ಮೈಸೂರು ಜಿಲ್ಲೆಯ ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜಿನಲ್ಲಿ ನಡೆದ ಘಟನೆ. 

ಮೈಸೂರು(ಫೆ.17): ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜಿನಲ್ಲಿ ನಡೆದಿದೆ. ನಮಿತಾ (16) ಮೃತ ವಿದ್ಯಾರ್ಥಿನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತ ವಿದ್ಯಾರ್ಥಿನಿ ನಮಿತಾ ವಿದ್ಯೋದಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಕಾಲೇಜಿನಲ್ಲಿ ನಡೆಯುತ್ತಿದ್ದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನಮಿತಾ ಭಾಗಿಯಾಗಿದ್ದಳು. ಬಳಿಕ ಏಕಾಏಕಿ ಕಾಲೇಜಿನಲ್ಲಿಯೇ ಪ್ರಜ್ಞೆತಪ್ಪಿ ನಮಿತಾ ಬಿದ್ದಿದ್ದಳು. 

ಬೆಡ್‌ರೂಂನಲ್ಲಿ ಮಲಗಿದ್ದ 19 ವರ್ಷದ ವಿದ್ಯಾರ್ಥಿನಿ ಸಜೀವ ದಹನ: ಕಾರಣ ನಿಗೂಢ..!

ತಕ್ಷಣ ಕಾಲೇಜು ಸಿಬ್ಬಂದಿ ತಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲೇ ನಮಿತಾ ಕೊನೆಯುಸಿರೆಳೆದಿದ್ದಾಳೆ. 

ವಿದ್ಯಾರ್ಥಿನಿ ಸಾವಿನ ಪ್ರಕರಣ ಮುಚ್ಚಿ ಹಾಕಲು ಕಾಲೇಜು ಆಡಳಿತ ಮಂಡಳಿ ಹಾಗೂ ಆಸ್ಪತ್ರೆ ಸಿಬ್ಬಂದಿ ಯತ್ನಿಸಿದ್ರಾ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಇದಕ್ಕೆಲ್ಲ ಪೊಲೀಸರು ತನಿಖೆಯಿಂದಷ್ಟೇ ನಿಖರವಾದ ಕಾರಣ ತಿಳಿದು ಬರಬೇಕಿದೆ.