ಸಿಎಂ ಸಿದ್ದರಾಮಯ್ಯರಿಂದ ಈಡಿಗ ಸಮುದಾಯ ಒಡೆಯುವ ಕೆಲಸ: ಪ್ರಣವಾನಂದ ಸ್ವಾಮೀಜಿ
ಈಡಿಗ ಸಮುದಾಯದವರನ್ನು ಮುಖ್ಯಮಂತ್ರಿ ಕಡೆಗಾಣಿಸುತ್ತಿದ್ದಾರೆ. ಉಪ ಕುಲ ಕಸುಬನ್ನು ಕಸಿದುಕೊಂಡಿದ್ದಾರೆ. ಇದರಿಂದ ಹಲವಾರು ಕುಟುಂಬಗಳು ಬೀದಿಪಾಲಾಗಿವೆ. ಬಿಲ್ಲವ, ಈಡಿಗ ಸಮಾಜಕ್ಕೆ ಅನ್ಯಾಯವಾಗಿದೆ. ಹಲವಾರು ಬಾರಿ ಸಮಾವೇಶ, ಪಾದಯಾತ್ರೆ ಮಾಡಿದರೂ ಮುಖ್ಯಮಂತ್ರಿ ಗಮನಹರಿಸುತ್ತಿಲ್ಲ ಎಂದು ದೂರಿದ ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ
ಗಂಗಾವತಿ(ಡಿ.05): ಮುಖ್ಯಮಂತ್ರಿ ಸಿದ್ದರಾಮಯ್ಯ ಈಡಿಗ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಡಿಗ ಸಮುದಾಯದವರನ್ನು ಮುಖ್ಯಮಂತ್ರಿ ಕಡೆಗಾಣಿಸುತ್ತಿದ್ದಾರೆ. ಉಪ ಕುಲ ಕಸುಬನ್ನು ಕಸಿದುಕೊಂಡಿದ್ದಾರೆ. ಇದರಿಂದ ಹಲವಾರು ಕುಟುಂಬಗಳು ಬೀದಿಪಾಲಾಗಿವೆ. ಬಿಲ್ಲವ, ಈಡಿಗ ಸಮಾಜಕ್ಕೆ ಅನ್ಯಾಯವಾಗಿದೆ. ಹಲವಾರು ಬಾರಿ ಸಮಾವೇಶ, ಪಾದಯಾತ್ರೆ ಮಾಡಿದರೂ ಮುಖ್ಯಮಂತ್ರಿ ಗಮನಹರಿಸುತ್ತಿಲ್ಲ ಎಂದು ದೂರಿದರು.
ನಾರಾಯಣ ಗುರು ನಿಗಮಕ್ಕೆ ಮುಖ್ಯಮಂತ್ರಿ ನಯಾಪೈಸೆ ನೀಡಿಲ್ಲ. ಕೆಲ ನಿಗಮಗಳಿಗೆ ಮಾತ್ರ ನೀಡಿದ್ದಾರೆ. ಇದರಿಂದ ಸಮಾಜಕ್ಕೆ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಮಾಜದ ಹಿರಿಯ ನಾಯಕರಿದ್ದರೂ ಅಂಥವರಿಗೆ ಸಚಿವ ಸ್ಥಾನ ನೀಡಲಿಲ್ಲ. ಆದರೆ ಮಧು ಬಂಗಾರಪ್ಪ ಅವರನ್ನು ಮುಂದಿಟ್ಟು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶಕ್ಕೆ ಮೋದಿಯೇ ಗ್ಯಾರಂಟಿ: ಸಂಸದ ಸಂಗಣ್ಣ ಕರಡಿ
ಈಡಿಗ ಸಮಾಜದ ಮೀಸಲಾತಿಯಲ್ಲಿ ಮಧು ಬಂಗಾರಪ್ಪಗೆ ಸಚಿವ ಸ್ಥಾನ ನೀಡಿದ್ದಾರೆಯೇ ಹೊರತು ಅವರ ವರ್ಚಸ್ಸಿನಿಂದಲ್ಲ. ಮಧು ಬಂಗಾರಪ್ಪ ವಿನಾಶಕಾಲೇ ವಿಪರೀತ ಬುದ್ಧಿ ಅನ್ನೋ ರೀತಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ವಾಮೀಜಿ, ಸಮುದಾಯಕ್ಕೆ ಮಧು ಬಂಗಾರಪ್ಪ ಕೊಡುಗೆ ಏನೆಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಇದ್ದರು.