ಬೆಂಗಳೂರು(ಫೆ.17): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2019-20ನೇ ಸಾಲಿನ ಎಂಜಿನಿಯರಿಂಗ್‌ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಮೊದಲ ಹತ್ತು ಸ್ಥಾನಗಳನ್ನು ನಗರದ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ(ಸಿಎಂಆರ್‌ಐಟಿ) ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್‌ ಜೈನ್‌ ಯುವ ಮನಸುಗಳ ಮಾರ್ಗದರ್ಶನ, ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಪರಿಸರ ಸೃಷ್ಟಿಸುವುದರಲ್ಲಿ ಕಾಲೇಜು ನಂಬಿಕೆಯನ್ನು ಉಳಿಸಿಕೊಂಡಿದೆ. ಕಾಲೇಜು ಈ ಸ್ಥಾನಕ್ಕೆ ಬರಲು ಬೋಧನಾ ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟೆಲಿಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಆಯೆಷಾ ಬಾನು ಮೊದಲ ರ‌್ಯಾಂಕ್ ಹಾಗೂ ಚಿನ್ನದ ಪದಕ, ಇನ್ಫರ್ಮೇಷನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ನಲ್ಲಿ ಧ್ರುವ್‌ ವತ್ಸ ಮಿಶ್ರಾ ಎಂಬ ವಿದ್ಯಾರ್ಥಿ 3ನೇ ರ‌್ಯಾಂಕ್
, ಎಲೆಕ್ಟ್ರಿಕಲ್‌ ಅಂಡ್‌ ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ತೇಜಸ್‌ ಮಂಜುನಾಥ್‌ ಎಂಬುವವರು 9ನೇ ರ‌್ಯಾಂಕ್, ಬಿಇ ಇನ್ಫರ್ಮೇಷನ್‌ ಸೈನ್ಸ್‌ನಲ್ಲಿ ರಶ್ಮಿ ಶ್ರೀ ರೌಲ್‌ ಎಂಬುವರು 9ನೇ ರ‌್ಯಾಂಕ್, ಎಂಸಿಎ ವಿಭಾಗದಲ್ಲಿ ಎನ್‌.ಕೆ.ಮೈಮುನಿಷಾ 3ನೇ ರ‌್ಯಾಂಕ್, ಎಂಟೆಕ್‌ ವಿಭಾಗದಲ್ಲಿ ಎನ್‌.ಮಮತಾ 3ನೇ ರ‌್ಯಾಂಕ್ ಮತ್ತು ಎಂಟೆಕ್‌ ವಿಭಾಗದಲ್ಲಿ ಚಂದ್ರಶೇಖರ್‌ 9ನೇ ರ‌್ಯಾಂಕ್ ಪಡೆದುಕೊಂಡಿರುವುದಾಗಿ ಅವರು ವಿವರಿಸಿದರು.