯಂತ್ರ: ಹೊಸ ಬಾಂಬ್

ಕ್ಷೇತ್ರದ ಜನ ಅವ​ರನ್ನು ರಮೇಶಣ್ಣ ಎಂದು ಕರೆಯುತ್ತಾರೆ. ಅವರು ಹೀಗೆ ಮಾಡುತ್ತಾ​ರೆ ಅಂತ ಯಾರಿಗೂ ಅನಿಸುವುದಿಲ್ಲ. ರಮೇಶಣ್ಣನನ್ನು ಕ್ಷೇತ್ರದ ಜನ ಬಿಟ್ಟು ಕೊಡೋಕೆ ತಯಾರಿಲ್ಲ ಹಾಗೂ ಕ್ಷೇತ್ರದ ಜನ ಇದನ್ನು ನಂಬಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಮೊದಲಿಂದಲೂ ಜಾರಕಿಹೊಳಿ ಸೋದ​ರರು ಒಂದಾಗಿ ಹೋಗುತ್ತಿ​ದ್ದೇ​ವೆ. ಜನರನ್ನೂ ಸರಿ ಸಮನಾಗಿ ನೋಡಿ​ಕೊಂಡು ಸಾಗುತ್ತಿದ್ದೇವೆ. ಇದು ಕೆಲವೇ ದಿನಗಳ ಕಹಿ ಘಟನೆ. ಮತ್ತೆ ರಮೇಶಣ್ಣನಿಗೆ ಒಳ್ಳೆಯ ದಿನಗಳು ಬರುತ್ತವೆ. ಇಂದು ಮೋಡ ಕವಿದ ವಾತಾವರಣದ ನಿರ್ಮಾಣ ಆಗಿದೆ, ಮೋಡ ಹೋದ ಮೇಲೆ ಬೆಳದಿಂಗಳು ಬಂದೇ ಬರುತ್ತ​ವೆ. ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಕೆಲಸ ಮಾಡಿವೆ. ನಾನು ಸೋದ​ರ​ನ ಬೆಂಬಲಕ್ಕಿದ್ದೇನೆ ಎಂದ​ರು ಲಖ​ನ್‌.