Asianet Suvarna News Asianet Suvarna News

ದೇಶಕ್ಕೆ ಮೋದಿಯೇ ಗ್ಯಾರಂಟಿ: ಸಂಸದ ಸಂಗಣ್ಣ ಕರಡಿ

ಜನತೆ ಕಾಂಗ್ರೆಸ್ಸಿನ ಹುಸಿ ಗ್ಯಾರಂಟಿಗೆ ಮನ್ನಣೆ ನೀಡದೇ ಅಭಿವೃದ್ಧಿಗೆ ಮಣೆ ಹಾಕಿದ್ದಾರೆ. ಮೂರು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿದೆ. ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಗ್ಯಾರಂಟಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

Modi is the guarantee for the nation says MP Sanganna Kardi at koppal rav
Author
First Published Dec 4, 2023, 6:19 AM IST

ಕೊಪ್ಪಳ (ಡಿ.4) : ಜನತೆ ಕಾಂಗ್ರೆಸ್ಸಿನ ಹುಸಿ ಗ್ಯಾರಂಟಿಗೆ ಮನ್ನಣೆ ನೀಡದೇ ಅಭಿವೃದ್ಧಿಗೆ ಮಣೆ ಹಾಕಿದ್ದಾರೆ. ಮೂರು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿದೆ. ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಗ್ಯಾರಂಟಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಹುಸಿ ಗ್ಯಾರಂಟಿಗಳನ್ನು ಘೋಷಿಸಿ ಚುನಾವಣೆ ಎದುರಿಸಿದರು. ಆದ್ದರಿಂದಲೇ ಸೋತಿದ್ದಾರೆ. ಆದರೆ, ಬಿಜೆಪಿ ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ಪ್ರಚಾರ ನಡೆಸಲಾಗಿತ್ತು. ಇದರ ಪರಿಣಾಮ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಜಯ ಗಳಿಸಿದೆ ಎಂದಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯವಾಗಿ ಸೋತೊಡನೆ ಶುರುವಾಗಿದೆ ಭಾರತ್ ತೋಡೊ!

2018ರಲ್ಲಿ ಕಾಂಗ್ರೆಸ್ ವಶವಾಗಿದ್ದ ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯ ಗೆದ್ದಿದ್ದೇವೆ. ಕಾಂಗ್ರೆಸ್ ಮುಕ್ತ ಭಾರತ ಆಗುವ ಕಾಲ ಸನ್ನಿಹಿತವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿ ಇರಲಿಲ್ಲ. ಅಲ್ಲಿ ಎರಡಂಕಿ ದಾಟಿದ್ದೇವೆ. ಇಲ್ಲಿಯೂ ಬಿಜೆಪಿ ಕಮಾಲ್ ಮಾಡಿದೆ. ಸೆಮಿಫೈನಲ್‌ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಲೋಕಸಭೆ ಫೈನಲ್‌ನಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಚ ರಾಜ್ಯ ಚುನಾವಣಾ ಫಲಿತಾಂಶ ಕುತೂಹಲ, ನಿಜವಾಗುತ್ತಾ ಮತಗಟ್ಟೆ ಸಮೀಕ್ಷೆ ವರದಿ?

Follow Us:
Download App:
  • android
  • ios