ಕನಕಪುರ : ಕಾಂಗ್ರೆಸ್ ಶಕ್ತಿ ಕುಂದಿದೆ ಎನ್ನುವವರಿಗೆ ಇದೇ ಉತ್ತರ - ಮುಖಂಡ

  •  ಪ್ರಾಥಮಿಕ ಕೃಷಿ ಪತ್ತಿನ ಚುನಾವಣೆಯ ಫಲಿತಾಂಶವು ಮುಂದಿನ ಚುನಾವಣೆಗೆ ದಿಕ್ಸೂಚಿ
  • ಹೋಬಳಿಯಾದ್ಯಂತ ಕಾಂಗ್ರೆಸ್‌ ಶಕ್ತಿ ಕುಂದಿದೆ ಎನ್ನುವವರಿಗೆ  ಉತ್ತರ
Co operative Society Election Result is compass needle for Next election says congress Leader snr

ಕನಕಪುರ (ನ.08):  ಪ್ರಾಥಮಿಕ ಕೃಷಿ ಪತ್ತಿನ ಚುನಾವಣೆಯ (Co-operative Society Election) ಫಲಿತಾಂಶವು ಮುಂದಿನ ಚುನಾವಣೆಗೆ (Election) ದಿಕ್ಸೂಚಿಯಾಗಿದ್ದು ಹೋಬಳಿಯಾದ್ಯಂತ ಕಾಂಗ್ರೆಸ್‌ (Congress) ಶಕ್ತಿ ಕುಂದಿದೆ ಎನ್ನುವವರಿಗೆ  ಉತ್ತರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಜಗದೀಶ್‌ ಗೌಡ (Jagadish Gowda) ಹೇಳಿದರು.

ತಾಲೂಕಿನ ಹಾರೋಹಳ್ಳಿ (Harohalli) ಹೋಬಳಿಯ ಕಗ್ಗಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರು ಜಯಗಳಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಜೆಡಿಎಸ್‌ನ (JDS) ಭದ್ರಕೋಟೆಯಾಗಿದ್ದ ಈ ಭಾಗದಲ್ಲಿ ನಮ್ಮ ಪಕ್ಷದ ಬೆಂಬಲಿತ ನಿರ್ದೇಶಕರ ಆಯ್ಕೆಗೆ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರು ಸೇರಿದಂತೆ ಹೋಬಳಿಯ ಮುಖಂಡರು ಶ್ರಮಿಸಿದ್ದು ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು.

ತಾಲೂಕಿನ ಹಾರೋಹಳ್ಳಿಯ ಕಗ್ಗಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ (Election) ನಿಗದಿಯಾಗಿತ್ತು . 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 32 ನಾಮ ಪತ್ರಗಳು ಸಲ್ಲಿಕೆ ಯಾಗಿದ್ದವು.

ಸುಮಾರು 1225 ಕ್ಕೂ ಹೆಚ್ಚು ಮತದಾರರಿದ್ದು1173 ಮತ ಚಲಾವಣೆಯಾಗಿದ್ದವು. 12 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬ​ಲಿ​ತ​ರಾದ ಕೃಷ್ಣಪ್ಪ, ರಂಗನಾಥ್‌, ಸೂರ್ಯ ನಾರಾಯಣ ಗೌಡ ,ಬಿ.ಎಂ.ಮುದ್ದುಕೃಷ್ಣ , ಕೆ.ಜಿ.ರವಿ, ಜಿ.ಎಂ.ಮುದ್ದೇಗೌಡ, ಮುನಿರಾಜು,ಯಶೋಧಮ್ಮ,ಸರಸ್ವತಿ ಸೇರಿ 9 ನಿರ್ದೇಶಕರು,ಜೆಡಿಎಸ್‌ನ ಜಿ.ಕೆ.ಉಮಾ ಶಂಕರ್‌ , ಕಾಡೇಗೌಡ, ಶಿವರುದ್ರಮ್ಮ ಸೇರಿದಂತೆ ಜೆಡಿಎಸ್‌ ನ 3 ಬೆಂಬಲಿಗರು ಆಯ್ಕೆಯಾದರು.

ಬಮೂಲ್ (BAMUL) ನಿರ್ದೇಶಕ ಎಚ್‌.ಎಸ್‌.ಹರೀಶ್‌ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆಸಿಬಿ ಅಶೋಕ, ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್‌ , ಸದಸ್ಯೆ ನಂದಿನಿ ಶಿವಲಿಂಗಯ್ಯ, ಹಿರಿಯ ಮುಖಂಡ ಈಶ್ವರ್‌ , ಸುರೇಶ್‌, ಜಯರಾಮ್, ಪ್ರಕಾಶ್‌, ಪಂಚೆ ಕೃಷ್ಣಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಉಪ ಚುನಾವಣೆ ದಿಕ್ಸೂಚಿ ಎಂದ ಡಿಕೆ ಶಿವಕುಮಾರ್ :  ಹಾನಗಲ್‌ (Hanagal) ಮತ್ತು ಸಿಂದಗಿ ಉಪಚುನಾವಣೆ (Sindagi By election) ಫಲಿತಾಂಶ ಇಡೀ ಬಿಜೆಪಿ (BJP) ಹಾಗೂ ರಾಜ್ಯ ಸರ್ಕಾರಕ್ಕೆ (Karnataka Govt) ಆಗಿರುವ ಮುಖಭಂಗ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರುವುದರ ಸ್ಪಷ್ಟ ಮುನ್ಸೂಚನೆ ಅಷ್ಟೇ ಅಲ್ಲ, ದೇಶದಲ್ಲಿ ಬಿಜೆಪಿಯ (BJP) ವರ್ಚಸ್ಸು ಕುಸಿಯುತ್ತಿರುವ ಸಂಕೇತ ಕೂಡ ಹೌದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (KPCC President DK Shivakumar) ಹೇಳಿದ್ದರು.

ಉಪಚುನಾವಣೆ ಫಲಿತಾಂಶದ ಬಗ್ಗೆ  ತಿಕ್ರಿಯೆ ನೀಡಿದ ಅವರು, 2018ರ ಚುನಾವಣೆಯಲ್ಲಿ ಹಾನಗಲ್‌ನಲ್ಲಿ ಬಿಜೆಪಿ, ಸಿಂದಗಿಯಲ್ಲಿ ಜೆಡಿಎಸ್‌  (JDS) ಗೆದ್ದಿತ್ತು. ಆದರೆ, ಈಗಿನ ಉಪ ಚುನಾವಣೆಯಲ್ಲಿ ಸಿಂದಗಿಯಲ್ಲಿ ಬಿಜೆಪಿ, ಹಾನಗಲ್‌ನಲ್ಲಿ ಕಾಂಗ್ರೆಸ್‌ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಸಿಂದಗಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಈಗ ದುಪ್ಪಟ್ಟು ಮತ ಪ್ರಮಾಣ ಹೆಚ್ಚಿಸಿಕೊಂಡು ಎರಡನೇ ಸ್ಥಾನಕ್ಕೇರಿದೆ. ಇದೆಲ್ಲವನ್ನೂ ನೋಡಿದಾಗ ಜನ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ನೀಡಿದ್ದು, ಇದು ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆಯಾಗಿದೆ ಎಂದು ವ್ಯಾಖ್ಯಾನಿಸಿದರು.

ಬಿಎಸ್‌ವೈ (BS Yediyurappa) ಕಣ್ಣೀರಲ್ಲಿ ಬಿಜೆಪಿ ಪತನ: ಉಪಚುನಾಣೆ ಫಲಿತಾಂಶ ಕೇವಲ ಮುಖ್ಯಮಂತ್ರಿ ಅವರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇಡೀ ಬಿಜೆಪಿ, ಬಿಜೆಪಿ ಸರ್ಕಾರಕ್ಕೆ ಆಗಿರುವ ಮುಖಭಂಗ. 2023ರ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಬಿಜೆಪಿ ಹಾಗೂ ಆ ಪಕ್ಷದ ಸರ್ಕಾರ ಕೊಚ್ಚಿ ಹೋಗಲಿದೆ ಎಂಬ ಈ ಹಿಂದೆ ನಾನು ಹೇಳಿದ್ದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಶಿವಕುಮಾರ್‌ ಹೇಳಿದರು.

Latest Videos
Follow Us:
Download App:
  • android
  • ios