ಉತ್ತರ ಕರ್ನಾಟಕದ ಬಿಜೆಪಿ ಶಾಸಕರ ಸಭೆಯನ್ನು ಗುರುವಾರ ನಡೆಸಲಾಗುವುದು. ಉತ್ತರ ಕರ್ನಾಟಕದ ಕುರಿತು ಸದನದಲ್ಲಿ ಪ್ರಸ್ತಾಪಿಸಬೇಕಾದ ಅಗತ್ಯ ಮಾಹಿತಿಗಳ ಕುರಿತು ಸಮಾಲೋಚನೆ ನಡೆಸಲಾ ಗುವುದು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚೆ ನಡೆಸಲು ಸಭೆಯು ಸಹಕಾರಿಯಾಗಲಿದೆ: ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ 

ಬೆಂಗಳೂರು(ನ.27): ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಬಳಸಿಕೊಂಡು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ರೂಪಿಸುವ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜತೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ ಸಭೆ ನಡೆಸಲು ತೀರ್ಮಾನಿಸಿದ್ದಾರೆ. 

ಮಂಗಳವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಶೋಕ್, ಇದೇ ಶನಿವಾರ ವಿಧಾನಸೌಧದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮತ್ತು ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದರು. 

ಆಪರೇಷನ್‌ ಹಸ್ತ: ಯೋಗೇಶ್ವರ್‌ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ಸಾಥ್‌!

ಈ ನಡುವೆ, ಉತ್ತರ ಕರ್ನಾಟಕದ ಬಿಜೆಪಿ ಶಾಸಕರ ಸಭೆಯನ್ನು ಗುರುವಾರ ನಡೆಸಲಾಗುವುದು. ಉತ್ತರ ಕರ್ನಾಟಕದ ಕುರಿತು ಸದನದಲ್ಲಿ ಪ್ರಸ್ತಾಪಿಸಬೇಕಾದ ಅಗತ್ಯ ಮಾಹಿತಿಗಳ ಕುರಿತು ಸಮಾಲೋಚನೆ ನಡೆಸಲಾ ಗುವುದು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚೆ ನಡೆಸಲು ಸಭೆಯು ಸಹಕಾ ರಿಯಾಗಲಿದೆ ಎಂದು ಹೇಳಿದರು. 

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಕ್ಸ್ ಮಂಡಳಿಯ ಭೂ ಕಬಳಿಕೆ, ಬಿಪಿಎಲ್ ಕಾರ್ಡ್ ರದ್ದು, ಮುಡಾ ಹಗರಣ ಸೇರಿದಂತೆ ಸರ್ಕಾರ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು. ರಾಜ್ಯ ಸರ್ಕಾರದ ನಡೆಯಿಂದಾಗಿ ಜನತೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ವಕ್ಸ್ ಮಂಡಳಿಯ ಕ್ರಮದಿಂದ ರೈತಾಪಿ ವರ್ಗ, ಮಠಗಳು ಭೂಮಿ ಕಳೆದುಕೊಳ್ಳುವ ಆಂತಕಕ್ಕೊಳಗಾಗಿವೆ. ಅಲ್ಲದೇ, ಬಿಪಿಎಲ್ ಕಾರ್ಡ್ ರದ್ದು ಮಾಡಿ ಗ್ಯಾರಂಟಿ ಯೋಜನೆಗೆ ಹಣ ಉಳಿಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ವೈಫಲ್ಯ ಸದನದಲ್ಲಿ ಪ್ರಸ್ತಾಪಿಸಿ ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಇದು ಗುರುವಾರದ ಸರ್ಕಾರ: ಅಶೋಕ್

ರಾಜ್ಯ ಕಾಂಗ್ರೆಸ್‌ ಸರ್ಕಾರವು 'ಗುರುವಾರದ ಸರ್ಕಾರ' ಎಂದು ಅಶೋಕ್ ಲೇವಡಿ ಮಾಡಿದರು. ಸಚಿವರು ಕೇವಲ ಒಂದು ದಿನ (ಗುರುವಾರ) ಮಾತ್ರ ಆಡಳಿತ ಕೇಂದ್ರಕ್ಕೆ (ವಿಧಾನಸೌಧಕ್ಕೆ) ಬರುತ್ತಾರೆ. ಒಂದು ದಿನ ಮಾತ್ರ ಸಚಿವರು, ಅಧಿಕಾರಿಗಳು ಸಭೆ ಮಾಡುತ್ತಾರೆ. ಇನ್ನುಳಿದಂತೆ ಆಡಳಿತ ಕೇಂದ್ರದಲ್ಲಿ ಸಚಿವರು ಕಾಣಸಿಗುವುದಿಲ್ಲ ಎಂದರು.

ಅಪರೇಷನ್‌ ಹಸ್ತ: ಕಾಂಗ್ರೆಸ್‌ಗೆ ಹೋಗಲು ನಾವು ಹಸಿದು ಕೂತಿಲ್ಲ, ಜೆಡಿಎಸ್‌ ಶಾಸಕರ ಕಿಡಿ

ಶಿವಮೊಗ್ಗ/ತಾಳಿಕೋಟೆ/ತುಮಕೂರು: ನಾಪಕ್ಷ ಟಾಸ್ಕ್ ಕೊಟ್ಟರೆ ಜೆಡಿಎಸ್‌ನ ಎಲ್ಲಾ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರಲು ಸಿದ್ದ ಎಂಬ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವ‌ರ್ ಹೇಳಿಕೆಗೆ ಇದೀಗ ಜೆಡಿಎಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ನಾವೇನು ಕಾಂಗ್ರೆಸ್‌ಗೆ ಹೋಗಲು ಹಸಿದು ಕೂತಿಲ್ಲ, ಯೋಗೇಶ್ವರ್ ಅವರನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ, ನಮ್ಮನ್ನೇನೂ ಖರೀದಿ ಮಾಡಲು ಆಗಲ್ಲ ಎಂದು ಜೆಡಿಎಸ್ ಶಾಸಕರಾದ ಶಾರದಾ ನಾಯಕ್, ರಾಜುಗೌಡ ಪಾಟೀಲ, ಎ.ಟಿ.ಕೃಷ್ಣಪ್ಪ ತಿರುಗೇಟು ನೀಡಿದ್ದಾರೆ.

ಗೌಡರ ಕುಟುಂಬದಿಂದ ಆಚೆ ಬರಲು ಒಕ್ಕಲಿಗ ಸಮುದಾಯ ತೀರ್ಮಾನಿಸಿದೆ: ಯೋಗೇಶ್ವ‌ರ್

ಮಂಗಳವಾರ ಮಾತನಾಡಿದ ಅವರು, ಜೆಡಿಎಸ್ ಶಾಸಕರು ಪಕ್ಷ ನಿಷ್ಠೆಯಾಗಿ ಸಂವಿಧಾನಬದ್ದರಾಗಿದ್ದೇವೆ ಎಂದು ತಾಳಿ ಕೋಟೆ ಶಾಸಕ ರಾಜುಗೌಡ ಪಾಟೀಲ ತಿರುಗೇಟು ನೀಡಿದ್ದಾರೆ. 
ಇನ್ನು ನಾವು ನಿಮ್ಮನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದ್ದಾರೆ. ನಾವು ಜಿ.ಟಿ.ದೇವೇಗೌಡರ ರೀತಿ ಗೆದ್ದಿದ್ದೇವೆ, ಖರೀದಿ ಅಸಾಧ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.

ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಹೋಗಿದ್ದರೆ ಇಂದು ಸಚಿವರಾಗಿರುತ್ತಿದ್ದರು: ಸಿ.ಎಂ. ಇಬ್ರಾಹಿಂ

ಮೈಸೂರು: ಕಳೆದ ಚುನಾವಣೆ ವೇಳೆಯೇ ಜಿ.ಟಿ. ದೇವೇಗೌಡರು ಕಾಂಗ್ರೆಸ್ ಗೆ ಹೋಗಿದ್ದರೆ ಇವತ್ತು ಸಚಿವರಾಗಿ ಇರುತ್ತಿದ್ದರು. ನಾವೇ ಜೆಡಿಎಸ್ ಪಕ್ಷ ಬಲ ಪಡಿಸಲು ಜೆಡಿಎಸ್ ನಲ್ಲಿ ಉಳಿಸಿಕೊಂಡಿದೆ. ಈಗ ಅವರ ಕತ್ತು ಕುಯ್ಯುವ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಆರೋಪಿಸಿದರು.