ತುಮಕೂರು [ಸೆ.09] :  ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪರ ಕಾಂಗ್ರೆಸ್ ಮುಖಂಡ ಕೆ,.ಎನ್ ರಾಜಣ್ಣ ಬ್ಯಾಟಿಂಗ್ ಮಾಡಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಸಚಿವ ಮಾಧುಸ್ವಾಮಿ ನೀಲಿ ಚಿತ್ರ ವೀಕ್ಷಿಸಿದ್ದು ಅಪರಾಧವಲ್ಲ ಎಂದಿದ್ದ, ಈಗ ಕಾಂಗ್ರೆಸ್ ನಾಯಕ ರಾಜಣ್ಣ ಸವದಿ ಪರ ಮಾತನಾಡಿದ್ದಾರೆ. 

ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳು ಬರುತ್ತವೆ. ರೋಲ್ ಮಾಡುವಾಗ ನೋಡಿರಬಹುದು. ಸವದಿಗೆ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಅವರು ಅಂತಹ ವ್ಯಕ್ತಿಯಲ್ಲ.  ಪದೇ ಪದೇ ಅವರನ್ನು ಬ್ಲೂ ಫಿಲಂ ನೋಡಿದವರು ಎನ್ನುವುದು ಸರಿಯಲ್ಲ ಎಂದರು. 

ನಿಮ್ಮ ಜಿಲ್ಲೆಯ ಬಗೆಗಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ ರಾಜಣ್ಣ, ಇಂತಹ ಮಾತುಗಳನ್ನು ಸಿದ್ದರಾಮಯ್ಯ ಹೇಳಿದರೂ ಅಷ್ಟೇ, ಯಾರು ಹೇಳಿದರೂ ಅಷ್ಟೇ, ಅದು ಸರಿಯಲ್ಲ ಎಂದರು.