ಶಿರೂರು ಗುಡ್ಡ ಕುಸಿತ: ಬಿಜೆಪಿ ಮೇಲೆ ಆರೋಪ ಮಾಡೋ ಮಣ್ಣೆರೆಚಾಟ ಮಾಡಲ್ಲ, ಸಿಎಂ ಸಿದ್ದರಾಮಯ್ಯ

ಅಸೆಂಬ್ಲಿಯ ಕಾರಣ ಬೇಗ ಬರಲಾಗಲಿಲ್ಲ, ಆದ್ರೆ, ಜಿಲ್ಲಾ ಸಚಿವರಿಗೆ ತ್ವರಿತಗತಿ ಆಪರೇಶನ್ ಮಾಡಲು ಸೂಚನೆ ನೀಡಿದ್ದೇನೆ. ಸಾವನ್ನಪ್ಪಿದ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗಿದೆ. ಯಾವುದೇ ಕುಟುಂಬದ ಸದಸ್ಯದ ಮೃತದೇಹ ದೊರಕಿದ್ರೆ ಅವರಿಗೂ ಪರಿಹಾರ ನೀಡಲಾಗುತ್ತದೆ. ಆರ್ಮಿಯವರಿಗೆ, ನೇವಿಯವರಿಗೆ, NDRFಗೆ ಗುಡ್ಡ ಕುಸಿತವಾದ ನದಿ ಬದಿಯಲ್ಲೂ ಸ್ಕ್ಯಾನ್ ಮಾಡಲು ತಿಳಿಸಿದ್ದೇನೆ: ಸಿಎಂ ಸಿದ್ದರಾಮಯ್ಯ
 

cm siddaramaiah react to shirur landslide tragedy at ankola in uttara kannada grg

ಕಾರವಾರ(ಜು.21): ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ 10 ಜನರು ಕಾಣೆಯಾಗಿದ್ದಾರೆ. 7 ಜನರ ಮೃತದೇಹ ದೊರಕಿದ್ದು, ಇನ್ನೂ 3 ಮೃತದೇಹ ದೊರಕಬೇಕಿದೆ. SDRF 44, NDRF 24, ಆರ್ಮಿಯಿಂದ 44 ಜನರು ಬಂದಿದ್ದಾರೆ. ವಾಹನಗಳು ಕೂಡ ಕಾಣೆಯಾಗಿವೆ. ಟೀ ಅಂಗಡಿಯಿಟ್ಟು ವಾಸವಾಗಿದ್ದವರೂ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತದವರಿಗೆ ಹಾಗೂ ಶಾಸರಿಗೆ ರೆಸ್ಕ್ಯೂ ಆಪರೇಶನ್ ಮಾಡಲು ತ್ವರಿತ ಮಾಡಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು(ಭಾನುವಾರ) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಸೆಂಬ್ಲಿಯ ಕಾರಣ ಬೇಗ ಬರಲಾಗಲಿಲ್ಲ, ಆದ್ರೆ, ಜಿಲ್ಲಾ ಸಚಿವರಿಗೆ ತ್ವರಿತಗತಿ ಆಪರೇಶನ್ ಮಾಡಲು ಸೂಚನೆ ನೀಡಿದ್ದೇನೆ. ಸಾವನ್ನಪ್ಪಿದ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗಿದೆ. ಯಾವುದೇ ಕುಟುಂಬದ ಸದಸ್ಯದ ಮೃತದೇಹ ದೊರಕಿದ್ರೆ ಅವರಿಗೂ ಪರಿಹಾರ ನೀಡಲಾಗುತ್ತದೆ. ಆರ್ಮಿಯವರಿಗೆ, ನೇವಿಯವರಿಗೆ, NDRFಗೆ ಗುಡ್ಡ ಕುಸಿತವಾದ ನದಿ ಬದಿಯಲ್ಲೂ ಸ್ಕ್ಯಾನ್ ಮಾಡಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ. 

ಶಿರೂರು ಗುಡ್ಡ ಕುಸಿತ ಪ್ರಕರಣ: ಹತ್ತು ಜನ ಕಣ್ಮರೆ ಬಗ್ಗೆ ದೂರು

ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಲಾಗ್ತದೆ. ರೆಸ್ಕ್ಯೂ ಆಪರೇಶನ್ ನಡೆದ ಬಳಿಕ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.. ರಸ್ತೆ ಪೂರ್ಣ ಮಾಡದಿದ್ರೂ ಟೋಲ್ ಕಲೆಕ್ಷನ್ ಮಾಡಲಾಗ್ತಿದೆ. ರೆಸ್ಕ್ಯೂ ಕಾರ್ಯಾಚರಣೆ ಯಾವುದೇ‌ ರೀತಿಯಲ್ಲಿ ತಡವಾಗ್ತಿಲ್ಲ. ಬಹಳ ವರ್ಷಗಳಿಂದ ಲ್ಯಾಂಡ್ ಸ್ಲೈಡ್ ಆಗಿಲ್ಲ, ಈಗ ಆಗಿದೆ. ಘಟನೆ ಸಂಬಂಧಿಸಿ ನಾವು ಯಾವುದೇ ರಾಜಕಾರಣ ಮಾಡಲ್ಲ. ಬಿಜೆಪಿ ಮೇಲೆ ಆರೋಪ ಮಾಡೋ ಮಣ್ಣೆರೆಚಾಟ ಮಾಡಲ್ಲ. ನಾವು ಕೊಡೋ ಪರಿಹಾರದಿಂದ ಜೀವ ವಾಪಸ್ ಬರಲ್ಲ, ಪ್ರಾಕೃತಿಕ ಘಟನೆ. ಅವರ ಮೃತದೇಹ ಹುಡುಕುವ ಕೆಲಸ ಮಾಡಲಾಗ್ತಿದೆ ಎಂದ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios