ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ₹2,000 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಬೃಹತ್ ಯೋಜನೆಯಡಿ, ವಿಧಾನಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಆಡಳಿತ ಪಕ್ಷದ ಕ್ಷೇತ್ರಗಳಿಗೆ ಹೆಚ್ಚಿನ ಪಾಲು ದೊರೆತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DKS) ನೇತೃತ್ವದ ರಾಜ್ಯ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ನೀಡಿದೆ. ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳ ಜೊತೆಗೆ ಹೆಚ್ಚುವರಿಯಾಗಿ ₹2,000.00 ಕೋಟಿ ವೆಚ್ಚದ ಬೃಹತ್ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಸರ್ಕಾರ ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವ್ಯಾಪ್ತಿಯಲ್ಲಿ ಬರುವ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟಾರೆ ರಸ್ತೆಗಳ ಸಮಗ್ರ ಸುಧಾರಣೆಗೆ ಈ ಬೃಹತ್ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಬೆಂಗಳೂರಿನ ಐದು ನಗರ ಪಾಲಿಕೆಗಳ ಆಯುಕ್ತರುಗಳಿಂದ ವಿಧಾನಸಭಾ ಕ್ಷೇತ್ರವಾರು ಪಡೆದ ಕಾಮಗಾರಿಗಳ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಬಿಎ (GBA) ಮುಖ್ಯ ಆಯುಕ್ತರು ಜೂನ್ 16, 2026 ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಅನ್ವಯ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.

ಕ್ಷೇತ್ರವಾರು ಬಿಡುಗಡೆಯಾದ ಅನುದಾನ

1. ಸಿ.ವಿ ರಾಮನ್ ನಗರ 40 ಕೋಟಿ ರೂ.

2. ಶಾಂತಿನಗರ 50+50 ಒಟ್ಟು 100 ಕೋಟಿ ರೂ.

3. ಶಿವಾಜಿನಗರ 80+20 ಒಟ್ಟು 100 ಕೋಟಿ ರೂ.

4. ಚಾಮರಾಜಪೇಟೆ 28.5+71.5 ಒಟ್ಟು‌ 100 ಕೋಟಿ ರೂ.

5. ಚಿಕ್ಕಪೇಟೆ 40 ಕೋಟಿ ರೂ.

6. ಮಹದೇವಪುರ 50+10 ಒಟ್ಟು 60 ಕೋಟಿ ರೂ.

7. ಕೆ.ಆರ್.ಪುರ 60 ಕೋಟಿ ರೂ.

8. ಆರ್.ಆರ್ ನಗರ 47+13 ಒಟ್ಟು 60 ಕೋಟಿ ರೂ.

9. ಯಶವಂತಪುರ 50+25 ಒಟ್ಟು 75 ಕೋಟಿ ರೂ.

10. ದಾಸರಹಳ್ಳಿ 35+25 ಒಟ್ಟು 55 ಕೋಟಿ ರೂ.

11. ಮಹಾಲಕ್ಷ್ಮಿ ಲೇಔಟ್ 40 ಕೋಟಿ ರೂ.

12. ಮಲ್ಲೇಶ್ವರಂ 40 ಕೋಟಿ ರೂ.

13. ರಾಜಾಜಿನಗರ 40 ಕೋಟಿ ರೂ.

14. ಗೋವಿಂದರಾಜನಗರ 39+61 ಒಟ್ಟು 100 ಕೋಟಿ ರೂ.

15. ವಿಜಯನಗರ 42+58 ಒಟ್ಟು 100 ಕೋಟಿ ರೂ.16. ಬಸವನಗುಡಿ‌ 40 ಕೋಟಿ ರೂ.

17. ಪದ್ಮನಾಭನಗರ 42+38 ಒಟ್ಟು 80 ಕೋಟಿ ರೂ.

18.ಬ್ಯಾಟರಾಯನಪುಟ 88.5+11.5 ಒಟ್ಟು 100 ಕೋಟಿ ರೂ.

19.ಸರ್ವಜ್ಞ ನಗರ 90+10 ಒಟ್ಟು 100 ಕೋಟಿ ರೂ.

20.ಪುಲಕೇಶಿನಗರ 95+5 ಒಟ್ಟು 100 ಕೋಟಿ ರೂ.

21. ಯಲಹಂಕ 55+5 ಒಟ್ಟು 55 ಕೋಟಿ ರೂ.

22. ಹೆಬ್ಬಾಳ 100 ಕೋಟಿ ರೂ.

23. ಜಯನಗರ 40 ಕೋಟಿ ರೂ.

24. ಬೆಂಗಳೂರು ದಕ್ಷಿಣ 60 ಕೋಟಿ ರೂ.

25. ಬೊಮ್ಮನಹಳ್ಳಿ 60 ಕೋಟಿ ರೂ.

26. ಬಿಟಿಎಂ ಲೇಔಟ್ 50+50 ಒಟ್ಟು 100 ಕೋಟಿ ರೂ.

27. ಆನೇಕಲ್ 45 ಕೋಟಿ ರೂ.

28. ಗಾಂಧಿನಗರ 73 ಕೋಟಿ ರೂ.

ಅನುದಾನ ಹಂಚಿಕೆಯಲ್ಲಿ ರಾಜಕೀಯ ಲೆಕ್ಕಾಚಾರ!

ಈ ಬೃಹತ್ ಅನುದಾನ ಹಂಚಿಕೆಯಲ್ಲಿ ಸ್ಪಷ್ಟ ರಾಜಕೀಯ ತಂತ್ರಗಾರಿಕೆ ಎದ್ದು ಕಾಣುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಡಳಿತ ಪಕ್ಷದ ಕ್ಷೇತ್ರಗಳಿಗೆ ಸಿಂಹಪಾಲು ಸಿಕ್ಕಿದೆ. ಆಡಳಿತಾರೂಢ ಕಾಂಗ್ರೆಸ್ ಶಾಸಕರಿರುವ ಬಹುತೇಕ ಪ್ರಮುಖ ಕ್ಷೇತ್ರಗಳಿಗೆ ತಲಾ ₹100 ಕೋಟಿಗಳ ಬೃಹತ್ ಮೊತ್ತವನ್ನು ನೀಡಲಾಗಿದೆ. ಶಿವಾಜಿನಗರ, ಶಾಂತಿನಗರ, ಬಿಟಿಎಂ ಲೇಔಟ್ ಹಾಗೂ ಹೆಬ್ಬಾಳದಂತಹ ಕ್ಷೇತ್ರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ಪ್ರತಿಪಕ್ಷಗಳ ಕ್ಷೇತ್ರಗಳಿಗೆ ನಿಯಮಿತ ಅನುದಾನ:

ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರಕ್ಕೆ ₹80 ಕೋಟಿ ಮಂಜೂರಾಗಿದ್ದರೆ, ಉಳಿದಂತೆ ಪ್ರತಿಪಕ್ಷಗಳ (ಬಿಜೆಪಿ/ಜೆಡಿಎಸ್) ಶಾಸಕರಿರುವ ಬಹುತೇಕ ಕ್ಷೇತ್ರಗಳಿಗೆ ಕೇವಲ ₹40 ರಿಂದ ₹60 ಕೋಟಿಗಳಷ್ಟು ಸಾಧಾರಣ ಅನುದಾನ ಹಂಚಿಕೆ ಮಾಡಲಾಗಿದೆ.

ಈ ಮಾಸ್ಟರ್ ಪ್ಲಾನ್ ಅಡಿಯಲ್ಲಿ ವಾರ್ಡ್ ಮಟ್ಟದ ರಸ್ತೆ ಗುಂಡಿಗಳ ಮುಚ್ಚುವಿಕೆ, ಮುಖ್ಯ ರಸ್ತೆಗಳ ಡಾಂಬರೀಕರಣ (ಅಸ್ಫಾಲ್ಟಿಂಗ್) ಮತ್ತು ಜಂಕ್ಷನ್‌ಗಳ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಚಾಲನೆ ಪಡೆಯಲಿವೆ. ಈ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ ಜಿಬಿಎ (GBA) ಮತ್ತು ಬಿಡಿಎ (BDA) ಅಧಿಕಾರಿಗಳು ಆದಷ್ಟು ಬೇಗ ಅಭಿವೃದ್ಧಿ ಮಾಡಿದರೆ ನಗರದ ಜನರ ಪ್ರಶಂಸೆಗೆ ಕಾರಣರಾಗಲಿದ್ದಾರೆ