ಶಾಸಕ ಎನ್‌ ಮಹೇಶ್ ವಿರುದ್ಧ ಗರಂ ಆದ ಕೈ ಮುಖಂಡ : ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ

ವಿಪಕ್ಷ ಮುಖಂಡ ಎನ್ ಮಹೇಶ್ ವಿರುದ್ಧ ಕಾಂಗ್ರೆಸ್ ಮುಖಂಡರೋರ್ವರು ಗರಂ ಆಗಿದ್ದಾರೆ.  ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಅವರು ಅನರ್ಹರು ಎಂದಿದ್ದಾರೆ. 

Congress Leader Dhruvanarayan Slams MLA N Mahesh snr

ಯಳಂದೂರು (ಡಿ.02):  ಪರಿಶಿಷ್ಟಜಾತಿ ವರ್ಗಕ್ಕೆ ಇತಿಹಾಸದಲ್ಲಿ ಕೇಳರಿಯದ ರೀತಿಯಲ್ಲಿ ಅನುದಾನ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಮಾತನಾಡಲು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅರ್ಹರಲ್ಲ ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ ಆರೋಪಿಸಿದರು.

ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ಪರಿಶಿಷ್ಟಜಾತಿ, ವರ್ಗದವರ ಕಲ್ಯಾಣಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇವರು ನೀಡಿದಷ್ಟುಅನುದಾನ ಯಾವ ಸರ್ಕಾರಗಳಲ್ಲೂ ನೀಡಿಲ್ಲ. ಈಗ ನಡೆಯುತ್ತಿರುವ ಎಸ್‌ಇಪಿ, ಟಿಎಸ್‌ಪಿ ಯೋಜನೆಗಳಿಗೆ ಇಷ್ಟುಹಣ ಹರಿಯುತ್ತಿರುವುದು ಇದರ ಕೊಡುಗೆ. ಬಡ್ತಿ ಮೀಸಲಾತಿ ವಿಚಾರದಲ್ಲಿ ತಾವೇ ಮಂತ್ರಿಯಾಗಿದ್ದು, ಶಾಸಕರಾಗಿದ್ದ ಕಾಲದಲ್ಲಿ ಚಕಾರ ಎತ್ತದ ಎನ್‌. ಮಹೇಶ್‌ ಅವರ ದಲಿತಪರ ಕಾಳಜಿ ಎಲ್ಲರೂ ಗಮನಿಸಿದ್ದಾರೆ. ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಗಳ ಅರಿವೂ ಜನರಿಗುಂಟು, ಬದಲಾವಣೆಯ ಹೆಸರಿನಲ್ಲಿ ಜನರು ಇವರಿಗೆ ಮತ ನೀಡಿದ್ದು ಇವರು ಮತದಾರರಿಗೆ ಮಾಡಿರುವ ಮೋಸದ ಅರಿವು ಮತದಾರ ಅರಿತಿದ್ದಾನೆ ಎಂದರು.

ಸಂಪುಟ ವಿಸ್ತರಣೆ : ಸುಳಿವೊಂದನ್ನು ಕೊಟ್ಟ ವಿಜಯೇಂದ್ರ ...

ಮಾಜಿ ಶಾಸಕ ಎಸ್‌. ಜಯಣ್ಣ ಮಾತನಾಡಿ, ಗ್ರಾಪಂ ಚುನಾವಣೆಗಳು ಬಂದಿದೆ. ಇದರಲ್ಲಿ ನಾವು ಕಾಂಗ್ರೆಸ್‌ ಪಕ್ಷದ ಪರ ಇರುವ ಅಭ್ಯರ್ಥಿಗಳನ್ನು ಗೆಲ್ಲಿಸುವ ಅವಶ್ಯಕತೆ ಇದೆ. ಈ ಕ್ಷೇತ್ರದಲ್ಲಿ ಪಕ್ಷ ಬಲಿಷ್ಟವಾಗಿದೆ. ಇದನ್ನು ಇನ್ನಷ್ಟುಉತ್ತಮಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಂಡಗಳನ್ನು ರಚಿಸಿಕೊಂಡು ಸೇವಾ ಮನೋಭಾವನೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ. ಮುಂದೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿದ್ದು ಇದಕ್ಕೆ ಪಕ್ಷದ ಟಿಕೆಟ್‌ ಪಡೆಯುವ ಆಕಾಂಕ್ಷಿಗಳು ಇದರಲ್ಲಿ ತಮ್ಮ ಚಾಣಕ್ಷತನ ಪ್ರದರ್ಶಿಸಿ ಪಕ್ಷದ ಪರವಾಗಿರುವ ವ್ಯಕ್ತಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಮಾತನಾಡಿ, ಈ ಭಾಗದ ಶಾಸಕ ಎನ್‌.ಮಹೇಶ್‌ ಈಗಾಗಲೇ ಒಂದು ಕಾಲನ್ನು ಬಿಜೆಪಿ ಪಕ್ಷಕ್ಕೆ ಇಟ್ಟಿದ್ದಾಗಿದೆ. ಜನರು ಇವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಅವರು ಹುಸಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಶೂನ್ಯವಾಗಿದೆ. ಚುನಾವಣೆಯಲ್ಲಿ ಹೇಳಿದ್ದ ಕೆಲಸಗಳಿಂದ ಅವರು ದೂರವಿದ್ದಾರೆ. ಈ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಪರವಾಗಿರುವ ಅಭ್ಯರ್ಥಿಗಳನ್ನು ಕಾರ್ಯಕರ್ತರು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಎಸ್‌. ಜಯಣ್ಣ, ಎಸ್‌. ಬಾಲರಾಜು, ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಜಿಪಂ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ವಡಗೆರೆದಾಸ್‌, ಮಧುವನಹಳ್ಳಿ ಶಿವಕುಮಾರ್‌ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಚ್‌.ವಿ. ಚಂದ್ರು, ತೋಟೇಶ್‌, ನಾಗರಾಜು ತಾಪಂ ಅಧ್ಯಕ್ಷ ಸಿದ್ದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆನಾಗರಾಜು, ವೆಂಕಟೇಶ್‌, ನಿರಂಜನ್‌ ಪಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಲಕ್ಷಿತ್ರ್ಮ, ಸದಸ್ಯರಾದ ವೈ.ಜಿ. ರಂಗನಾಥ, ಮಹಾದೇವನಾಯಕ, ಉಮ್ಮತ್ತೂರು ಭಾಗ್ಯ ಸೇರಿದಂತೆ ಹಲವರು ಇದ್ದರು.

Latest Videos
Follow Us:
Download App:
  • android
  • ios