ತುಮಕೂರು(ಜು.20): ಸರ್ಕಾರ ಉಳಿಬಾರದು, ಸರ್ಕಾರ ಉರುಳಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸನ ಸಭೆಯಲ್ಲಿ ಮಾತನಾಡೋದು ಶಾಸಕರ ಹಕ್ಕು. ಹಾಗಂತ ಸುಖಾಸುಮ್ಮನೆ ಕಾಲ ಹರಣ ಮಾಡಬಾರದು ಎಂದಿದ್ದಾರೆ.

"

ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಹಾಗಿರುವಾಗ ಸಿಎಂ ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ. ಬಿಜೆಪಿಯವರಿಗೆ ಬೈದರೇ ಮಾತ್ರ ಮುಸ್ಲಿಂರು ಕಾಂಗ್ರೆಸ್‌ಗೆ ವೋಟ್ ಹಾಕೋದು. ಹಾಗಾಗಿ ಇದು ಕಾಂಗ್ರೆಸ್-ಜೆಡಿಎಸ್ ಜಗಳವಾಗಿದ್ರೂ ಬಿಜೆಪಿಗೆ ಬೈಯೋದು ನಡೀತಾ ಇದೆ. ಯಾವುದೇ ಕಾರಣಕ್ಕೂ ಬಹುಮತ ಬರಲ್ಲ. ಈ ಸರ್ಕಾರ ಕಾಂಗ್ರೆಸ್‌ನ ಒಂದಿಬ್ಬರು ಶಾಸಕರು ಹಾಗೂ ದೇವೇಗೌಡರ ಕುಟುಂಬದವರಿಗೆ ಮಾತ್ರ ಬೇಕಾಗಿದೆ ಎಂದಿದ್ದಾರೆ.

ಜೆಡಿಎಸ್‌ನಲ್ಲಿ ಸರ್ಕಾರ ಉಳಿಯುವ ನಿರೀಕ್ಷೆ ಕ್ಷೀಣ!

ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಹೆಸರು ಹೇಳಿದರೆ ಅವರು ಅಲರ್ಟ್ ಆಗ್ತಾರೆ. ಹಾಗಾಗಿ ಅವರ ಹೆಸರು ಹೇಳಲ್ಲ. 1989ರಲ್ಲಿ 20 ಜನ ಶಾಸಕರಿಗೆ ರಾಜೀನಾಮೆ ಕೊಡಿಸಿ ದೇವೇಗೌಡರು ಎಸ್.ಆರ್. ಬೊಮ್ಮಯಿ ಸರ್ಕಾರ ಉರುಳಿಸಿದ್ರು. ಆಗ ದೇವೇಗೌಡರಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲ. ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಅಂತಾರೆ ಎಂದು ಕೆ. ಎನ್ ರಾಜಣ್ಣ ಹೇಳಿದ್ದಾರೆ.