ಕಾರವಾರ(ಫೆ.  07)  ಪಂಚಮಸಾಲಿ ಲಿಂಗಾಯತರನ್ನು 2Aಗೆ ಸೇರಿಸಲು ವಿರೋಧ ವ್ಯಕ್ತವಾಗಿದೆ. ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ವಿರೋಧ ವ್ಯಕ್ತವಾಗಿದೆ.

ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ  ಸುದ್ದಿಗೋಷ್ಠಿ ನಡೆಸಿದೆ.  20ಕ್ಕೂ ಅಧಿಕ ಸಮುದಾಯಗಳ‌ ಮುಖಂಡರಿಂದ ಬೆಂಬಲ ವ್ಯಕ್ತವಾಗಿದೆ.

'ಮೀಸಲು ವಿಚಾರದಲ್ಲಿ ನಾನೇನು ಮಾಡೋಕೆ ಆಗಲ್ಲ..ಕೇಂದ್ರದವರನ್ನು ಕೇಳ್ರಿ'

ಪಂಚಮಸಾಲಿ ಲಿಂಗಾಯತರನ್ನು 2Aಗೆ ಸೇರಿಸದಂತೆ ಒತ್ತಾಯ ಮಾಡಲಾಗಿದೆ.  ಉನ್ನತ ಸ್ಥಾನಮಾನ ಗಳಿಸಿದ ಸಮುದಾಯ ಪಂಚಮಸಾಲಿ, ಬಹುಸಂಖ್ಯಾತ ಆನೆ ಕೆಳಗೆ ಬಿದ್ದರೆ ಸಣ್ಣ ಸಮುದಾಯಗಳು ಅಪ್ಪಚ್ಚಿಯಾಗುತ್ತವೆ, ಸರ್ಕಾರ ಇದನ್ನು ಗಮನಿಸಬೇಕು‌  ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು  ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ. 

ಸದನದಲ್ಲಿಯೂ ಈ ಮೀಸಲು ಚರ್ಚೆಗೆ ಬಂದಿದ್ದು. ಮೊದಲು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದಿದ್ದ ಸಿಎಂ ಯಡಿಯೂರಪ್ಪ ನಂತರ ಮಾತು ಬದಲಿಸಿದ್ದರು.