'ಆಲಮಟ್ಟಿ ಜಲಾಶಯಕ್ಕೆ ಶೀಘ್ರವೇ ಸಿಎಂ ಬಾಗಿನ'

ಬಾಗಲಕೋಟೆಗೆ ಶೀಘ್ರವೇ ಮುಖ್ಯಮಂತ್ರಿಗಳು ಆಗಮಿಸುವಂತೆ ಆಹ್ವಾನ ನೀಡಲಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ: ಶಾಸಕ ವೀರಣ್ಣ ಚರಂತಿಮಠ 

CM Basavaraj Bommai Bagina to Almati Dam Soon Says MLA Veeranna Charantimatha grg

ಬಾಗಲಕೋಟೆ(ಆ.24):  ನವನಗರದ ಅಭಿವೃದ್ಧಿ ನಿಟ್ಟಿನಲ್ಲಿ ಬಿ.ಟಿ.ಡಿ.ಎ ವತಿಯಿಂದ ಪೂರ್ಣಗೊಳಿಸಲಾದ 61 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳನ್ನು ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಮಂಗಳವಾರ ಲೋಕಾರ್ಪಣೆ ಮಾಡಿದರು.

ಬಾಗಲಕೋಟೆ ನವನಗರದ ಯೂನಿಟ್‌-3ರಲ್ಲಿ ಬರುವ ದಡ್ಡನವರ ಕ್ರಾಸ್‌ದಿಂದ ಸಿಮೆಂಟ್‌ ಪ್ಯಾಕ್ಟರಿ ವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೊಳಿಸಲಾದ 510.49 ಲಕ್ಷದ ಕಾಮಗಾರಿ, ಸಿಮೆಂಟ್‌ ಪ್ಯಾಕ್ಟರಿ ವೃತ್ತದಿಂದ ರಾಯಚೂರ-ಬಾಚಿ ರಸ್ತೆವರೆಗೆ ಅಭಿವೃದ್ಧಿ ಪಡಿಸಲಾದ 1445.81 ಲಕ್ಷದ ರಸ್ತೆ ಕಾಮಗಾರಿ, ನವನಗರದ ಯೂನಿಟ್‌-2 ರಲ್ಲಿಯ ಜೆ ರಸ್ತೆಯನ್ನು, ರಸ್ತೆ ಸಂಖ್ಯೆ 11 ರಿಂದ ರಾಷ್ಟ್ರೀಯ ಹೆದ್ದಾರಿ 218 ರವರೆಗೆ ನಿರ್ಮಿಸಲಾದ 2630.67 ಲಕ್ಷದ ಕಾಮಗಾರಿ ಮತ್ತು ರಸ್ತೆಯ ವಿದ್ಯುತ್‌ ಬೀದಿ ದೀಪಗಳ ವಾರ್ಷಿಕ ನಿರ್ವಹಣೆ ಹಾಗೂ ಹಲೋ ಬಿ.ಟಿ.ಡಿ.ಎ ವಿದ್ಯುತ್‌ ಸಹಾಯವಾಣಿ 76.88 ಲಕ್ಷದ ಕಾಮಗಾರಿ, ನವನಗರದ ಸೆಕ್ಟರ್‌ ನಂ 89 ರಲ್ಲಿ ನಿರ್ಮಾಣ ಮಾಡಿರುವ ಸಮುದಾಯ ಭವನ, ವಾಣಿಜ್ಯ ಸಂಕೀರ್ಣ ಕ್ರಮವಾಗಿ 80.00 ಮತ್ತು 91.54 ಲಕ್ಷದ ಕಾಮಗಾರಿ, ನವನಗರದ ಸಿ ರಸ್ತೆ ಹಾಗೂ ಎಂ.ಬಿ.ಎ ಕಾಲೇಜು ವೃತ್ತದಿಂದ ರಾಯಚೂರು ಬಾಚಿ ರಸ್ತೆ ವರೆಗಿನ ಅಭಿವೃದ್ಧಿ ಪಡಿಸಲಾದ 1259.61 ಲಕ್ಷ ಕಾಮಗಾರಿ ಸೇರಿದಂತೆ ಒಟ್ಟು 6095.00 ಲಕ್ಷಗಳ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಬಾಗಲಕೋಟೆ ಸಾರ್ವಜನಿಕರು ಈ ಎಲ್ಲ ಮೂಲಭೂತ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾಂಗ್ರೆಸ್‌ನಲ್ಲಿ ನಿಲ್ಲದ ಬಣ ರಾಜಕಾರಣ: ರಾಜ್ಯ ನಾಯಕರಿಗೆ ಕ್ಯಾರೆ ಅನ್ನದ ಕೈ ಪಕ್ಷದ ಆಕಾಂಕ್ಷಿಗಳು

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಬಾಗಲಕೋಟೆಗೆ ಶೀಘ್ರವೇ ಮುಖ್ಯಮಂತ್ರಿಗಳು ಆಗಮಿಸುವಂತೆ ಆಹ್ವಾನ ನೀಡಲಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ, ನೀರಾವರಿ ಯೋಜನೆಗಳಿಗೆ ಅಡಿಗಲ್ಲು, ಕಿಲ್ಲಾದ ನಡುಗಡ್ಡೆ ಪುನರ್ವಸತಿ ಕಾರ್ಯಕ್ರಮಗಳು ಸೇರಿ ಹಲವಾರು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳಿಂದ ನಡೆಸಲಾಗುವುದು ಎಂದರು.

ಇಂದಿರಾ ಗಾಂ​ಧಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕರು ಸಸಿಯನ್ನು ನೆಟ್ಟರು. ನಂತರ ಹಲೋ ಬಿ.ಟಿ.ಡಿ.ಎ. ವಿದ್ಯುತ್‌ ಕಟ್ಟಡ ಪರಿಶೀಲಿಸಿದರು. ಕಿಲ್ಲಾದ ಹಳೆಯ ಒಟ್ಟು 1100 ಮನೆಗಳ ಸ್ಥಳಾಂತರಕ್ಕೆ 114 ಕೋಟಿ ರು. ವೆಚ್ಚದಲ್ಲಿ ಸರಕಾರವು ಒಪ್ಪಿಗೆ ನೀಡಿದ್ದು, ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗುವುದು ಎಂದರು.

ಅಗತ್ಯ ಬಿದ್ದಾಗ ಸರ್ಕಾರದ ಲೋಪ ಬಯಲಿಗೆ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರರಾವ್

ನಗರ ಸಭೆಯ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿ.ಟಿ.ಡಿ.ಎ. ಸದಸ್ಯರುಗಳಾದ ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳೆ, ಮೋಹನ ನಾಡಗೌಡರ, ಮುಖ್ಯ ಎಂಜನಿಯರ್‌ ಮನ್ಮಥಯ್ಯ ಸ್ವಾಮಿ, ಅಧಿ​ೕಕ್ಷಕ ಎಂಜನಿಯರ್‌ ಕಟ್ಟಿಮನಿ, ವಿ.ಸಿ ಹೆಬ್ಬಳ್ಳಿ, ಡಿ.ಜಿ ಕಲ್ಲೂರುಮಠ ಸೇರಿದಂತೆ ಇತರರು ಇದ್ದರು.

ಬಾಗಲಕೋಟೆಗೆ ಶೀಘ್ರವೇ ಮುಖ್ಯಮಂತ್ರಿಗಳು ಆಗಮಿಸುವಂತೆ ಆಹ್ವಾನ ನೀಡಲಾಗಿದ್ದು, ಆಲಮಟ್ಟಿಜಲಾಶಯಕ್ಕೆ ಬಾಗಿನ ಅರ್ಪಣೆ, ನೀರಾವರಿ ಯೋಜನೆಗಳಿಗೆ ಅಡಿಗಲ್ಲು, ಕಿಲ್ಲಾದ ನಡುಗಡ್ಡೆ ಪುನರ್ವಸತಿ ಕಾರ್ಯಕ್ರಮಗಳು ಸೇರಿ ಹಲವಾರು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳಿಂದ ನಡೆಸಲಾಗುವುದು ಅಂತ ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios