Asianet Suvarna News Asianet Suvarna News

ಪುನೀತ್ ಕೆರೆಹಳ್ಳಿಗೆ ಟಾರ್ಚರ್ ಆರೋಪ; ಪೊಲೀಸ್ ದೌರ್ಜನ್ಯ ಖಂಡಿಸಿ ನಾಳೆ ಪ್ರತಾಪ್ ಸಿಂಹ ಪ್ರತಿಭಟನೆ!

ಬೆಂಗಳೂರಿಗೆ ಕಲಬೆರಕೆ ಮಾಂಸ ಸರಬರಾಜು ಆರೋಪ ಪ್ರಕರಣದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನ ಬಂಧಿಸಿ ಪೊಲೀಸರು ಟಾರ್ಚರ್ ನೀಡಿರುವ ಆರೋಪ ಕೇಳಿಬಂದ ಹಿನ್ನೆಲೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನೆಗೆ ಮುಂದಾಗಿದ್ದಾರೆ.

Former MP Pratap Simha protest  tomorrow against police officer who assault on Puneeth kerehalli in dog meat case rav
Author
First Published Jul 30, 2024, 11:55 PM IST | Last Updated Jul 31, 2024, 9:00 AM IST

ಮೈಸೂರು (ಜು.30): ಬೆಂಗಳೂರಿಗೆ ಕಲಬೆರಕೆ ಮಾಂಸ ಸರಬರಾಜು ಆರೋಪ ಪ್ರಕರಣದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನ ಬಂಧಿಸಿ ಪೊಲೀಸರು ಟಾರ್ಚರ್ ನೀಡಿರುವ ಆರೋಪ ಕೇಳಿಬಂದ ಹಿನ್ನೆಲೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ ಅವರು, ನಾಳೆ ಬೆಳಗ್ಗೆ 10 ಗಂಟೆಗೆ ಬಸವೇಶ್ವರನಗರದ ಎಸಿಪಿ ಕಚೇರಿ ಮುಂದೆ ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಯಲಿದ್ದು, ಹಿಂದೂಪರ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.

ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ; ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರಿಂದ ಹಲ್ಲೆ! ವಕೀಲ ಹೇಳಿದ್ದೇನು?

ನಾಳೆ ನಾವು ಬರ್ತೇವೆ,, ನೀವಿರಬೇಕು ಅಲ್ಲಿ!

ಕಲಬೆರಕೆ ಮಾಂಸ ದಂಧೆ ವಿರುದ್ಧ ಧ್ವನಿ ಎತ್ತಿದ್ದ ಪುನೀತ್ ಕೆರೆಹಳ್ಳಿ ಅವರನ್ನು ರಾತ್ರೋರಾತ್ರಿ ಬಂಧಿಸಿ ತಡರಾತ್ರಿವರೆಗೆ ವಿಚಾರಣೆ,ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಾಳೆ ಪ್ರತಿಭಟನೆಗೆ ಮುಂದಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಎಸಿಪಿ ಚಂದನ್ ಅವರಿಗೂ ಫೇಸ್‌ಬುಕ್ ಪೋಸ್ಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿದ್ದೀರಿ ನಾಳೆ ಸ್ಟೇಷನ್‌ಗೆ ಬರುತ್ತೇವೆ. ನೀವು ಇರಬೇಕು ಅಲ್ಲಿ ಎಂದಿರುವ ಪ್ರತಾಪ್ ಸಿಂಹ.

ಏನಿದು ಘಟನೆ?

ಜು.26ರಂದು ಸಂಜೆ ೫:೩೦ ನಿಮಿಷಕ್ಕೆ ೧೧೨ ಗೆ ಕರೆ ಮಾಡಲಾಗುತ್ತೆ. ಕಂಟ್ರೋಲ್ ನಿಂದ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಹೊಯ್ಸಳ ೩೭ ಕ್ಕೆ ಕರೆ ಮಾಡಲಾಗುತ್ತೆ. ಹೊಯ್ಸಳ ಸಿಬ್ಬಂದಿ ರೈಲ್ವೇ ನಿಲ್ದಾಣದ ಹಿಂಬದಿ ಗೇಟ್ ಗೆ ಹೋಗಿ ಪೊಲೀಸರು ಪರಿಶೀಲನೆ ಮಾಡಲಾಗಿ.ಪುನೀತ್ ಕೆರೆ ಹಳ್ಳಿ ಹಾಗೂ ಸಂಗಡಿಗರು ಐಸ್ ಬಾಕ್ಸ್ ಹಿಡಿದುಕೊಂಡು ಸೇವಿಸಲು ಯೋಗ್ಯವಲ್ಲದ  ನಾಯಿ ಮಾಂಸದ ದಂಧೆಯನ್ನ ಅಬ್ದುಲ್ ರಜಾಕ್ ನಡೆಸುತ್ತಿದ್ದಾರೆಂದು ಘೋಷಣ ಕೂಗಿದ್ದಾರೆ. ಬೆಂಗಳೂರಿನಲ್ಲಿ ಅವ್ಯವಹತವಾಗಿ ಮಾಂಸ ಕಲಬೆರಕೆ ದಂಧೆ ನಡೆಯುತ್ತಿದ್ದರೂ ಯಾವ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಈ ವೇಳೆ ಪೊಲೀಸರೊಂದಿಗೂ ವಾಗ್ವಾದ ನಡೆದಿದೆ. ಇದರಿಂದ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದು ರಾತ್ರಿಯಿಡೀ ವಿಚಾರಣೆ ನಡೆಸಿದ್ದ ಪೊಲೀಸರು ಈ ವೇಳೆ ಹಲ್ಲೆ ನಡೆಸಿರುವ ಬಗ್ಗೆ ತಿಳಿಸಿರುವ ಪುನೀತ್ ಕೆರೆಹಳ್ಳಿ. 

ಮುಸ್ಲಿಂ ವ್ಯಾಪಾರಿಗಳಿಂದಲೇ ದೂರು, ಬೇರೆ ಮಾಂಸ ಮಾರಾಟ ಆರೋಪ, ಅಬ್ದುಲ್ ರಜಾಕ್ ವಿಚಾರಣೆಗೆ ಬುಲಾವ್

ಪುನೀತ್ ಕೆರೆಹಳ್ಳಿ ಹೇಳಿದ್ದೇನು? 

ಹಲ್ಲೆಯಿಂದ ತೀವ್ರ ಅಸ್ವಸ್ಥನಾಗಿ ವಿಕ್ಟೋರಿಯಾ ಆಸ್ಪತ್ರೆಗೆ ನಸುಕಿನ ಜಾವ 4.30 ರ ಸುಮಾರಿಗೆ ಚಿಕಿತ್ಸೆಗೆ ದಾಖಲಿಸಿದ್ದ ಪೊಲೀಸರು. ಬೆಳಗ್ಗೆ ಪುನೀತ್ ಕೆರೆಹಳ್ಳಿ ಪರ ವಕೀಲ ಉಮಾಶಂಕರ್ ಭೇಟಿ ಮಾಡಿ ಘಟನೆ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಪೊಲೀಸರು ಹಲ್ಲೆ ಮಾಡಿರುವ ಬಗ್ಗೆ ತಿಳಿಸಿದ್ದ ಪುನೀತ್ ಕೆರೆಹಳ್ಳಿ.

ಪುನೀತ್ ಕೆರೆಹಳ್ಳಿ ಹೇಳುವ ಪ್ರಕಾರ, ಅಂದು ರಾತ್ರಿ ವಿಚಾರಣೆಗೆ ಕರೆದೊಯ್ದು ಎಡಗಾಲಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಇದರಿಂದ ಅವರಿಗೆ ನಡೆಯಲು ಸಾಧ್ಯವಾಗದಷ್ಟು ಪೆಟ್ಟಾಗಿದೆ. ಹಲ್ಲೆ ಮಾಡಿ ಅವರೇ ಎಫ್‌ಐಆರ್ ಮಾಡಿದ್ದಾರೆ. ನನ್ನ ಬಳಿ ಇದ್ದ ಪೆನ್‌ಡ್ರೈವ್, ಡಾಕ್ಯುಮೆಂಟ್ಸ್‌ ಕಸಿದುಕೊಂಡಿದ್ದಾರೆ. ನನ್ನನ್ನು ಪೂರ್ತಿ ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದು, ನೀನು ಪೆನ್‌ಡ್ರೈವ್ ಕೊಡ್ಲಿಲ್ಲಂದ್ರೆ ಬೆತ್ತಲೆ ವಿಡಿಯೋನಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಮಾನ ಮಾರ್ಯದೆ ಹರಾಜು ಹಾಕುತ್ತೇವೆ ಎಂದು ಪೊಲೀಸರು ಹೆದರಿಸಿ ಕೆಲವು ಡಾಕ್ಯುಮೆಂಟ್‌ಗಳಿಗೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಂಡಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೇಳೆಯೂ ನನ್ನ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದ್ದ ಪುನೀತ್ ಕೆರೆಹಳ್ಳಿ. ಹೀಗಾಗಿ ಕಲಬೆರಕೆ ಮಾಂಸ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಬದಲಾಗಿ ಧ್ವನಿ ಎತ್ತಿದವರ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಪೊಲೀಸರ ದೌರ್ಜನ್ಯ ಖಂಡಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನೆಗೆ ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios