ಎಸಿಪಿ ಚಂದನ್‌ಗೆ ಬೆದರಿಕೆ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು

ಮಾಜಿ ಸಂಸದರ ಟ್ವೀಟ್ ರಾಜ್ಯದ ಕಾನೂನು ಹಾಗೂ ಪೊಲೀಸ್ ಇಲಾಖೆ ಮೇಲಿಟ್ಟಿರುವ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಯಾವುದೇ ದಾಖಲೆ ಇಲ್ಲದಿದ್ದರೂ ರಾಜಕೀಯ ಉದ್ದೇಶದಿಂದ ಟ್ವೀಟ್ ಮಾಡಿದ್ದಾರೆ. ಕೂಡಲೇ‌ ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ ಲೋಹಿತ್ ಕುಮಾರ್ 
 

Complaint against former MP Pratap Simha for Threat to ACP Chandan grg

ಬೆಂಗಳೂರು(ಜು.31):  ಎಸಿಪಿ ಚಂದನ್‌ಗೆ ಟ್ವಿಟರ್ ಮೂಲಕ ಬೆದರಿಕೆ ಹಾಕಿರುವ ಆರೋಪದ ಮೇಲೆ ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗಿದೆ. 

ಆಮ್ ಆದ್ಮಿ ಯುವ ಘಟಕದ ಅಧ್ಯಕ್ಷ ಜಿ.ಹೆಚ್.ಲೋಹಿತ್ ಕುಮಾರ್ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಂಸದರ ವಿರುದ್ಧ ದೂರು ದಾಖಲಿಸಿದ್ದಾರೆ. ಪುನೀತ್ ಕೆರೆಹಳ್ಳಿಯನ್ನು ಠಾಣೆಯಲ್ಲಿ ಬೆತ್ತಲೆ ಮಾಡಿ ಮಾಡಿದ್ದಾರೆ ಎಂಬ ಮಾಹಿತಿ ಮೇಲೆ ಎಸಿಪಿ ಚಂದನ್ ಅವರಿಗೆ ಪೊಲೀಸ್ ಠಾಣೆಗೆ ನಾನು ಬರ್ತಿದ್ದೇನೆ , ನೀನು ಇರು ಎಂದು ಟ್ವಿಟರ್ ಮೂಲಕ ಪ್ರತಾಪ್ ಸಿಂಹ ಬೆದರಿಕೆ ಹಾಕಿರುತ್ತಾರೆ. 

ಪುನೀತ್ ಕೆರೆಹಳ್ಳಿಗೆ ಟಾರ್ಚರ್ ಆರೋಪ; ಪೊಲೀಸ್ ದೌರ್ಜನ್ಯ ಖಂಡಿಸಿ ನಾಳೆ ಪ್ರತಾಪ್ ಸಿಂಹ ಪ್ರತಿಭಟನೆ!

ಮಾಜಿ ಸಂಸದರ ಟ್ವೀಟ್ ರಾಜ್ಯದ ಕಾನೂನು ಹಾಗೂ ಪೊಲೀಸ್ ಇಲಾಖೆ ಮೇಲಿಟ್ಟಿರುವ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಯಾವುದೇ ದಾಖಲೆ ಇಲ್ಲದಿದ್ದರೂ ರಾಜಕೀಯ ಉದ್ದೇಶದಿಂದ ಟ್ವೀಟ್ ಮಾಡಿದ್ದಾರೆ. ಕೂಡಲೇ‌ ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಲೋಹಿತ್ ಕುಮಾರ್ ಒತ್ತಾಯಿಸಿದ್ದಾರೆ. 

Latest Videos
Follow Us:
Download App:
  • android
  • ios