ಹೂ ಮಾರುವ ಬಾಲೆಯನ್ನು ಮಾತನಾಡಿಸಿದ ರಾಜ್ಯದ ದೊರೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Aug 2018, 4:27 PM IST
CM HD Kumaraswamy speaks to a little flower vendor
Highlights

ರಸ್ತೆ ಬದಿಯಲ್ಲಿ ಹೂ ಮಾರುತ್ತ ನಿಂತಿದ್ದ ಪುಟ್ಟ ಬಾಲಕಿಯನ್ನು ಕಾರು ನಿಲ್ಲಿಸಿ ಮಾತನಾಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಾಲೆಗೆ ಶಿಕ್ಷಣ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ರಾಜ್ಯದ ದೊರೆ ಮಾತನಾಡಿಸಿದ್ದಕ್ಕೆ ಬಾಲಕಿ ಫುಲ್ ಖುಷಿಯಾಗಿದ್ದಾಳೆ.

ಮಂಡ್ಯ: ಹೂ ಮಾರುತ್ತಿದ್ದ ಪುಟ್ಟ ಹುಡುಗಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿದ್ಯಾಭ್ಯಾಸಕ್ಕೆ ಸಹಕರಿಸುವ ಭರವಸೆ ನೀಡಿದ್ದಾರೆ.

ಕುಮಾರಸ್ವಾಮಿ ಅವರು ಕೆಆರ್‌ಎಸ್‌‌ನಿಂದ ರಾಮನಗರಕ್ಕೆ ಹೋಗುವಾಗ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದ ರಸ್ತೆ ಬದಿಯಲ್ಲಿ ಹೂವನ್ನು ಮಾರುತ್ತ ನಿಂತಿದ್ದ ಶಾಬಾಬ್ತಾಜ್ ಎಂಬ ಪುಟ್ಟ ಬಾಲಕಿಯನ್ನು ಕಾರು ನಿಲ್ಲಿಸಿ,  ಮಾತನಾಡಿಸಿದ್ದಾರೆ. ಪೋಷಕರ ಬಗ್ಗೆ ವಿಚಾರಿಸಿದ ಮುಖ್ಯಮಂತ್ರಿಗಳು, ಶಿಕ್ಷಣಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ. 

'ಸುವರ್ಣನ್ಯೂಸ್.ಕಾಮ್'ನೊಂದಿಗೆ ಮಾತನಾಡಿದ ಶಾಬಾಬ್ತಾಜ್ 'ನನ್ನ ಅಪ್ಪ ಕುಡಿದು, ಅಮ್ಮನಿಗೆ ಹೊಡೆಯುತ್ತಾರೆ. ಮನೆಯಲ್ಲಿ ಕಷ್ಟ ಇರುವುದರಿಂದ ಹೂ ಮಾರುತ್ತಿದ್ದೇನೆ. ಇದೀಗ ಮುಖ್ಯಮಂತ್ರಿಗಳು ಓದಿಸುವ ಭರವಸೆ ನೀಡಿರುವುದು ಸಂತಸ ತಂದಿದೆ,' ಎಂದಿದ್ದಾಳೆ.

loader