ಹಿಂದೂ, ಹಿಂದುತ್ವದ ಬಗ್ಗೆ ಕಾಂಗ್ರೆಸ್ ಅಸಡ್ಡೆ ಭಾವನೆ: ಜಗದೀಶ ಶೆಟ್ಟರ್‌

ಪ್ರಯಾಗರಾಜ್‌ನಲ್ಲಿ 144 ವರ್ಷಗಳ ನಂತರ ಕುಂಭಮೇಳ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕುಂಭಮೇಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಸರಿಯಲ್ಲ. ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದು ಕಾಂಗ್ರೆಸ್ ಪ್ರವೃತ್ತಿ ಎಂದು ಕಿಡಿಕಾರಿದ ಸಂಸದ ಜಗದೀಶ ಶೆಟ್ಟರ್‌ 

Congress indifference towards Hindus and Hindutva Says Belagavi BJP MP Jagadish Shettar

ಹುಬ್ಬಳ್ಳಿ(ಜ.30):  ಹಿಂದೂ, ಹಿಂದುತ್ವದ ಬಗ್ಗೆ ಕಾಂಗ್ರೆಸ್ ಅಸಡ್ಡೆಯ ಭಾವನೆ ಹೊಂದಿದೆ. ಅಲ್ಪಸಂಖ್ಯಾತರ ಮತ ಪಡೆಯುವ ಸಲುವಾಗಿ ಹಿಂದೂ ಸಂಸ್ಕೃತಿ ಕುರಿತು ಕಾಂಗ್ರೆಸ್ ನಾಯಕರು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಇವರ ವರ್ತನೆ ಹೀಗೆ ಮುಂದುವರಿದಲ್ಲಿ ಜನತೆಯೇ ದಂಗೆ ಏಳುತ್ತಾರೆ ಎಂದು ಸಂಸದ ಜಗದೀಶ ಶೆಟ್ಟರ್‌ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಗರಾಜ್‌ನಲ್ಲಿ 144 ವರ್ಷಗಳ ನಂತರ ಕುಂಭಮೇಳ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕುಂಭಮೇಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಸರಿಯಲ್ಲ. ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದು ಕಾಂಗ್ರೆಸ್ ಪ್ರವೃತ್ತಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಒಡೆದ ಮನೆ, ಬಿಜೆಪಿ ಸತ್ತ ಪಕ್ಷ : ಕೆ.ಎಸ್‌.ಈಶ್ವರಪ್ಪ ವ್ಯಂಗ್ಯ

ಮುಸ್ಲಿಮರು ಮೆಕ್ಕಾ, ಮದೀನಾಗೆ ಹೋಗುವ ವೇಳೆ ಸರ್ಕಾರ ಸೌಲಭ್ಯ ನೀಡುತ್ತದೆ. ಆದರೆ, ಹಿಂದೂ ಗಳು ತಾವೇ ಖರ್ಚು ಮಾಡಿ ಕುಂಭಮೇಳದಲ್ಲಿ ಭಾಗಿ ಯಾಗುತ್ತಿದ್ದಾರೆ. ಇದಕ್ಕೆ ನೀವೇಕೆ ಅವರ ಭಾವನಗಳಿಗೆ ಧಕ್ಕೆ ತರುತ್ತೀರಿ ಎಂದು ಹರಿಹಾಯ್ದರು.

ಹಿಂದೂ ರಾಷ್ಟ್ರ ಎಂದು ಇದ್ದರೆ ಅದು ಭಾರತ ಮಾತ್ರ. ಇಲ್ಲಿಯೂ ಹಿಂದೂಗಳಿಗೆ ಧಾರ್ಮಿಕ ಆಚರಣೆ ಮಾಡಲು ಬಿಡುವುದಿಲ್ಲ ಅಂದರೆ ಹೇಗೆ?. ಕಾಂಗ್ರೆಸ್‌ನವರು ಇದೇ ರೀತಿ ಹೇಳಿಕೆ ಕೊಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಹಿಂದೂಗಳೆಲ್ಲ ಒಂದಾಗಿ ಅವರ ವಿರುದ್ದ ದಂಗೆ ಏಳುತ್ತಾರೆ ಎಚ್ಚರ ಎಂದರು.

ಕುಂಭಮೇಳದ ವ್ಯಂಗ್ಯ, ಖರ್ಗೆ ಮನಸ್ಥಿತಿಗೆ ಕನ್ನಡಿ: ಶೆಟ್ಟರ್ ಟೀಕೆ

ಹೈಕಮಾಂಡೇ ಮದ್ದು: 

ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಆಂತರಿಕ ಗುದ್ದಾಟಕ್ಕೆ ಶೀಘ್ರವೇ ತೆರೆ ಬೀಳಲಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ.ಇಂತಹ ಹೇಳಿಕೆ, ಆರೋಪ ಸಹಜ. ಪಕ್ಷದ ಆಂತರಿಕ ಸಮಸ್ಯೆಗೆ ಹೈಕಮಾಂಡೇ ಮದ್ದು. ಶೀಘ್ರವೇ ಪಕ್ಷ ದಲ್ಲಿನ ಸಮಸ್ಯೆಗೆ ಹೈಕಮಾಂಡ್ ಪರಿಹಾರ ಕಂಡುಕೊಳ್ಳುತ್ತದೆ ಎಂದರು. 

ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಧ್ಯಕ್ಷನಾಗಲು ಬೆಂಬಲ ವಿಚಾರ ಕೇವಲ ಮಾಧ್ಯಮ ಸೃಷ್ಟಿಯಾಗಿದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತೆ. ನನ್ನ ಅನುಭವದ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios