ಇಬ್ಬರು ಘಟಾನುಘಟಿ ನಾಯಕರ ಸ್ಪರ್ಧೆ: ಬೊಂಬೆನಗರಿ ಚನ್ನಪಟ್ಟಣ ಹೈವೋಲ್ಟೇಜ್ ಕದನ!

ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬೊಂಬೆನಗರಿ ಚನ್ನಪಟ್ಟಣ ಕೂಡ ಒಂದು ಇಲ್ಲಿ ಸ್ಪರ್ಧಿಸಿರುತ್ತಿರುವ ಇಬ್ಬರು ಘಟಾನುಘಟಿ ನಾಯಕರು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇವರಿಬ್ಬರ ಸ್ಪರ್ಧೆಗೆ ಬಲ ತುಂಬಲು ಮತ್ತಿಬ್ಬರು ಪ್ರಚಾರಕ್ಕೆ ಮುಂದಾಗಿದ್ದಾರೆ ಅವರು ಯಾರು ಅಂತೀರಾ.? ಮುಂದೆ ಓದಿ.

HD kumar swamy vs CP Yogeshwar contest High voltage channapatna assembly constituency at ramanagar rav

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಮಾ.26): ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬೊಂಬೆನಗರಿ ಚನ್ನಪಟ್ಟಣ ಕೂಡ ಒಂದು ಇಲ್ಲಿ ಸ್ಪರ್ಧಿಸಿರುತ್ತಿರುವ ಇಬ್ಬರು ಘಟಾನುಘಟಿ ನಾಯಕರು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇವರಿಬ್ಬರ ಸ್ಪರ್ಧೆಗೆ ಬಲ ತುಂಬಲು ಮತ್ತಿಬ್ಬರು ಪ್ರಚಾರಕ್ಕೆ ಮುಂದಾಗಿದ್ದಾರೆ ಅವರು ಯಾರು ಅಂತೀರಾ.

ಹೌದು ಬೊಂಬೆನಗರಿ ಚನ್ನಪಟ್ಟಣ(Channapattana)ದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಹಾಗೂ ಮಾಜಿ ಸಚಿವರು ಹಾಗೂ ಹಾಲಿ ಎಂಎಲ್ಸಿ ಸಿಪಿ ಯೋಗೇಶ್ವರ್(CP Yogeshwar) ಸ್ಪರ್ಧೆ ಮಾಡುತ್ತಿದ್ದಾರೆ. ಇವರಿಬ್ಬರ ಸ್ಪರ್ಧೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ(Channapattana assembly constituency)ವನ್ನು ಇಡೀ ರಾಜ್ಯವೇ ಕುತೂಹಲಕಾರಿಯಾಗಿ ನೋಡುತ್ತಿದ್ದಾರೆ. 

ವಿಧಾನಸಭಾ ಚುನಾವಣೆ: ಬೇಳೂರು ‘ಕೈ’ಗೆ ಟಿಕೆ​ಟ್‌: ಸಾಗರ ಕ್ಷೇತ್ರ​ದಲ್ಲಿ ಹೈವೋ​ಲ್ಟೇ​ಜ್‌ ಕದನ

ಕಳೆದ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕಡೆ ಸ್ಪರ್ಧೆ ಮಾಡಿ ಎರಡರಲ್ಲೂ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿರುವುದು ತುಂಬಾ ಕೂತುಹಲಕಾರಿಯಾಗಿದೆ. ಜೊತೆಗೆ ಕಳೆದ ಬಾರಿ ಸೋಲು ಅನುಭವಿಸಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಈ ಬಾರಿ ಗೆಲ್ಲಲೇ ಬೇಕು ಎಂದು ಪಣತೊಟ್ಟು ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿ ಗ್ರಾಮಗಳಿಗೆ ಸ್ವಾಭಿಮಾನಿ ಸಂಕಲ್ಪ ಯಾತ್ರೆ ಮುಖಾಂತರ ಗೆಲುವಿಗಾಗಿ ಮತದಾರರನ್ನು ತನ್ನ ಕಡೆ ಸೆಡೆಯುತ್ತಿದ್ದಾರೆ.

ಆದರೆ ಇವರಿಬ್ಬರ ಜಟಾಪಟಿ ನಡುವೆ ಮತ್ತೆ ಇಬ್ಬರು ಪ್ರಚಾರದ ಕಣಕ್ಕೆ ಧುಮುಕಿದ್ದಾರೆ. ತಮ್ಮ ತಮ್ಮ ಪತಿಯನ್ನು ಗೆಲ್ಲಿಸಬೇಕು ಎಂದು ಇಬ್ಬರ ಪತ್ನಿಯರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಕಳೆದ ಬಾರಿ ರಾಮನಗರದಿಂದ ಸ್ಪರ್ಧೆ ಮಾಡಿ ಶಾಸಕರು ಆಗಿದ್ದ ಅನಿತಾ ಕುಮಾರಸ್ವಾಮಿ ತನ್ನ ಕ್ಷೇತ್ರವನ್ನು ಮಗನಿಗಾಗಿ ತ್ಯಾಗ ಮಾಡಿ ಗಂಡನ ಹಾಗೂ ಮಗನ ಗೆಲುವಿಗಾಗಿ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ. ಎಚ್ ಡಿ ಕುಮಾರಸ್ವಾಮಿ ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳಲು ರಾಜ್ಯ ಪ್ರವಾಸದಲ್ಲಿರುವ ಕಾರಣ ಪತಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಅನಿತಾ ಕುಮಾರಸ್ವಾಮಿ ಮುಂದಾಗಿದ್ದಾರೆ..‌

ಇನ್ನು ಸಿಪಿ ಯೋಗೇಶ್ವರ್ ಪತ್ನಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವಾಗಿದ್ದು, ತಮ್ಮ ಪತಿ ಗೆಲುವಿಗಾಗಿ ಕ್ಷೇತ್ರದಲ್ಲಿ ಪ್ರಚಾರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕಷ್ಟ ನೋಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಸೋಲು ಕಂಡಿರುವ ಪತಿಗಾಗಿ ಈ ಬಾರಿ ಗೆಲುವಿಗಾಗಿ ಮಹಿಳೆಯರು ಹಾಗೂ ಮಹಿಳಾ ಸಂಘಗಳ ಜೊತೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.

ಆದರೆ ಕಾಂಗ್ರೆಸ್ನ ಮೊದಲ ಪಟ್ಟಿ ಬಿಡುಗಡೆ ಆಗಿದ್ದು ಅದರಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಹೆಸರು ಇಲ್ಲದಿರುವುದು ತುಂಬಾ ಕುತೂಹಲಕ್ಕೆ ಕಾರಣವಾಗಿದೆ. ಚನ್ನಪಟ್ಟಣದಿಂದ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಕರೆ ತರಲು ಡಿಕೆ ಬ್ರದರ್ ಮುಂದಾಗಿದ್ದು ಸಿಪಿವೈ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರಾ ಎಂಬ ವದಂತಿಗಳು ಕೂಡ ಹೆಚ್ಚಾಗಿದೆ. ಎಐಸಿಸಿ ಸರ್ವೆ ಪ್ರಕಾರ ಸಿಪಿವೈ ಕಾಂಗ್ರೆಸ್ ಗೆ ಬಂದ್ರೆ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಸೋಲಿಸುವುದು ತುಂಬಾ ಸುಲಭ ಎಂಬುದು ಸರ್ವೆಯಲ್ಲಿ ತಿಳಿದು ಬಂದಿದೆ ಹಾಗಾಗಿ ಸಿಪಿವೈ ಮೇಲೆ ಕಾಂಗ್ರೆಸ್ ನವರು ಗಮನ ಹರಿಸುತ್ತಿದ್ದಾರೆ.

ಹುಬ್ಬಳ್ಳಿ ಅತಿರಥರ ಅಖಾಡ: ಬಿಜೆಪಿ ಭದ್ರಕೋಟೆಯಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?

ಒಟ್ಟಾರೆ ರಾಜ್ಯವೇ ಈ ಬಾರಿ ಚನ್ನಪಟ್ಟಣದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಗೆಲ್ತಾರೆ ಯಾರು ಸೋಲ್ತಾರ ಎಂಬುದನ್ನು ಕುತೂಹಲಕಾರಿಯಾಗಿ ಗಮನಿಸುತ್ತಿದ್ದಾರೆ ಇದಕ್ಕೆಲ್ಲ ಉತ್ತರ ಚುನಾವಣೆ ಫಲಿತಾಂಶ ಬಂದ ನಂತರ ಗೊತ್ತಾಗಲಿದೆ....

Latest Videos
Follow Us:
Download App:
  • android
  • ios