ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನ ಕೇಂದ್ರ ನಾಯಕರ ಫೋಟೋಗಳನ್ನು ಹಾಕಿ ಕೆಟ್ಟ ಪದಗಳಿಂದ ನಿಂದಿಸಿದ್ದ ಸಂಬರಗಿ| ಪ್ರಾಣಿಗಳ ಫೋಟೋಗಳಿಗೆ ಮುಖಂಡರ ಭಾವಚಿತ್ರಗ ಹೊಂದಿಸಿ ಅವಹೇಳನಕಾರಿಯಾಗಿ ಪ್ರಕಟಿಸಿದ್ದ ಪ್ರಶಾಂತ್ ಸಂಬರಗಿ|
ಬೆಂಗಳೂರು(ಡಿ.18): ಫೇಸ್ಬುಕ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ಮುಖಂಡರ ವಿರುದ್ಧ ಅವಹೇಳನಕಾರಿ ಫೋಟೋಗಳನ್ನು ಪ್ರಕಟಿಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Add Asianetnews Kannada as a Preferred Source

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನ ಕೇಂದ್ರ ನಾಯಕರ ಫೋಟೋಗಳನ್ನು ಹಾಕಿ ಕೆಟ್ಟ ಪದಗಳಿಂದ ನಿಂದಿಸಿದಲ್ಲದೆ, ಪ್ರಾಣಿಗಳ ಫೋಟೋಗಳಿಗೆ ಮುಖಂಡರ ಭಾವಚಿತ್ರಗಳನ್ನು ಹೊಂದಿಸಿ ಅವಹೇಳನಕಾರಿಯಾಗಿ ಪ್ರಕಟಿಸಿದ್ದರು.
ಯೂ ಟರ್ನ್ ಆದ ಪ್ರಕರಣ : ಸಂಬರಗಿ ವಿರುದ್ಧವೇ ಕೇಸ್
ಈ ಸಂಬಂಧ ಕಾಂಗ್ರೆಸ್ ಮುಖಂಡ ವಿಜಯ್ ಆನಂದ್ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
