Uttara Kannada: ವಿಷ ಪ್ರಾಷಣದಿಂದ 2 ದನ, 1 ಎತ್ತು ಸಾವು: 5 ಆಕಳು, 2 ಎತ್ತು ಅಸ್ವಸ್ಥ
ವಿಷ ಪ್ರಾಷಣದಿಂದ 2 ದನ, 1 ಎತ್ತು ಸಾವನಪ್ಪಿದ್ದು, 5 ಆಕಳು ಮತ್ತು 2 ಎತ್ತು ಅಸ್ವಸ್ಥವಾಗಿರುವ ಘಟನೆ ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಕೊರ್ಡಾದಲ್ಲಿ ನಡೆದಿದೆ.
ಕಾರವಾರ (ಅ.27): ವಿಷ ಪ್ರಾಷಣದಿಂದ 2 ದನ, 1 ಎತ್ತು ಸಾವನಪ್ಪಿದ್ದು, 5 ಆಕಳು ಮತ್ತು 2 ಎತ್ತು ಅಸ್ವಸ್ಥವಾಗಿರುವ ಘಟನೆ ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಕೊರ್ಡಾದಲ್ಲಿ ನಡೆದಿದೆ. ಮಮತಾ ಮಹಾಬಲೇಶ್ವರ ಗಾಳಕರ ಅವರಿಗೆ ಸೇರಿದ್ದ 1 ಎತ್ತು ಸಾವನಪ್ಪಿದ್ದು, 3 ಆಕಳು ಅಸ್ವಸ್ಥವಾಗಿವೆ. ಹಾಗೂ ಭಾರತಿ ವಿಠೋಬಾ ಗಾವಡಾ ಸಾಂಗವೆ ಅವರಿಗೆ ಸೇರಿದ 2 ದನಗಳು ಸಾವನಪ್ಪಿದ್ದು, 2 ಆಕಳು, 1 ಎತ್ತು ಅಸ್ವಸ್ಥವಾಗಿವೆ. ಜೊತೆಗೆ ಅನಂತ ನರಸಿಂಹ ಭಾಗ್ವತ್ ಅವರ ತೋಟದಲ್ಲಿ 1 ಎತ್ತು ಸತ್ತು, 4 ಜಾನುವಾರು ಅಸ್ವಸ್ಥತೆಯಿಂದ ಬಿದ್ದಿತ್ತು.
ಇನ್ನು ತೋಟದಲ್ಲಿ ದನಗಳನ್ನು ಹುಡುಕುವಾಗ ಪ್ಲಾಸ್ಟಿಕ್ ಚೀಲದಲ್ಲಿ ಯಾವುದೋ ವಿಷ ಬೆರೆಸಿದ ಅಕ್ಕಿ ಕಂಡುಬಂದಿತ್ತು. ಇದೇ ವಿಷ ಬೆರೆಸಿದ ಅಕ್ಕಿ ತಿಂದು ಜಾನುವಾರುಗಳು ಸಾವಿಗೀಡಾಗಿವೆ ಎಂದು ಆರೋಪ ಮಾಡಲಾಗಿದ್ದು, ಒಟ್ಟು 50 ಸಾವಿರ ರೂ. ಪರಿಹಾರ ಒದಗಿಸಲು ಒತ್ತಾಯಿಸಲಾಗಿದೆ. ಸದ್ಯ ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜೊಯಿಡಾ ಪಶು ವೈದ್ಯಾಧಿಕಾರಿ ಡಾ. ಮಂಜಪ್ಪ ಟಿ. ಎಸ್. ಮತ್ತು ಡಾ. ಪ್ರದೀಪ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಜೊಯಿಡಾ ಪಿ.ಎಸ್.ಐ ಮಹಾದೇವಿ ಜಿ. ನಾಯ್ಕೋಡಿ ಅವರಿಂದ ತನಿಖೆ ಮುಂದುವರಿದಿದೆ.
Uttara Kannada: ವಿಶಿಷ್ಠ ಸಂಪ್ರದಾಯಗಳೊಂದಿಗೆ ದೀಪಾವಳಿಯ ಸಂಭ್ರಮದ ಗೋಪೂಜೆ
ಕಲುಷಿತ ನೀರು ಸೇವಿಸಿ ಇಬ್ಬರ ಸಾವು: ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟು ನೂರಾರು ಜನ ಅಸ್ವಸ್ಥಗೊಂಡ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದ ಹೋತಪೇಟೆ ಗ್ರಾಮದಲ್ಲಿ ನಡೆದಿದೆ. ತೀವ್ರ ಅಸ್ವಸ್ಥಗೊಂಡ 40 ಜನರನ್ನು ತಾಲೂಕು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯರದಿಂದ ಪಾರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕಲುಷಿತಗೊಂಡಿದ್ದ ತೆರೆದ ಬಾವಿಯ ನೀರನ್ನು ಗ್ರಾಮದ ಟ್ಯಾಂಕಿಗೆ ಸಾಗಿಸಿ, ಆ ಟ್ಯಾಂಕಿನಿಂದ ನಲ್ಲಿಗಳ ಮೂಲಕ ಸರಬರಾಜಾದ ನೀರನ್ನು ಕುಡಿದಿದ್ದೇ ಇಂತಹ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಗ್ರಾಮದಲ್ಲಿ ಆರೋಗ್ಯ ಹಾಗೂ ಪಂಚಾಯತ್ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಏನಾಗಿತ್ತು?: ಸುಮಾರು 6 ಸಾವಿರ ಜನಸಂಖ್ಯೆ ಹೊಂದಿರುವ ಹೋತಪೇಟೆ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನವೂ ಹೌದು. ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಇಲ್ಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮದಲ್ಲಿ ವಾಂತಿಭೇದಿ ಕಾಣಿಸಿಕೊಂಡಿತ್ತು. ಊರ ಹೊರಗಿನ ಬಾವಿಯಿಂದ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿದ ಬಳಿಕ ಮನೆ ಮನೆಗಳಿಗೆ ನೀರು ಪೂರೈಸಲಾಗಿದೆ. ಅಲ್ಲಲ್ಲಿ ಒಡೆದು ಹೋಗಿರುವ ಪೈಪ್‌ಲೈನಗಳಲ್ಲಿ ಚರಂಡಿಗಳ ನೀರು ಸೇರಿದ್ದರೆ, ಇನ್ನೊಂದೆಡೆ ನೀರು ಪಡೆದ ಬಾವಿಯ ಸುತ್ತಮುತ್ತ ಇರುವ ಭತ್ತದ ಗದ್ದೆಗಳಲ್ಲಿನ ಕ್ರಿಮಿನಾಶಕದ ನೀರು ಇಲ್ಲಿ ಸೇರಿಕೊಂಡಿದೆ. ನೀರಿನ ಮೂಲ ಸಹ ಸ್ವಚ್ಛಗೊಳ್ಳದೇ ಇದ್ದುದರಿಂದ ಅಲ್ಲಿ ದುರ್ವಾಸನೆ, ಹೊಲಸು ಸೇರಿ ಪಕ್ಷಿಗಳ ಕಳೇಬರ ಬಿದ್ದಿದ್ದವು. ಕಲುಷಿತ ಚರಂಡಿ ನೀರು ಹಾಗೂ ಕ್ರಿಮಿನಾಶಕ ನೀರು ಸೇರಿಕೊಂಡು ಇಂತಹ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಉತ್ತರ ಕನ್ನಡ: ಸಾಲು ಸಾಲು ರಜೆ, ಬೀಚ್, ಫಾಲ್ಸ್‌ನಲ್ಲಿ ಕಿಕ್ಕಿರಿದ ಪ್ರವಾಸಿಗರು..!
ಗ್ರಾಮದ ವಯೋವೃದ್ಧೆ ಈರಮ್ಮ ಹಿರೇಮಠ (80) ಹಾಗೂ ಹೊನ್ನಪ್ಪಗೌಡ (40) ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮನೆಗಳಲ್ಲಿ ವಾಂತಿಭೇದಿ ವ್ಯಾಪಿಸಿದ ಆತಂಕ ಎದರಾಗಿದ್ದು, ಶುಕ್ರವಾರದಿಂದ ವಾಂತಿಭೇದಿ ವ್ಯಾಪಿಸತೊಡಗಿದೆ. ಇಲ್ಲಿರುವ ಉಪ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. 6 ಜನ ಸಮುದಾಯ ಆರೋಗ್ಯ ಅಧಿಕಾರಿಗಳನ್ನು, 4 ಜನ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಗ್ರಾಮದಲ್ಲೇ ಟಿಕ್ಕಾಣಿ ಹೂಡಿದ್ದಾರೆ. 108 ಅಂಬುಲೆನ್ಸ್ ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಕಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ತಿಳಿಸಿದರು.