ಬೆಂಗಳೂರು, (ಮಾ.06): ರಮೇಶ್ ಜಾರಕಿಹೊಳಿ ಅವರ ವಿರುದ್ಧದ ರಾಸಲೀಲೆ ವಿಡಿಯೋ ಹಿಂದೆ ಕನಕಪುರದ ಷಡ್ಯಂತ್ರವಿದೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಿಡಿ ಪ್ರಕರಣಕ್ಕೆ ಕನಕಪುರ ಮತ್ತು ಬೆಳಗಾವಿ ಕಡೆಯವರು ಕಾರಣ. ಈ ವಿಡಿಯೋ ಬರಲು ಕನಕಪುರ, ಬೆಳಗಾವಿಯವರೇ ಕಾರಣ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.

ಜಾರಕಿಹೊಳಿ ಕೇಸಲ್ಲಿ 5 ಕೋಟಿ ರೂ ಡೀಲ್, CD ಸ್ಕ್ಯಾಂಡಲ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಕುಮಾರಣ್ಣ!

ಮೈತ್ರಿ ಸರ್ಕಾರ ಬೀಳಿಸಿದ ಕಾರಣ ಕೆಲವರು ಷಡ್ಯಂತ್ರ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ‌ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ರಾಜಕೀಯ ಷಂಡ್ಯಂತ್ರದಿಂದ ನಡೆದಿದೆ. ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ ಎಂದು ಯೋಗೇಶ್ವರ್ ಹೇಳಿದರು.

ಆರು‌ ಜನ ಸಚಿವರು ಯಾಕೆ ಕೋರ್ಟ್ ಗೆ ಹೋಗಿದ್ದಾರೋ ಗೊತ್ತಿಲ್ಲ. ಆ ಸಚಿವರನ್ನೇ ಕೇಳಬೇಕು. ಅವರ ವೈಯಕ್ತಿಕ ರಕ್ಷಣೆಗೆ ಕೋರ್ಟ್ ಮೊರೆ ಹೊಗಿರಬಹುದು. ಯಾರು ಕೋರ್ಟ್ ಮೊರೆ ಹೋಗಿದ್ದಾರೋ ಅವರನ್ನೇ ಕೇಳಿ ಎಂದರು.