ಕೊಳ್ಳೇಗಾಲ (ಡಿ.02):  ಅತಿ ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ. ರೇಣುಕಾಚಾರ್ಯ ಹಾಗೂ ಉಳಿದವರು ನೀಡುತ್ತಿರುವ ಹೇಳಿಕೆಗಳು ಸರಿ ಇದೆ. ಈ ಸಂಬಂಧ ಮುಖ್ಯಮಂತ್ರಿಗಳು ಯಾರನ್ನು ಮಂತ್ರಿ ಮಾಡಬೇಕು ಎಂಬುದನ್ನು ಎಲ್ಲರನ್ನು ಕೂರಿಸಿ ತೀರ್ಮಾನಿಸುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

ಪ್ರವಾಸಿ ಮಂದಿರದಲ್ಲಿ ಶಾಸಕ ಮಹೇಶ್‌ ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ಅಸ್ತಿತ್ವಕಳೆದುಕೊಂಡ ವಿಪಕ್ಷಗಳು ಯಡಿಯರಪ್ಪ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ನಾನು ರಸ್ತೆಯಲ್ಲಿ ಬಂದವನ ಆರೋಪಕ್ಕೆ ನಾನು ಉತ್ತರಿಸುವುದಿಲ್ಲ. ಎನ್‌.ಮಹೇಶ್‌ ಅವರು ಸರ್ಕಾರ ರಚನೆ ಸಂದರ್ಭದಲ್ಲಿ ನಮಗೆ ಸಹಕಾರ ನೀಡಿದ್ದಾರೆ. ಅವರು ಯಾವಾಗ ಬಿಜೆಪಿ ಸೇರುತ್ತಾರೆ ಎಂಬುದನ್ನು ಅವರೇ ತೀರ್ಮಾನಿಸಬೇಕು ಎಂದರು.

ಬೇಲೂರಿನಿಂದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಈಗಲೇ ಫಿಕ್ಸ್ : ಗೆಲುವು ಫಿಕ್ಸ್ ಎಂದ ವಿಜಯೇಂದ್ರ ...

ಲಂಚ ಆರೋಪ ಸಾಕ್ಷೀಕರಿಸಲಿ:  ಚೆಕ್‌ ಅಥವಾ ಆರ್‌ಟಿಜಿಎಸ್‌ ಮೂಲಕ ಲಂಚ ಪಡೆದಿದ್ದಾರೆ ಎಂಬುದಾಗಿ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದನ್ನು ಮಾಧ್ಯಮಗಳ ಮುಂದೆಯೇ ಸಾಕ್ಷೀಕರಿಸಲಿ. ಸಿದ್ದರಾಮಯ್ಯನವರು ವಕೀಲರಾಗಿದ್ದಾರೆ. ಯಾರೋ ರಸ್ತೆಯಲ್ಲಿ ಬಂದೋನು ಆರೋಪ ಮಾಡುತ್ತಾನೆ ಅಂತ ಮುಖಂಡರು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.