ಅಗತ್ಯ ಬಿದ್ದಾಗ ಸರ್ಕಾರದ ಲೋಪ ಬಯಲಿಗೆ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರರಾವ್

ನಾನು ಸರ್ಕಾರದ ಒಳಗಿದ್ದು ಕೆಲಸ ಮಾಡಿದ್ದೇನೆ. ನನಗೆ ಸಾಕಷ್ಟು ಸರ್ಕಾರದ ಲೋಪಗಳ ಬಗ್ಗೆ  ಮಾಹಿತಿ ಇದ್ದೆ ಇರುತ್ತೆ. ಅದರ ಬಗ್ಗೆ ಪ್ರಚಾರ ಮಾಡಬೇಕಾದ ಅವಶ್ಯಕತೆ ಇಲ್ಲ. ಎಂದು ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್ ಹೇಳಿದ್ದಾರೆ.

police officer bhaskar rao and aap prithvi reddy press meet in bagalkot gow

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಆ.23): ನಾನು ಸರ್ಕಾರದ ಒಳಗಿದ್ದು ಕೆಲಸ ಮಾಡಿದ್ದೇನೆ. ನನಗೆ ಸಾಕಷ್ಟು ಸರ್ಕಾರದ ಲೋಪಗಳ ಬಗ್ಗೆ  ಮಾಹಿತಿ ಇದ್ದೆ ಇರುತ್ತೆ. ಅದರ ಬಗ್ಗೆ ಪ್ರಚಾರ ಮಾಡಬೇಕಾದ ಅವಶ್ಯಕತೆ ಇಲ್ಲ. ಅವುಗಳ ಅವಶ್ಯಕತೆ ಬಿದ್ದಾಗ ಬಳಕೆ ಮಾಡುತ್ತೇನೆ ಎಂದು ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್ ಹೇಳಿದರು.  ಬಾಗಲಕೋಟೆ ನಗರದಲ್ಲಿ ಇಂದು ಮಾದ್ಯಮಗೋಷ್ಠಿ ನಡೆಸಿ  ಮಾತನಾಡಿದ ಅವರು,  ಸ್ವಾಭಿಮಾನಿಗಳು ಯಾರೂ ಇಂತಹ ಸರ್ಕಾರದಲ್ಲಿ ಇರಲು ಇಷ್ಟಪಡಲ್ಲ . ಎಲ್ಲಾ ಕಚೇರಿಗಳಲ್ಲೂ 40% ದುಡ್ಡು ವಸೂಲಿ ಹಾವಳಿ ಇದೆ. ಇಂತಹದರಲ್ಲಿ ಸ್ವಾಭಿಮಾನಿಗಳು ಬದುಕಲು ಇಷ್ಟಾ ಪಡ್ತಾರಾ ಎಂದು ಪ್ರಶ್ನಿಸಿದರು.  ಸರ್ಕಾರದ ಲೋಪದೋಷಗಳು ನನಗೆ ಗೊತ್ತಿವೆ, ಸಂದರ್ಭ ಬಂದಾಗ ಹೊರ ಹಾಕುತ್ತೇನೆ.  ಸರ್ಕಾರಕ್ಕೆ ಭಾಸ್ಕರ್ ರಾವ್ ಭಯವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಸ್ಕರರಾವ್,  ಸರ್ಕಾರದ ಮನೆ ಒಳಗೆ ಇದಿನಿ ಅಂದ್ರೆ ಆ ಮನೆಯಲ್ಲಿ ಎಲ್ಲ ಬೆಳವಣಿಗೆಯೂ ನಮಗೆ ಗೊತ್ತು. ಸಮಯ ಸಂದರ್ಭ ಬಂದಿಲ್ಲ, ಸಮಯ ಬಂದಾಗ ಅವುಗಳ ಬಗ್ಗೆ ಮಾತನಾಡುತ್ತೇನೆ. ನಮ್ಮನ್ನು ಸಮಸ್ಯೆಗೆ ಸಿಲುಕಿಸಿದಾಗ ನಮ್ಮ ರಕ್ಷಣೆಗೆ ಆಗ ಅವುಗಳನ್ನ ಬಳಕೆ ಮಾಡುತ್ತೇನೆ ಎಂದರು. ನಾನು ನಿಮ್ಮ ನೌಕರಿನೇ ಬೇಡ ಅಂತಾ ಬಂದಿದ್ದೇನೆ, ಆದ್ರೂ ರಾಜೀನಾಮೆ ಅಂಗಿಕರಿಸಿಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.

ರಾಷ್ಟ್ರೀಯ ಪಕ್ಷಗಳಿಗೆ ಆಮ್ ಆದ್ಮಿ ಭಯ  ಕಾಡುತ್ತಿದೆ ; ಪೃಥ್ವಿ ರೆಡ್ಡಿ
ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಆಮ್ ಆದ್ಮಿ ಭಯ ಕಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
 ನಗರದಲ್ಲಿ ಇಂದು  ಮಾತನಾಡಿದ ಅವರು ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಪಕ್ಷಗಳು ನೋಟು ಕೊಟ್ಟು ವೋಟು ಪಡೆಯಲು ಯತ್ನಿಸಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ ಅವರು ನಮ್ಮ ಮತದಾರರನ್ನು ಖರೀದಿಸಲು ಆಗಲ್ಲ ಅನ್ನೋದು ಅವರಿಗೆ ತಿಳಿದಿದೆ ಎಂದರು.

PSI SCAM : ಹಗರಣದ ವಾಸನೆ ನನಗೆ ಮೊದಲೇ ಸಿಕ್ಕಿತ್ತು- ಮಾಜಿ  ಕಮಿಷನರ್ ಭಾಸ್ಕರ್ ರಾವ್

 ರಾಜ್ಯದ ಜನರ ಮನಸಿನಲ್ಲಿ ಆಮ್ ಆದ್ಮಿ ಬಂದಿದೆ. ಅಗತ್ಯ ಬಲ ನಮಗೆ ಸಿಗಲಿದೆ. ರಾಜ್ಯದಲ್ಲಿ ಗ್ರಾಮ ಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು, ಪಕ್ಷ ಸಂಘಟನೆ ಭೂತ್ ಮಟ್ಟದಿಂದ ಮಾಡಬೇಕು ಅಂತಾ ಅಂದು ಕೊಂಡಿದ್ದೇವೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿರೆಡ್ಡಿ ಹೇಳಿದರು. 

ಜೆಸಿಬಿ’ ಪಕ್ಷಗಳ ಆಡಳಿತ ಸರಿಯಾಗಿದ್ದಿದ್ದರೆ ಆಪ್‌ ಅಗತ್ಯ ಇರಲಿಲ್ಲ

ಹಳ್ಳಿ ಹಳ್ಳಿಯಿಂದ ಆಮ್ ಆದ್ಮಿ ಪಕ್ಷ ಸಂಘಟಿಸಲು ಯುವಕರು ಮುಂದೆ ಬಂದಿದ್ದಾರೆ. ಪಕ್ಷ ಸಂಘಟನೆಗೆ ಯಾರು ಶ್ರಮ ಪಡ್ತಾರೆ ಅವರಿಗೆ ಪಕ್ಷ ಒಳ್ಳೆಯ ಅವಕಾಶ ನೀಡಲಾಗುತ್ತದೆ ಎಂದರು.   ನಮ್ಮ ಪಕ್ಷದ ಅಭ್ಯರ್ಥಿಗಳು ಇತಿಹಾಸ ಸೃಷ್ಠಿಸುವವರು. ಪಂಜಾಬ್ ನಲ್ಲಿ ಸಿಎಂ ಕ್ಯಾಂಡೀಡೇಟನ್ನೆ ನಮ್ಮ ಪಕ್ಷದ ಬಡ ಅಭ್ಯರ್ಥಿ ಸೋಲಿಸಿದ್ದಾರೆ. ಲಾಬ್ ಸಿಂಗ್ ಒಬ್ಬ ಮೊಬೈಲ್ ಅಂಗಡಿ ಇಟ್ಟುಕೊಂಡವ. ಬಡವನು ಚುನಾವಣೆಗೆ ನಿಂತು ಗೆಲ್ಲಬಹುದು ಎಂದು ಪಕ್ಷ ತೊರಿಸಿಕೊಟ್ಟಿದೆ ಎಂದರು.

Latest Videos
Follow Us:
Download App:
  • android
  • ios