ಕೋಸ್ಟ್‌ ಗಾರ್ಡ್‌ ಯೋಜನೆ ಸ್ಥಗಿತ: ರೇಂಜ್‌ ಕಮಾಂಡರ್‌ ಬಾಡ್ಕರ್‌ ಸಾರ್ವಜನಿಕರು ಒಪ್ಪಿಗೆ ನೀಡಿದರೆ ಕೋಸ್ಟ್‌ ಗಾರ್ಡ್‌ ಕೇಂದ್ರ ನಿರ್ಮಾಣ ಬೀಚ್‌ನ್ನು ನಿಷೇಧಿತ ಪ್ರದೇಶ ಮಾಡಲಾಗುತ್ತೆ ಎನ್ನೋದು ಸುಳ್ಳು

ಕಾರವಾರ (ಅ.30) : ನಗರದ ರವೀಂದ್ರನಾಥ ಟಾಗೋರ್‌ ಕಡಲ ತೀರದಲ್ಲಿ ‘ಭಾರತೀಯ ಕೋಸ್ವ್‌ ಗಾರ್ಡ್‌ ಕೇಂದ್ರ’ ನಿರ್ಮಾಣದ ಬಗ್ಗೆ ತಪ್ಪು ಮಾಹಿತಿಯಿಂದ ಸ್ಥಳೀಯರು, ಮೀನುಗಾರರು ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಈ ಯೋಜನೆ ಕೈಬಿಡಲಾಗಿದೆ. ಸಾರ್ವಜನಿಕರು ಒಪ್ಪಿಗೆ ನೀಡಿದರೆ ಕೇಂದ್ರ ನಿರ್ಮಾಣ ಮಾಡುತ್ತೇವೆ ಎಂದು ಭಾರತೀಯ ಕೋಸ್ಟ್‌ ಗಾರ್ಡ್‌ ವೆಸ್ಟರ್ನ್‌ ರೇಂಜ್‌ ಕಮಾಂಡರ್‌ ಇನ್‌ಸ್ಪೆಕ್ಟರ್‌ ಜನರಲ್‌ ಮನೋಜ ಬಾಡ್ಕರ ಹೇಳಿದರು.

ಕರಾವಳಿ ಕಾವಲು ಪಡೆಯ ಹೊಸ ಕಮಾಂಡರ್ ಆಗಿ ಕರ್ನಾಟಕದ ಮನೋಜ್ ನೇಮಕ

ತಾಲೂಕಿನ ಚೆಂಡಿಯಾ ಕೋಸ್ವ್‌ ಗಾರ್ಡ್‌ ಕೇಂದ್ರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಲ ತೀರ ನಿಷೇಧಿತ ಪ್ರದೇಶ ಮಾಡಲಾಗುತ್ತದೆ ಎನ್ನುವುದು ಸುಳ್ಳು. ಸ್ಥಳೀಯ ಜನರಿಗೆ ಏನೂ ತೊಂದರೆ ಆಗುವುದಿಲ್ಲ. ಜನರಿಗಾಗಿ, ಮೀನುಗಾರರಿಗಾಗಿ ಕೋಸ್ಟ್‌ ಗಾರ್ಡ್‌ ಇದೆ. ಕೇಂದ್ರ ನಿರ್ಮಾಣ ಮಾಡಿದರೆ ಹೋವರ್‌ ಕ್ರಾಫ್‌್ಟನಿಲ್ದಾಣ ಮಾಡಲಾಗುತ್ತದೆ ಎಂದರು.

ನೆರೆ, ಬೋಟ್‌ ಅವಘಡದ ಮೊದಲಾದ ಸಂದರ್ಭದಲ್ಲಿ ಸಹಾಯಕಾರಿಯಾಗಿದೆ. ಇಲ್ಲಿ ಹೋವರ್‌ಕ್ರಾಫ್‌್ಟಇರುವುದರಿಂದ ಕೂಡಲೇ ಕಾರ್ಯಾಚರಣೆ ಮಾಡಲು ಆಗುತ್ತದೆ. ಮಂಗಳೂರಿನಿಂದ ಹೋವರ್‌ ಕ್ರಾಫ್‌್ಟಬರುವವರೆಗೆ ಸಾಕಷ್ಟುಸಮಯ ಹಿಡಿಯುತ್ತದೆ. ಪ್ರತಿಯೊಂದು ಜೀವವು ಅಮೂಲ್ಯವಾಗಿದೆ ಎಂದರು.

ರಕ್ಷಣಾ ಕಾರ್ಯಕ್ಕೆ ಅನುಕೂಲ ಆಗುತ್ತದೆ. ಮುಖ್ಯವಾಗಿ ಮೀನುಗಾರರಿಗಾಗಿಯೇ ಕೋಸ್ವ್‌ ಗಾರ್ಡ್‌ ಇದೆ. ಜತೆಗೆ ಹೋವರ್‌ ಕ್ರಾಫ್‌್ಟನೀರಿನಿಂದ ನೆಲಕ್ಕೆ ತಂದಿಡಲು, ವಾಪಸ್‌ ನೀರಿಗೆ ಹೋಗಲು ಟಾಗೋರ್‌ ಕಡಲ ತೀರ ಉತ್ತಮವಾಗಿದೆ. ತೀರದ ಇಳಿಜಾರು ಪ್ರದೇಶ ಸಂಚಾರಕ್ಕೆ ಸೂಕ್ತವಾಗಿದೆ ಎಂದರು.

ಜನರ ವಿರೋಧ ಇರುವುದರಿಂದ ಟಾಗೋರ್‌ ತೀರದಲ್ಲಿ ಹೋವರ್‌ ಕ್ರಾಫ್‌್ಟನಿಲ್ದಾಣ ಈ ಯೋಜನೆ ಕೈಬಿಡಲಾಗಿದೆ. ಒಂದೊಮ್ಮೆ ಜನರು ಒಪ್ಪಿಗೆ ನೀಡಿದರೆ ಕೇಂದ್ರ ನಿರ್ಮಾಣ ಮಾಡುತ್ತೇವೆ. ಅಮದಳ್ಳಿಯಲ್ಲಿ ಕೋಸ್ವ್‌ ಗಾರ್ಡ್‌ ಕಚೇರಿ ನಿರ್ಮಾಣಕ್ಕೆ ಈಗಾಗಲೇ ಜಾಗ ಮಂಜೂರಾಗಿದೆ. ಮುಂದಿನ ಎರಡು ವರ್ಷದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದರು.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಸರ್ಕಾರ ತುರಾಯಿ (ಸೆಟ್‌ಲೈಟ್‌) ಮೊಬೈಲ್‌ ನಿಷೇಧಿಸಿದೆ. ಆದರೆ ಹೊರ ದೇಶದಿಂದ ಬರುವ ವ್ಯಾಪಾರಿ ಹಡಗುಗಳಿಗೆ ಈ ಮಾಹಿತಿ ಇಲ್ಲ. ದೇಶದ ಒಳಗೆ ಬರುವಾಗ ತುರಾಯಿ ಫೋನ್‌ ಬಳಕೆ ಮಾಡಬಾರದು. ಅದನ್ನು ಒಳಗಿಟ್ಟು ಸೀಲ್‌ ಮಾಡಬೇಕು. ಮಾಹಿತಿ ಇಲ್ಲದೇ ತುರಾಯಿ ಸೆಟ್‌ ಉಪಯೋಗಿಸುತ್ತಾರೆ. ಈ ರೀತಿ ಬಳಕೆ ಮಾಡಿರುವುದು ಕೇಂದ್ರದ ತಂಡಕ್ಕೆ ತಿಳಿದು ಬಂದಾಗ ಕೋಸ್ವ್‌ ಗಾರ್ಡ್‌ಗೆ ಮಾಹಿತಿ ನೀಡುತ್ತಾರೆ. ಆ ವೇಳೆ ಅಲ್ಲಿಗೆ ತೆರಳಿ ತಂಡ ಪರಿಶೀಲಿಸಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ನ್ಯಾಯಾಲಯ ದಂಡ ಕೂಡ ವಿಧಿಸಿದೆ. ಎಲ್ಲವೂ ತುರಾಯಿ ಕರೆ ಆಗಿರುವುದಿಲ್ಲ ಎಂದು ಹೇಳಿದರು.

ಕಾರವಾರದ ಬೈತಖೋಲ್‌ ಕಡಲ ತೀರದಲ್ಲಿ ಕೋಸ್ವ್‌ ಗಾರ್ಡ್‌ ಗಸ್ತು ಬೋಟ್‌ ನಿಲ್ಲುತ್ತದೆ. ಇದನ್ನು ಬದಲಿಸಿ ಅಲೆ ತಡೆಗೋಡೆ (ಬ್ರೇಕ್‌ ವಾಟರ್‌) ಸಮೀಪ ಜಟ್ಟಿನಿರ್ಮಾಣ ಮಾಡಿಕೊಂಡು ಅಲ್ಲಿ ನಿಲ್ಲಿಸಲಾಗುತ್ತದೆ. ಇದರಿಂದ ಮೀನುಗಾರರಿಗೆ ಅನುಕೂಲ ಆಗಲಿದೆ ಎಂದ ಅವರು, ಮಾದಕ ವಸ್ತು ಬಗ್ಗೆ ಕೇಳಿದಾಗ, ದೇಶದ ಹಲವಾರು ಕಡೆ ಸಮುದ್ರದ ಮೂಲಕ ಮಾದಕ ವಸ್ತು ತರುವಾಗ ಕಾರ್ಯಾಚರಣೆ ಮಾಡಿ ಬಂಧಿಸಲಾಗಿದೆ ಎಂದರು. ಕಾರವಾರ ಕೇಂದ್ರದ ಕಮಾಂಡರ್‌ ಸುರೇಶ ಕುರುಪ್‌ ಇದ್ದರು.

ಉದ್ಯೋಗಾವಕಾಶ ಸೃಷ್ಟಿಯಾಗಲಿ

ಕಾರವಾರದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಬೇಕು. ಸ್ಥಳೀಯವಾಗಿ ಕೈಗಾರಿಕೆಗಳು ಬರಬೇಕು ಎಂದು ಮನೋಜ ಬಾಡ್ಕರ ಹೇಳಿದರು. ಈ ನೆಲದ ಮಗನಾಗಿ ಇಲ್ಲಿನ ಜನರ ಕಳಕಳಿಯಿಂದ ಮಾತನಾಡಿದ ಅವರು, ಉದ್ಯೋಗ ಅರಸಿ ಬೇರೆ ಕಡೆಗೆ ಯುವಜನತೆ ವಲಸೆ ಹೋಗುತ್ತಿದ್ದಾರೆ. ಇಲ್ಲಿಯೇ ಪರಿಸರ ಪೂರಕ ಕೈಗಾರಿಕೆಗಳು ಬಂದರೆ ಯುವಜನತೆ ನಮ್ಮ ಊರನ್ನು ತೊರೆಯುವುದಿಲ್ಲ. ಜತೆಗೆ ಅಭಿವೃದ್ಧಿ ಕೂಡ ಆಗುತ್ತದೆ ಎಂದು ಅಭಿಪ್ರಾಯಿಸಿದರು.

ಕರಾವಳಿ ಉದ್ದಕ್ಕೂ ರಾಡಾರ್‌ ಕಣ್ಗಾವಲು

ದೇಶದ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಕರಾವಳಿ ಉದ್ದಕ್ಕೂ ರಾಡಾರ್‌ ಕಣ್ಗಾವಲು ಅಳವಡಿಸಲು ಕೋಸ್ವ್‌ ಗಾರ್ಡ್‌ ಮುಂದಾಗಿದೆ. ಉಗ್ರ ಕಸಬ್‌ ನೇತೃತ್ವದಲ್ಲಿ ಮುಂಬೈನಲ್ಲಿ 2011ರಲ್ಲಿ ದಾಳಿ ನಡೆದ ಬಳಿಕ ರಕ್ಷಣಾ ಇಲಾಖೆ ಸಾಕಷ್ಟುತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದರ ಭಾಗವಾಗಿ ಕೋಸ್ವ್‌ ಗಾರ್ಡ್‌ ಕೂಡ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಭಾರತ ಸರ್ಕಾರ ಕೋಸ್ಟಲ್‌ ಸೆಕ್ಯುರಿಟಿ ಮೆಕ್ಯಾನಿಸಂ ನಿರ್ಮಾಣ ಮಾಡಿಕೊಂಡಿದೆ. ಯಾವುದೇ ಹಡಗು, ಮೀನುಗಾರಿಕಾ ಬೋಟ್‌ ಸಾಗಿದರೂ ಕೋಸ್ಟಲ್‌ ಚೇನ್‌ ಆಫ್‌ ಸ್ಟ್ಯಾಟಿಕ್‌ ಸೆನ್ಸಾರ್‌ ಮೂಲಕ ತಿಳಿದುಕೊಳ್ಳಬಹುದು. ಸಮುದ್ರದಲ್ಲಿ ಪ್ರತಿ 30 ಮೈಲಿ ದೂರದಲ್ಲಿ ರಾಡಾರ್‌ ಕೇಂದ್ರ ನಿರ್ಮಿಸಿಕೊಂಡು ಅಲ್ಲಿನ ಆಗು-ಹೋಗುಗಳ ಬಗ್ಗೆ ನಿಗಾ ಇಡಲು ಸನ್ನದ್ಧವಾಗಿದೆ.

ಫೇಸ್‌ ಒಂದರಲ್ಲಿ 46 ರಾಡಾರ್‌ ಕೇಂದ್ರ ನಿರ್ಮಾಣ ಮಾಡಲಾಗಿದ್ದು, ಕರ್ನಾಟಕ ಭಟ್ಕಳ ಹಾಗೂ ಸುರತ್ಕಲ್‌ನಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭವಾಗಿದೆ. ಫೇಸ್‌ 2ರಲ್ಲಿ ಹೊನ್ನಾವರ ಹಾಗೂ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಈ ವರ್ಷದ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.

ವಿಶೇಷತೆ:

ಈ ತಂತ್ರಜ್ಞಾನದಲ್ಲಿ ಅತ್ಯುನ್ನತ ಗುಣಮಟ್ಟದ ಕ್ಯಾಮೆರಾ, ರಾಡಾರ್‌ ಇರುತ್ತದೆ. ಕೇಂದ್ರ ಸ್ಥಳದಿಂದ ಸಮುದ್ರದಲ್ಲಿ ಗರಿಷ್ಠ 60 ನಾಟಿಕಲ್‌ ಮೈಲಿ ದೂರದವರೆಗೆ ವೀಕ್ಷಣೆ ಮಾಡಬಹುದಾಗಿದೆ. ಅನುಮಾನಾಸ್ಪದವಾಗಿ, ಅನುಮತಿ ಇಲ್ಲದೇ ಹಡಗು ಅಥವಾ ವ್ಯಕ್ತಿ ಸಮುದ್ರದ ಮೂಲಕ ದೇಶದ ಗಡಿಯನ್ನು ದಾಟಿ ಬಂದರೆ ಈ ರಾಡಾರ್‌ ವ್ಯವಸ್ಥೆಯ ಮೂಲಕ ತಿಳಿದುಕೊಳ್ಳಲು ಸಹಕಾರಿಯಾಗಿದೆ. 2011ರಲ್ಲಿ ಮುಂಬೈಗೆ ಭಯೋತ್ಪಾದಕರು ಹಡಗಿನ ಮೂಲಕವೇ ಭಾರತ ಪ್ರವೇಶಿಸಿದ್ದು, ಹೀಗಾಗಿ ನಿಗಾ ವಹಿಸಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದೆ.

Uttara Kannada: ವಿಷ ಪ್ರಾಷಣದಿಂದ 2 ದನ, 1 ಎತ್ತು ಸಾವು: 5 ಆಕಳು, 2 ಎತ್ತು ಅಸ್ವಸ್ಥ

ಮೊಬೈಲ್‌ ರಾಡಾರ್‌ (ಟ್ರಕ್‌) ಕೂಡ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಿಗದಿತ ಪ್ರದೇಶದಲ್ಲಿ ನಿರ್ಮಾಣವಾದ ರಾಡಾರ್‌ ರಿಪೇರಿ ಇದ್ದಲ್ಲಿ, ಅಲ್ಲಿಗೆ ಹೋಗಿ ದುರಸ್ತಿ ಮಾಡಲಾಗುತ್ತದೆ. ಟ್ರಕ್‌ನಲ್ಲಿ ನಿರ್ವಹಣೆಗೆ ಅಗತ್ಯ ಸೌಕರ್ಯಗಳನ್ನು ಇರಿಸಲಾಗುತ್ತದೆ.

ಆಧುನಿಕ ತಂತ್ರಜ್ಞಾನ ಒಳಸಿಕೊಂಡು ದೇಶದ ಭದ್ರತೆಗೆ ಕೋಸ್ವ್‌ ಗಾರ್ಡ್‌ ಮುಂದಾಗಿದೆ. ಇದರ ಅಂಗವಾಗಿ ರಾಡಾರ್‌ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ದೇಶದ ಕರಾವಳಿ ಭಾಗದಲ್ಲಿ ಈ ಯೋಜನೆ ರೂಪಿಸಲಾಗಿದೆ. ರಾಡಾರ್‌ ಕೇಂದ್ರದ ಎರಡನೇ ಹಂತಗಳಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

-ಮನೋಜ ಬಾಡ್ಕರ, ಭಾರತೀಯ ಕೋಸ್ಟ್‌ ಗಾರ್ಡ್‌ ವೆಸ್ಟರ್ನ್‌ ರೇಂಜ್‌ ಕಮಾಂಡರ ಇನ್‌ಸ್ಪೆಕ್ಟರ್‌ ಜನರಲ್‌