ಸಂಪಾದಿಸಿದ ಆಸ್ತಿ ಮಾರಾಟ ಮಾಡಿ, ಗ್ರಾಮೀಣ ಭಾಗದ ಬಡಜನರ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಿಸಿರುವ ಹಿರಿಯ ನಟಿ ಲೀಲಾವತಿ ಅವರ ಬದುಕು ಅನುಕರಣೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ. 

ದಾಬಸ್‌ಪೇಟೆ (ಸೆ.29): ಸಂಪಾದಿಸಿದ ಆಸ್ತಿ ಮಾರಾಟ ಮಾಡಿ, ಗ್ರಾಮೀಣ ಭಾಗದ ಬಡಜನರ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಿಸಿರುವ ಹಿರಿಯ ನಟಿ ಲೀಲಾವತಿ ಅವರ ಬದುಕು ಅನುಕರಣೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಡಾ. ಎಂ.ಲೀಲಾವತಿ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಟಿ ಲೀಲಾವತಿ ಅವರು ಎವರ್‌ಗ್ರೀನ್‌ ಹೀರೋಯಿನ್‌ ಆಗಿದ್ದಾರೆ. ಬೆಂಗಳೂರು, ಚೆನ್ನೈ ನಗರಗಳನ್ನು ತೊರೆದು ದೂರದ ಹಳ್ಳಿಗೆ ಬಂದು ನೆಲೆಸಿ, ತಾನು ನೆಮ್ಮದಿ ಕಂಡು ಕೊಂಡ ಗ್ರಾಮದ ಜನರಿಗಾಗಿ ಶಾಶ್ವತವಾಗಿ ಆಸ್ಪತ್ರೆ ನಿರ್ಮಾಣ ಮಾಡಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ.

ನಗರಗಳ ಅನೇಕ ಮಂದಿ ಶ್ರೀಮಂತರು ಈ ಭಾಗದಲ್ಲಿ ಜಮೀನು ಖರೀದಿಸಿ, ತೋಟ, ಫಾರಂಹೌಸ್‌ ನಿರ್ಮಿಸಿಕೊಂಡಿದ್ದಾರೆ. ಆದರೆ, ಯಾರೋಬ್ಬರೂ ಆಸ್ಪತ್ರೆ ನಿರ್ಮಿಸುವ ಮನಸ್ಸು ಮಾಡಿಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಹಿರಿಯ ನಟಿ ಮಾಡಿ ತೋರಿಸಿದ್ದಾರೆ. ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಿ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಸರ್ಕಾರದಿಂದ ನೀಡಲಾಗುವುದು. ಲೀಲಾವತಿ ಅವರ ಮತ್ತೊಂದು ಬೇಡಿಕೆಯಂತೆ ಈ ಭಾಗದ ಜಾನುವಾರುಗಳಿಗಾಗಿ ಪಶು ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ನಟಿ ಲೀಲಾವತಿಯವರ ಆಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ: ಇಳಿ ವಯಸ್ಸಲ್ಲೂ ಸಮಾಜ ಸೇವೆಯ ತುಡಿತ..!

ಲೀಲಾವತಿ ಮಾತನಾಡಿ, ಕಳೆದ 30 ವರ್ಷದಿಂದ ಸೋಲದೇವನಹಳ್ಳಿಯಲ್ಲಿ ನೆಲೆಸಿದ್ದು, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಅಳಿಲು ಸೇವೆ ಮಾಡಿದ್ದೇನೆ. ಆಸ್ಪತ್ರೆ ನಿರ್ಮಿಸುವ ಕನಸಿನಿಂದಾಗಿ ಚೆನ್ನೈನಲ್ಲಿ ಇದ್ದ ಆಸ್ತಿಯನ್ನು ಮಾರಾಟ ಮಾಡಿದ್ದೇನೆ. ಗ್ರಾಮೀಣ ಭಾಗದ ಜನರು ಆಸ್ಪತ್ರೆಯ ಅನುಕೂಲ ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆಸ್ಪತ್ರೆ ಉದ್ಘಾಟನೆಗೂ ಮುನ್ನ ಮುಖ್ಯಮಂತ್ರಿಯವರು ಸೋಲದೇವನಹಳ್ಳಿ ಗ್ರಾಮದಲ್ಲಿರುವ ಲೀಲಾವತಿ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.

ಪಶು ಆಸ್ಪತ್ರೆ ನಿರ್ಮಾಣ: ಅನೇಕ ಶ್ರೀಮಂತರು ಈ ಭಾಗದಲ್ಲಿ ಜಮೀನು ಖರೀದಿಸಿ ಫಾರಂಹೌಸ್‌ ನಿರ್ಮಿಸಿಕೊಂಡಿದ್ದಾರೆ. ಆದರೆ ಯಾರೊಬ್ಬರು ಆಸ್ಪತ್ರೆ ನಿರ್ಮಿಸುವ ಮನಸ್ಸು ಮಾಡಿಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಹಿರಿಯ ನಟಿ ಲೀಲಾವತಿ ಅವರು ಮಾಡಿ ತೋರಿಸಿದ್ದಾರೆ. ಈ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯಕೇಂದ್ರವಾಗಿ ಪರಿವರ್ತಿಸಿ ಅವಶ್ಯಕ ಮೂಲ ಸೌಕರ್ಯಗಳನ್ನು ಸರ್ಕಾರದಿಂದ ನೀಡಲಾಗುವುದು. ಲೀಲಾವತಿ ಅವರ ಮತ್ತೊಂದು ಬೇಡಿಕೆಯಂತೆ ಈ ಭಾಗದ ಜಾನುವಾರುಗಳಿಗಾಗಿ ಪಶು ಆಸ್ಪತ್ರೆಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಹಿರಿಯ ನಟಿ ಲೀಲಾವತಿ ಮಾತನಾಡಿ, ಕಳೆದ 30 ವರ್ಷದಿಂದ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆಸಿದ್ದೇನೆ. ಗ್ರಾಮೀಣರ ಅನುಕೂಲಕ್ಕಾಗಿ ಅಳಿಲು ಸೇವೆ ಮಾಡಿದ್ದೇನೆ. ಆಸ್ಪತ್ರೆ ನಿರ್ಮಿಸುವ ಕನಸಿನಿಂದಾಗಿ ಚೆನ್ನೈನಲ್ಲಿದ್ದ ಆಸ್ತಿ ಮಾರಿದ್ದೇನೆ. ಗ್ರಾಮೀಣರು ಆಸ್ಪತ್ರೆ ಅನುಕೂಲ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ವೀಲ್‌ಚೇರ್‌ ಮೇಲೆ ಬಂದು ಆರೋಗ್ಯ ಕೇಂದ್ರ ಕಾಮಗಾರಿ ವೀಕ್ಷಿಸಿದ ಡಾ. ಎಂ ಲೀಲಾವತಿ

ಸಚಿವ ಆನಂದ್‌ಸಿಂಗ್‌, ಚಲನಚಿತ್ರ ನಟ ವಿನೋದ್‌ರಾಜ್‌, ಡಾ.ಕೆ.ಶ್ರೀನಿವಾಸಮೂರ್ತಿ, ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಸ್‌.ಮಲ್ಲಯ್ಯ, ಶಾಸಕ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ದೊಡ್ಡಣ್ಣ, ಗಡಿನಾಡ ಪ್ರಾ​ಕಾರದ ಅಧ್ಯಕ್ಷ ಡಾ.ಸೋಮಶೇಖರ್‌, ಫಿಲಂ ಚೇಂಬರ್‌ ಅಧ್ಯಕ್ಷ ಬಾಮಾಹರೀಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಾಣಕಾರ್‌, ಜಿಲ್ಲಾಧಿಕಾರಿ ಆರ್‌.ಲತಾ, ಕೇಂದ್ರವಲಯ ಐಜಿಪಿ ಚಂದ್ರಶೇಖರ್‌, ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡಿ, ತಹಸೀಲ್ದಾರ್‌ ಕೆ.ಮಂಜುನಾಥ್‌ ಇತರರಿದ್ದರು.