ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾ​ಯ​ನಿಕ ಮತ್ತು ರಸ​ಗೊ​ಬ್ಬ​ರ​ಗಳ ಸಚಿವ ಡಾ.ಮ​ನ್ಸುಕ್‌ ಎಲ್‌.ಮಾಂಡ​ವಿಯಾ, ಜಿಲ್ಲಾ ಉಸ್ತು​ವಾ​ರಿ ಸಚಿವ ಡಾ.ಅಶ್ವತ್ಥ ನಾರಾ​ಯಣ, ಕಂದಾಯ ಸಚಿವ ಆರ್‌.ಅ​ಶೋಕ್‌, ಆರೋಗ್ಯ ಸಚಿವ ಡಾ.ಸು​ಧಾ​ಕರ್‌, ತೋಟ​ಗಾ​ರಿಕೆ ಸಚಿವ ಮುನಿ​ರತ್ನ ಸೇರಿ​ದಂತೆ ಅನೇ​ಕರು ಭಾಗ​ವ​ಹಿ​ಸ​ಲಿ​ದ್ದಾ​ರೆ.

ರಾಮ​ನ​ಗರ(ಮಾ.27): ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾ​ಯಿ​, ಸಚಿವ ಸಹೊ​ದ್ಯೋ​ಗಿ​ಗ​ಳೊಂದಿಗೆ ಇಂದು(ಸೋಮವಾರ) ಶಂಕು​ಸ್ಥಾ​ಪನೆ ನೆರ​ವೇ​ರಿ​ಸ​ಲಿ​ರುವ ಸಾವಿ​ರಾರು ಕೋಟಿ ರು. ವಿವಿಧ ಅಭಿ​ವೃದ್ಧಿ ಕಾರ್ಯ​ಗಳ ಸಮಾ​ರಂಭದ ಸಿದ್ಧ​ತೆ​ಗಳು ಪೂರ್ಣ​ಗೊಂಡಿದೆ. ನಗ​ರದ ಹೊರ ವಲ​ಯದ ಅರ್ಚ​ಕ​ರ​ಹ​ಳ್ಳಿಯ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾ​ನ​ಗಳ ವಿಶ್ವ ವಿದ್ಯಾ​ಲಯ ಕ್ಯಾಂಪಸ್‌ ಆವ​ರ​ಣ​ದಲ್ಲಿ ಬೃಹತ್‌ ವೇದಿಕೆ ನಿರ್ಮಿ​ಸ​ಲಾ​ಗಿದೆ. ಗಣ್ಯರು, ಸರ್ಕಾ​ರದ ವಿವಿಧ ಯೋಜ​ನೆ​ಗಳ ಫಲಾ​ನು​ಭ​ವಿ​ಗಳು ಹಾಗೂ ಜನ​ರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡ​ಲಾ​ಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾ​ಯ​ನಿಕ ಮತ್ತು ರಸ​ಗೊ​ಬ್ಬ​ರ​ಗಳ ಸಚಿವ ಡಾ.ಮ​ನ್ಸುಕ್‌ ಎಲ್‌.ಮಾಂಡ​ವಿಯಾ, ಜಿಲ್ಲಾ ಉಸ್ತು​ವಾ​ರಿ ಸಚಿವ ಡಾ.ಅಶ್ವತ್ಥ ನಾರಾ​ಯಣ, ಕಂದಾಯ ಸಚಿವ ಆರ್‌.ಅ​ಶೋಕ್‌, ಆರೋಗ್ಯ ಸಚಿವ ಡಾ.ಸು​ಧಾ​ಕರ್‌, ತೋಟ​ಗಾ​ರಿಕೆ ಸಚಿವ ಮುನಿ​ರತ್ನ ಸೇರಿ​ದಂತೆ ಅನೇ​ಕರು ಭಾಗ​ವ​ಹಿ​ಸ​ಲಿ​ದ್ದಾ​ರೆ.

ಇಬ್ಬರು ಘಟಾನುಘಟಿ ನಾಯಕರ ಸ್ಪರ್ಧೆ: ಬೊಂಬೆನಗರಿ ಚನ್ನಪಟ್ಟಣ ಹೈವೋಲ್ಟೇಜ್ ಕದನ!

ರಾ​ಜೀವ್‌ ಗಾಂಧಿ ವಿವಿಗೆ ಶಂಕುಸ್ಥಾಪನೆ:

ರಾಜೀವ್‌ ಗಾಂಧಿ ಆರೋಗ್ಯ ವಿವಿ ಕೇಂದ್ರ ಕಚೇರಿ ರಾಮನಗರದ ಅರ್ಚಕರಹಳ್ಳಿ ಬಳಿ 270 ಎಕರೆ ಜಮೀನಿನಲ್ಲಿ 600 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆರೋಗ್ಯ ವಿವಿ ಕ್ಯಾಂಪಸ್‌ ನಲ್ಲಿ 750 ಹಾಸಿಗೆಗಳು ಒಳಗೊಂಡಿರುತ್ತದೆ. ಈ ಹೈಟೆಕ್‌ ಆಸ್ಪತ್ರೆ ಜಿಲ್ಲೆಯ ಜನರು ಚಿಕಿತ್ಸೆಗಾಗಿ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ.

ಜಲಜೀವನ್‌ ಮಿಷನ್‌ ಯೋಜನೆ:

ಕೇಂದ್ರ ಸರ್ಕಾರದ ಜಲ ಜೀವನ್‌ ಮಿಷನ್‌ ಯೋಜನೆಯಡಿ ರಾಮನಗರ ಜಿಲ್ಲೆಯ ಎಲ್ಲಾ ಜನವಸತಿಗಳ ಪ್ರತಿಯೊಂದು ಮನೆಗಳಿಗೆ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿಗಳನ್ನು 2023ರೊಳಗೆ ಪೂರ್ಣಗೊಳಿಸಲಾಗುವುದು. ಜಲಜೀವನ್‌ ಮಿಷನ್‌ ಯೋಜನೆಯಡಿ ಮೊದಲನೇ ಹಂತದಲ್ಲಿ 808 ಜನವಸತಿಗಳನ್ನು ಆಯ್ಕೆ ಮಾಡಿದ್ದು, 658 ಕಾಮಗಾರಿಗಳು ನಡೆಯುತ್ತಿದ್ದು, ಇದರಲ್ಲಿ 607 ಕಾಮಗಾರಿಗಳು ಪೂರ್ಣಗೊಂಡಿದೆ. ಇನ್ನು 51 ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಕ್ಕಾಗಿ 106.54 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ. ಎರಡನೇ ಹಂತದಲ್ಲಿ 136 ಜನವಸತಿಗಳನ್ನು ಆಯ್ಕೆ ಮಾಡಿದ್ದು ಅಂದಾಜು 5004.00 ಲಕ್ಷಗಳ ವೆಚ್ಚದಲ್ಲಿ 132 ಡಿಪಿಆರ್‌ಗಳ ಪೈಕಿ 132 ಗಳಿಗೆ ಕಾರ್ಯಾದೇಶ ನೀಡಲಾಗಿದೆ. ಇದರಲ್ಲಿ 68 ಕಾಮಗಾರಿಗಳು ಪೂರ್ಣಗೊಂಡಿದ್ದು 63 ಕಾಮಗಾರಿಗಳು ಪ್ರಗತಿಯಲ್ಲಿವೆ.

ಮೂರನೇ ಹಂತದಲ್ಲಿ ಹೆಚ್ಚುವರಿಯಾಗಿ 1008 ಜನವಸತಿ ಗುರುತಿಸಿದ್ದು, ಅಂದಾಜು ವೆಚ್ಚ ರೂ. 26,512.21 ಗಳಲ್ಲಿ 697 ಡಿಪಿಆರ್‌ಗಳ ಪೈಕಿ 245 ಗಳಿಗೆ ಕಾರ್ಯಾದೇಶ ನೀಡಲಾಗಿದೆ. 173 ಕಾಮಗಾರಿಗಳು ಪ್ರಾರಂಭಗೊಂಡಿದ್ದು ಉಳಿದ 142 ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆಯಲ್ಲಿರುತ್ತವೆ. ಇನ್ನು ಹೆಚ್ಚುವರಿಯಾಗಿ 47 ಜನವಸತಿಗಳನ್ನು ಗುರುತಿಸಿದ್ದು, ಅಂದಾಜು ವೆಚ್ಚ 1076.65 ರು.ಗಳಲ್ಲಿ 41 ಡಿಪಿಆರ್‌ಗಳ ಪೈಕಿ 5 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದೆ ಉಳಿದ 36 ಕಾಮಗಾರಿಗಳು ಟೆಂರ್ಡ ಪ್ರಕ್ರಿಯೆಯಲ್ಲಿದೆ.

ಬಹುಗ್ರಾಮ ಕುಡಿವ ನೀರಿನ ಯೋಜನೆ :

670.00 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಮಾಗಡಿ ತಾಲೂಕಿನ 625 ಗ್ರಾಮಗಳಿಗೆ ಮತ್ತು ರಾಮನಗರ ತಾಲೂಕಿನ 250 ಗ್ರಾಮಗಳಿಗೆ ನೀರು ಪೂರೈಸಲಾಗುವುದು. ರಾಮನಗರದ 94 ಗ್ರಾಮಗಳಿಗೆ ಹಾಗೂ ಮಾಗಡಿಯ 72 ಗ್ರಾಮಗಳಿಗೆ ವೈ.ಜಿ.ಗುಡ್ಡ ಎಂ.ಐ ಟ್ಯಾಂಕ್‌ ಯೋಜನೆಗೆ 155 ಕೋಟಿ ವೆಚ್ಚದಲ್ಲಿ ನೀರು ಪೂರೈಸಲಾಗುವುದು. ಕನಕಪುರ ತಾಲೂಕಿನ ದೊಡ್ಡಮರಳವಾಡಿ ಹಾಗೂ 256 ಜನವಸತಿಗಳಿಗೆ ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ 77 ಜನವಸತಿಗಳು ಮತ್ತು ಆನೇಕಲ… ತಾಲೂಕಿನ 97 ಜನವಸತಿಗಳಿಗೆ ಇಗ್ಗಲೂರು ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 490 ಕೋಟಿ ರು.ಗಳಲ್ಲಿ ನಿರ್ಮಾಣವಾಗ​ಲಿ​ದೆ.

ಹೈಟೆಕ್‌ ರೇಷ್ಮೆ ಮಾರುಕಟ್ಟೆ:

75 ಕೋಟಿ ರು. ವೆಚ್ಚದ ರಾಮನಗರ-ಚನ್ನಪಟ್ಟಣ ಹೈಟೆಕ್‌ ರೇಷ್ಮೆ ಗೂಡಿನ ಮಾರುಕಟ್ಟೆನಿರ್ಮಾಣಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಅನುದಾನ ಸಹ ಬಿಡುಗಡೆಯಾಗಿದೆ.

ಮಾವು ಉತ್ಪನಗಳ ಸಂಸ್ಕರಣಾ ಘಟಕ:

ರಾಮನಗರ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನಗಳ ಸಂಸ್ಕರಣಾ ಘಟಕಗಳ ಹಬ… ಸ್ಥಾಪಿಸಲು ಚನ್ನಪಟ್ಟಣ ತಾಲೂಕಿನ ಭೈರಾಪಟ್ಟಣ ತೋಟಗಾರಿಕೆ ಕ್ಷೇತ್ರದಲ್ಲಿ 15 ಎಕರೆ ಜಮೀನಿನಲ್ಲಿ 4 ಎಕರೆ ಜಮೀನಿನಲ್ಲಿ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆನಿಮಗ ವತಿಯಿಂದ, ವಿವಿಧ ತೋಟಗಾರಿಕೆ ಬೆಳೆಗಳ ಕೋಯ್ಲೋತ್ತರ ತಂತ್ರಜ್ಞಾನ ಅಳವಡಿಕೆ, ತರಬೇತಿ, ಮಾರುಕಟ್ಟೆಮತ್ತು ವಿವಿಧ ಉಪಕರಣಗಳ ಅಳವಡಿಕೆ ಮಾಡಲು ತೀರ್ಮಾನಿಸಲಾಗಿದೆ. ಇನ್ನೂ ಉಳಿದ 11 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನಗಳ ಸಂಸ್ಕರಣಾ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.

ನನ್ನನ್ನು ಕಟ್ಟಿ​ಹಾ​ಕಲು ಯಾರಿಂದಲೂ ಆಗು​ವು​ದಿಲ್ಲ: ಎಚ್‌.ಡಿ.ಕುಮಾ​ರ​ಸ್ವಾಮಿ

ಕೆಎಸ್‌ಐಸಿ ಮಾರಾಟ ಮಳಿಗೆ:

ರಾಮನಗರ-ಚನ್ನಪಟ್ಟಣ ಹೆದ್ದಾರಿಯಲ್ಲಿರುವ ಕೆಎಸ್‌ಐಸಿ ಮಾರಾಟ ಮಳಿಗೆ ಉನ್ನತೀಕರಿಸಲಾಗಿದೆ. ಕೆಎಸ್‌ಐಸಿ ಮಾರಾಟ ಮಳಿಗೆಗೆ ಆಗಮಿಸುವ ಗ್ರಾಹಕರಿಗೆ ಅನುಕೂಲವಾಗುವಂತೆ ರೆಸ್ಟೋರೆಂಟ್‌ ನಿರ್ಮಾಣ ಮಾಡಲಾಗಿದೆ. ಇಲ್ಲಿ ಮಕ್ಕಳಿಗೆ ಆಟದ ಮೈದಾನ, ಪಾರ್ಕಿಂಗ್‌, ಶೌಚಾಯಲ ನಿರ್ಮಿಸಲಾಗಿದೆ. ಒಟ್ಟಾರೆ 5.23 ಕೋಟಿ ವೆಚ್ಚ ಮಾಡಲಾಗಿದೆ.

ನಾಳೆಯ ಮುಖ್ಯ​ಮಂತ್ರಿಗಳ ಕಾರ್ಯ​ಕ್ರ​ಮಕ್ಕೆ ಬೆಳಗ್ಗೆ ಯಾರೊ ಬಂದು ಆಹ್ವಾನ ಪತ್ರ ನೀಡಿದ್ದಾರೆ. ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಹಲವು ಬಾರಿ ಶಂಕುಸ್ಥಾಪನೆ ಮಾಡಿದ್ದಾರೆ. ಈಗಲೂ ಮಾಡು​ತ್ತಿ​ದ್ದಾರೆ. ಮುಂದೆ ಹೊಸ ಸರ್ಕಾರ ಬರುತ್ತದೆ. ಆಗ ಏನಾಗುತ್ತದೊ ನೋಡೋಣ ಅಂತ ಸಂಸ​ದ ಡಿ.ಕೆ.​ಸು​ರೇಶ್‌ ತಿಳಿಸಿದ್ದಾರೆ.