ಹಿರಿಯ ನಟಿ ಲೀಲಾವತಿಯವರ ಆಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ: ಇಳಿ ವಯಸ್ಸಲ್ಲೂ ಸಮಾಜ ಸೇವೆಯ ತುಡಿತ..!
ಸಮಾಜದ ಏಳಿಗೆಗಾಗಿ ಈ ಇಳಿ ವಯಸ್ಸಿನಲ್ಲಿ ಹಾಗೂ ನಿರಂತರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಯೋಗಕ್ಷೇಮದ ಬಗ್ಗೆ ಕಾಳಜಿ ನಿಜಕ್ಕೂ ನಾಡಿಗೆ ಮಾದರಿಯಾಗಿದ್ದಾರೆ ತಾಯಿ ಮಗ
ವರದಿ: ಟಿ.ಮಂಜುನಾಥ್, ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ನೆಲಮಂಗಲ(ಸೆ. 27): ದಕ್ಷಿಣ ಭಾರತ ಚಲನ ಚಿತ್ರರಂಗದ ಹಿರಿಯ ಮೇರು ನಟಿ, ತಮ್ಮ ಗಳಿಕೆಯಲ್ಲಿ ಒಂದಿಷ್ಟು ಆಸ್ತಿಯನ್ನ ಖರೀದಿ ಮಾಡಿದ್ದರು, ಆದರೆ 87ರ ಈ ಇಳಿ ವಯಸ್ಸಿನಲ್ಲಿ ತಮ್ಮ ಅನಾರೋಗ್ಯದ ಮಧ್ಯೆಯೂ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ತಮ್ಮ ಸ್ವಂತ ಜಮೀನು ಮಾರಿ, ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಯಾರು ಕನ್ನಡ ಚಿತ್ರರಂಗದ ಹಿರಿಯ ನಟಿ ಅಂತೀರ ಈ ಸ್ಟೋರಿ ನೋಡಿ...
ಬೆಳ್ಳಿ ಪರದೆಯಲ್ಲಿ ಮಿಂಚಿದ ಹೆಸರಾಂತ ನಾಯಕ ನಟಿ, ನೂರಾರು ಚಿತ್ರದಲ್ಲಿ ವಿವಿಧ ಪಾತ್ರಗಳನ್ನ ಅಭಿನಯಿಸಿದ ಕನ್ನಡದ ಮೇರು ನಟಿ ಡಾ.ಎಂ.ಲೀಲಾವತಿ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಸುಮಾರು 10 ವರ್ಷಗಳ ಹಿಂದೆ, ಸಣ್ಣದೊಂದು ಆಸ್ಪತ್ರೆ ನಿರ್ಮಾಣ ಮಾಡಿದ್ದ ಡಾ.ಎಂ.ಲೀಲಾವತಿಯವರು, ಇಂದು ಮತ್ತೊಂದು ಸುಸಜ್ಜಿತ ಪ್ರಾಥಮಿಕ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ತಾಯಿ ಲೀಲಾವತಿ ಅಮ್ಮನವರ ಆಸೆಯಂತೆ ಚೈನ ನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಿದ ನಟ ವಿನೋದ್ ರಾಜ್ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಜೊತೆಗೆ ಪೀಠೋಪಕರಣ ಪ್ರಯೋಗಾಲಯ ಉಪಕರಣಗಳನ್ನ ವ್ಯವಸ್ಥಿತವಾಗಿ ಮಾಡಿದ್ದಾರೆ. ಗಡಿ ಪ್ರದೇಶದ ಸೋಲದೇವನಹಳ್ಳಿ ಭಾಗದ ಹತ್ತಾರು ಹಳ್ಳಿಯ ಜನರ ನೆರವಿಗಾಗಿ ಆರೋಗ್ಯ ಇಲಾಖೆಯ ಸುಪರ್ದಿಗೆ ಈ ಆಸ್ಪತ್ರೆಯನ್ನ ನೀಡುವುದಾಗಿ ನಟ ವಿನೋದ್ ರಾಜ್ ತಿಳಿಸಿದ್ದಾರೆ.
ಡ್ರಗ್ ಪೆಡ್ಲರ್ ಹೊಟ್ಟೆಯಲ್ಲಿತ್ತು 13.6 ಕೋಟಿ ರೂ. ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್!
ಇನ್ನೂ ಕಳೆದ ಒಂದು ವರ್ಷದಿಂದ ಸಾಕಷ್ಟು ಅನಾರೋಗ್ಯದಿಂದ ಬಳಲುತ್ತಿರುವ ಡಾ.ಲೀಲಾವತಿಯವರ ಆರೋಗ್ಯ ಕೊಂಚ ಕ್ಷೀಣವಾಗಿದ್ದು ಮಗ ನಟ ವಿನೋದ್ ರಾಜ್ ತಾಯಿಯ ಆಸೆಯಂತೆ ಎಲ್ಲಾ ಕೆಲಸವನ್ನ ಮಾಡುತಿದ್ದಾರೆ. ಅತೀ ಶೀಘ್ರವಾಗಿ ಕಾಮಗಾರಿಯನ್ನ ಮುಗಿಸಿದ್ದು, ಈ ಆಸ್ಪತ್ರೆಯನ್ನ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.28 ರಂದು ಉದ್ಘಾಟನೆ ಮಾಡಲಿದ್ದು ಸಂತೋಷ ಜನರಲ್ಲಿದೆ ಹಾಗೇಯೆ ಆಸ್ಪತ್ರೆ ನಿರ್ಮಾಣದ ವೇಳೆ ಹಿರಿಯ ನಟಿ ಲೀಲಾವತಿ ಸಂತಸವನ್ನ ವ್ಯಕ್ತಪಡಿಸಿದ್ದರು
ಒಟ್ಟಾರೆ ಸಮಾಜದ ಏಳಿಗೆಗಾಗಿ ಈ ಇಳಿ ವಯಸ್ಸಿನಲ್ಲಿ ಹಾಗೂ ನಿರಂತರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಯೋಗಕ್ಷೇಮದ ಬಗ್ಗೆ ಕಾಳಜಿ ನಿಜಕ್ಕೂ ಈ ನಾಡಿಗೆ ಮಾದರಿಯಾಗಿದ್ದಾರೆ ತಾಯಿ ಮಗ.