ಗ್ರಾಪಂಗಳಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಚುಕ್ಕಾಣಿ
5 ಗ್ರಾಪಂಗಳಲ್ಲಿ 3 ಗ್ರಾಪಂ ಕಾಂಗ್ರೆಸ್ ಪಕ್ಷದ ತೆಕ್ಕೆಗೆ| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗ್ರಾಪಂ| ಆಯ್ಕೆಗೊಂಡ ಜನಪ್ರತಿನಿಧಿಗಳಿಗೆ ಮಾಲೆ ಹಾಕಿ ಗೌರವಿಸಿದ ಮಾಜಿ ಶಾಸಕ ಸತೀಶ ಸೈಲ್|
ಅಂಕೋಲಾ(ಫೆ.10): ತಾಲೂಕಿನ 5 ಗ್ರಾಪಂಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು 3 ಗ್ರಾಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರುಗಳು ಕಾಂಗ್ರೆಸ್ ಬೆಂಬಲಿತರಾಗಿದ್ದು, ಬಹಳ ಸಂತಸ ತಂದಿದೆ ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದ್ದಾರೆ.
ಸಗಡಗೇರಿ ಗ್ರಾ.ಪಂ. ಅಧ್ಯಕ್ಷರಾಗಿ ಈ ಹಿಂದೆ ಬಿಜೆಪಿಯಲ್ಲಿ ಇದ್ದ ಸೀತಾ ಸೋಮಯ್ಯಗೌಡ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಶ್ರವಣಕುಮಾರ ಮುಕುಂದ ನಾಯ್ಕ ಆಯ್ಕೆಯಾಗಿದ್ದಾರೆ.
ವಂದಿಗೆ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಪುಷ್ಪಲತಾ ಆರ್.ನಾಯಕ ಅಧ್ಯಕ್ಷರಾಗಿಯೂ, ಸತೀಶ ನಾಯಕ (ಪುಟ್ಟು ಬೊಮ್ಮಿಗುಡಿ) ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಅಗಸೂರು ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮಚಂದ್ರ ದೇವಪ್ಪ ನಾಯ್ಕ ಅಧ್ಯಕ್ಷರಾಗಿಯೂ, ಶೋಭಾಗೌಡ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.
'ಪಂಚಮಸಾಲಿ ಲಿಂಗಾಯತರಿಗೆ ಮೀಸಲು ಬೇಡ' ಸ್ವಾಮೀಜಿ ಬೌನ್ಸರ್
5 ಗ್ರಾಪಂಗಳಲ್ಲಿ ಮೊದಲ ದಿನವೇ 3 ಗ್ರಾಪಂ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿರುವುದು ಸಂತೋಷವಾಗಿದೆ. ಪಕ್ಷದಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳ ಜೊತೆಯಲ್ಲಿ ಕೆಲವೇ ಮತಗಳಿಂದ ಕೆಲವು ಸದಸ್ಯರು ಸೋಲನ್ನು ಅನುಭವಿಸಿದ್ದು, ಅವರನ್ನು ನಾನು ಗೌರವಿಸುತ್ತೇನೆ. ಈ ಗೆಲುವಿನ ಹಿಂದೆ ನನ್ನ ಪಕ್ಷದ ನಾಯಕರು, ಕಾರ್ಯಕರ್ತರುಗಳ ಸಹಕಾರ ಮತ್ತು ಪ್ರಯತ್ನವಿದೆ. ಆಡಳಿತ ಪಕ್ಷದಲ್ಲಿ ಇಲ್ಲದಿದ್ದರೂ ಜನಸಾಮಾನ್ಯರ ಸಂಕಷ್ಟಕ್ಕೆ ಧ್ವನಿಯಾಗಿ ಸ್ಪಂದಿಸುತ್ತಿರುವ ಪಕ್ಷಕ್ಕೆ ಬೆಂಬಲವನ್ನು ನೀಡಿದ ಸರ್ವರನ್ನು ಅಭಿನಂದಿಸುತ್ತೇನೆ ಎಂದರು. ಆಯ್ಕೆಗೊಂಡ ಜನಪ್ರತಿನಿಧಿಗಳಿಗೆ ಮಾಲೆ ಹಾಕಿ ಗೌರವಿಸಿದರು.
ಪ್ರಮುಖರಾದ ರಮಾನಂದ ನಾಯಕ, ಸುಜಾತಾ ಗಾಂವಕರ, ಉದಯ ನಾಯ್ಕ, ಕೆ.ಎಚ್. ಗೌಡ, ತಿಮ್ಮಣ್ಣ ನಾಯಕ ಸಗಡಗೇರಿ, ಸತೀಶಗೌಡ, ಮಂಜುನಾಥ ನಾಯ್ಕ, ಪುರುಷೋತ್ತಮ ನಾಯ್ಕ, ಸತೀಶ ನಾಯ್ಕ, ಶಾಂತಿ ಆಗೇರ, ಪಾಂಡುರಂಗಗೌಡ, ಪ್ರಕಾಶಗೌಡ, ಕಾರ್ತಿಕ ನಾಯ್ಕ ಮತ್ತು ಗ್ರಾಪಂದ ಸದಸ್ಯರುಗಳು ಉಪಸ್ಥಿತರಿದ್ದರು.