ಸರ್ಕಾರ ಮಾಡುವ ಕೆಲಸ ಮಾಡುತ್ತಿರುವ ಶಕ್ತಿಧಾಮ: ಸಿಎಂ ಬೊಮ್ಮಾಯಿ

ಸರ್ಕಾರ ಮಾಡಬೇಕಾದ ಕೆಲಸವನ್ನು ಶಕ್ತಿಧಾಮ ಸಂಸ್ಥೆ ಮಾಡುತ್ತಿದೆ. ಪುನೀತ್‌ ಎಲ್ಲೋ ಕುಳಿತು ಇಂತಹ ಸಂಸ್ಥೆ ನಡೆಸುವ ಶಕ್ತಿ ತುಂಬುತ್ತಿರುತ್ತಾನೆ. ಶಕ್ತಿಧಾಮದಲ್ಲಿರುವ ಮಕ್ಕಳನ್ನು ಅನಾಥರು ಎಂದು ಕರೆಯಬೇಡಿ. ಅವರನ್ನು ದೇವರ ಮಕ್ಕಳು ಎಂದು ಕರೆಯಿರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

cm basavaraj bommai announces rs 5 crore for shakthidhama girls centre mysuru gvd

ಮೈಸೂರು (ಏ.08): ಸರ್ಕಾರ ಮಾಡಬೇಕಾದ ಕೆಲಸವನ್ನು ಶಕ್ತಿಧಾಮ ಸಂಸ್ಥೆ ಮಾಡುತ್ತಿದೆ. ಪುನೀತ್‌ (Puneeth Rajkumar) ಎಲ್ಲೋ ಕುಳಿತು ಇಂತಹ ಸಂಸ್ಥೆ ನಡೆಸುವ ಶಕ್ತಿ ತುಂಬುತ್ತಿರುತ್ತಾನೆ. ಶಕ್ತಿಧಾಮದಲ್ಲಿರುವ (Shakthidhama) ಮಕ್ಕಳನ್ನು ಅನಾಥರು ಎಂದು ಕರೆಯಬೇಡಿ. ಅವರನ್ನು ದೇವರ ಮಕ್ಕಳು ಎಂದು ಕರೆಯಿರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ನಂಜನಗೂಡು ರಸ್ತೆಯ ಶಕ್ತಿಧಾಮದಲ್ಲಿ ಗುರುವಾರ ನಡೆದ ಇನ್‌ಫೋಸಿಸ್‌ ಫೌಂಡೇಷನ್‌ ಬ್ಲಾಕ್‌ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾಶಾಲಾಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಬಾರಿಯ ಬಜೆಟ್‌ನಲ್ಲಿ ಮಾನವೀಯ ಅಂತಃಕರಣಕ್ಕೆ ಆದ್ಯತೆ ನೀಡಲಾಗಿದೆ. ಹೆಣ್ಣು ಮಕ್ಕಳ ಅಭಿವೃದ್ಧಿಗೆ, ಸ್ವಯಂ ಉದ್ಯೋಗ ಕಲ್ಪಿಸಿಕೊಡಲು 43 ಸಾವಿರ ಕೋಟಿ ರು. ಮೀಸಲಿಡಲಾಗಿದೆ. ಅಶಕ್ತರ ಆರೋಗ್ಯಕ್ಕೆ ಪ್ರತ್ಯೇಕ ಹಣ, ಆರೋಗ್ಯ ತಪಾಸಣೆಗೆ ಕ್ರಮ, ಹೀಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ನಾನಾ ಸಂಘ, ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತಿದ್ದು. ಈ ಪೈಕಿ ಶಕ್ತಿಧಾಮಕ್ಕೂ 5 ಕೋಟಿ ರು. ಅನುದಾನ ನೀಡಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

ಕೆ.ಆರ್‌. ಆಸ್ಪತ್ರೆ, ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ: ಮೈಸೂರಿನ ಕೆ.ಆರ್‌. ಆಸ್ಪತ್ರೆ ಅಭಿವೃದ್ಧಿಗೆ 85 ಕೋಟಿ ರು., ವಿಮಾನ ನಿಲ್ದಾಣ ವಿಸ್ತರಣೆಗೆ ಕ್ರಮ ವಹಿಸಲಾಗಿದೆ. ರಾಜ್ಯದ 10 ಕಡೆ ಕ್ಯಾನ್ಸರ್‌ ಪೀಡಿತರಿಗೆ ಕೀಮೋ ಚಿಕಿತ್ಸಾ ಕೇಂದ್ರ ತೆರೆಯಲಾಗುತ್ತಿದೆ. ಆಸಿಡ್‌ ದಾಳಿಯಾದ ಮಕ್ಕಳಿಗೆ ಮಾಸಾಶನ ಹೆಚ್ಚಿಸಲಾಗಿದೆ. ಮೈಸೂರಿಗೂ ಕ್ಯಾನ್ಸರ್‌ ಚಿಕಿತ್ಸಾ ಘಟಕ ನೀಡಲಾಗಿದೆ ಎಂದರು. ಶೋಷಿತರು ಸಿಕ್ಕಾಗ ಕೈಹಿಡಿದು ಎತ್ತಬೇಕು. ಅವಕಾಶ ಸಿಕ್ಕಾಗ ಆ ಕೆಲಸ ಮಾಡಬೇಕು. ರಾಜಕಾರಣಕ್ಕೆ, ಬಾಯಿ ಮಾತಿಗೆ ಸಾಮಾಜಿಕ ನ್ಯಾಯದ ಮಾತನಾಡಬಾರದು. ಆದ್ದರಿಂದ ಬಜೆಟ್‌ನಲ್ಲಿ ಇಂತಹ ಯೋಜನೆ ಘೋಷಿಸಿದ್ದೇವೆ ಎಂದರು. ಬದುಕಿಗೆ ಬ್ಯಾಲೆನ್ಸ್‌ ಶೀಟ್‌ ಇರುತ್ತದೆ. ಯಾರು ಜೀವನವನ್ನು ಬ್ಯಾಲೆನ್ಸ್‌ ಆಗಿ ನಡೆಸಿರುತ್ತಾರೋ ಅವರು ಸಂತೃಪ್ತರಾಗಿ ಈ ಜಗತ್ತನ್ನು ಬಿಟ್ಟು ಹೋಗುತ್ತಾರೆ. ಅಪ್ಪು ಅಂತಹ ವ್ಯಕ್ತಿ. ಇನ್‌ಫೋಸಿಸ್‌ ಸಂಸ್ಥೆಯು ಬಹಳ ಸಂಸ್ಥೆಗೆ ಸಹಾಯ ಮಾಡಿದೆ. ಅಂತಹವರಿಗೆ ಕೋಟಿ ಕೋಟಿ ನಮಸ್ಕಾರ ಎಂದು ಅವರು ಹೇಳಿದರು.

Puneeth Rajkumar: ಅಪ್ಪು ಆಸೆಯಂತೆ 'ಶಕ್ತಿಧಾಮ'ದ ಆವರಣದಲ್ಲಿ ಶಾಲೆ ನಿರ್ಮಾಣ

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್. ನಾಗೇಂದ್ರ, ಮಾಜಿ ಶಾಸಕ ಸಂದೇಶ್‌ ನಾಗರಾಜ್, ಇನ್‌ಫೋಸಿಸ್‌ನ ಶಾಜಿ ಮ್ಯಾಥ್ಯೂ, ಸಂಸ್ಥೆ ಉಪಾಧ್ಯಕ್ಷ ಕೆಂಪಯ್ಯ, ಟ್ರಸ್ಟಿಜಿ.ಎಸ್‌. ಜಯದೇವ, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಕಾಡಾ ಅಧ್ಯಕ್ಷ ಎನ್‌. ಶಿವಲಿಂಗಯ್ಯ, ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ. ಫಣೀಶ್‌ , ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿ ಅಧ್ಯಕ್ಷ ಕೃಷ್ಣಪ್ಪಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತಕುಮಾರ್‌ಗೌಡ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ, ಧರ್ಮದರ್ಶಿ ಎಂ.ಎನ್‌. ಸುಮನ ಇತರರಿದ್ದರು.

ಅಪ್ಪುವನ್ನು ಇಲ್ಲಿನ ಮಕ್ಕಳಲ್ಲಿ ನೋಡುತ್ತೇನೆ: ನಟ ಶಿವರಾಜಕುಮಾರ್‌ (Shivarajkumar) ಮಾತನಾಡಿ, ನನ್ನ ಉಸಿರು ಇರುವವರೆಗೂ ನಾನು ನಿಮ್ಮೊಂದಿಗಿರುತ್ತೇನೆ. ಅಪ್ಪುವನ್ನು ಇಲ್ಲಿನ ಮಕ್ಕಳಲ್ಲಿ ಮತ್ತು ಅಭಿಮಾನಿಗಳಲ್ಲಿ ನೋಡುತ್ತಿದ್ದೇನೆ. ಇಲ್ಲಿನ ಮಕ್ಕಳು ನಾನು ಬಂದರೆ ಅಣ್ಣಾ ಅಂತಾರೆ, ಅಪ್ಪಾ ಅಂತರೆ. ಆದ್ದರಿಂದ ನನ್ನ ಉಸಿರು ಇರುವವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು. ಟ್ರಸ್ಟ್‌ನ ಅಧ್ಯಕ್ಷೆ ಗೀತಾ ಶಿವರಾಜಕುಮಾರ್‌ ಮಾತನಾಡಿ, ನಾನು ಈ ಸಂಸ್ಥೆಗೆ ಟ್ರಸ್ಟಿಯಾಗಿ ಬಂದೆ. ಆದರೆ ಕೆಂಪಯ್ಯ ಮಾಮ ನನ್ನನ್ನು ಅಧ್ಯಕ್ಷೆಯಾಗಿ ಮಾಡಿದರು. ಅವರು ಇರಬೇಕಾದ ಜಾಗದಲ್ಲಿ ಕೂರಿಸಿದರು. ಏನೇ ಕೆಲಸ ಮಾಡುವಾಗಲೂ ಅವರ ಸಲಹೆ ಪಡೆಯುತ್ತೇನೆ. ಅವರು ನನಗೆ ಬೆಂಬಲವಾಗಿದ್ದಾರೆ. ಇಲ್ಲಿ ಶಾಲೆ ತೆರೆಯಬೇಕು ಎಂಬುದು ಅವರ ಮನಸ್ಸು. ಜೂನ್‌ ತಿಂಗಳಿನಿಂದ ಶಾಲೆ ಆರಂಭವಾಗುತ್ತಿದೆ. ಸದ್ಯಕ್ಕೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿಯೇ 1 ರಿಂದ 8ನೇ ತರಗತಿವರೆಗೆ ಶಾಲೆ ನಡೆಯಲಿದೆ ಎಂದರು.

ಶಕ್ತಿಧಾಮ ವಿದ್ಯಾಶಾಲೆ ನಿರ್ಮಾಣಕ್ಕೆ .5 ಕೋಟಿ ನೆರವು: ನಟ ಪುನೀತ್‌ ರಾಜ್‌​ಕು​ಮಾರ್‌ ಅವ​ರ ಹೃದ​ಯಕ್ಕೆ ಹತ್ತಿ​ರ​ವಾ​ಗಿದ್ದ ಮೈಸೂ​ರಿನ ಶಕ್ತಿಧಾಮದಲ್ಲಿ ವಿದ್ಯಾಶಾಲಾ ನಿರ್ಮಾಣಕ್ಕೆ ಸರ್ಕಾರದಿಂದ .5 ಕೋಟಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ನಂಜನಗೂಡು ರಸ್ತೆಯ ಶಕ್ತಿಧಾಮದಲ್ಲಿ ಗುರುವಾರ ನಡೆದ ಇನ್‌ಫೋಸಿಸ್‌ ಫೌಂಡೇಷನ್‌ ಬ್ಲಾಕ್‌ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 

ಈ ಬಾರಿಯ ಬಜೆಟ್‌ನಲ್ಲಿ ಮಾನವೀಯ ಅಂತಃಕರಣಕ್ಕೆ ಆದ್ಯತೆ ನೀಡಲಾಗಿದೆ. ಹೆಣ್ಣುಮಕ್ಕಳ ಅಭಿವೃದ್ಧಿಗೆ, ಸ್ವಯಂ ಉದ್ಯೋಗ ಕಲ್ಪಿಸಿಕೊಡಲು 43 ಸಾವಿರ ಕೋಟಿ ಮೀಸಲಿಡಲಾಗಿದೆ. ನಾಡಿನ ನಾನಾ ಸಂಘ, ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತಿದ್ದು, ಈ ಪೈಕಿ ಶಕ್ತಿಧಾಮಕ್ಕೂ ಅನುದಾನ ನೀಡಲು ತೀರ್ಮಾನಿಸಿದ್ದೇನೆ. ಆದರೆ ಟ್ರಸ್ಟಿ ಜಿ.ಎಸ್‌.ಜಯದೇವ ಅವರು ಪದೇ ಪದೆ ಎಷ್ಟುನೀಡುತ್ತೀರಿ ತಿಳಿಸಿ ಎಂದು ಕೇಳುತ್ತಿದ್ದಾರೆ. ನಾನು ಲೆಕ್ಕಹಾಕಿದೆ, ಐದು ಬಾರಿ ಕೇಳಿದರು. ಆದ್ದರಿಂದ .5 ಕೋಟಿ ನೀಡುತ್ತಿದ್ದೇನೆ ಎಂದು ಬೊಮ್ಮಾ​ಯಿ ಹೇಳಿದರು.

ಪುನೀತ್ 'PRK' ಬ್ಯಾನರ್ ನಿಂದ ಹೊಸ ಸಿನಿಮಾ ಘೋಷಣೆ; ಇಲ್ಲಿದೆ ವಿವರ

ಅನಾಥರೆಂದು ಕರೆಯಬೇಡಿ: ಶಕ್ತಿಧಾಮದ ಮಕ್ಕಳನ್ನು ಅನಾಥರು ಎಂದು ಕರೆಯಬೇಡಿ. ಅವರನ್ನು ದೇವರ ಮಕ್ಕಳು ಎನ್ನಿರಿ. ಸರ್ಕಾರ ಮಾಡಬೇಕಾದ ಕೆಲಸವನ್ನು ಶಕ್ತಿಧಾಮ ಸಂಸ್ಥೆ ಮಾಡುತ್ತಿದೆ. ಪುನೀತ್‌ ಎಲ್ಲೋ ಕುಳಿತು ಇಂಥ ಸಂಸ್ಥೆ ನಡೆಸುವ ಶಕ್ತಿ ತುಂಬುತ್ತಿರುತ್ತಾನೆ. ಶೋಷಿತರು ಸಿಕ್ಕಾಗ ಕೈಹಿಡಿದು ಎತ್ತಬೇಕು. ಅವಕಾಶ ಸಿಕ್ಕಾಗ ಆ ಕೆಲಸ ಮಾಡಬೇಕು ಎಂದರು. ಬದುಕಿಗೆ ಬ್ಯಾಲೆನ್ಸ್‌ ಶೀಟ್‌ ಇರುತ್ತದೆ. ಯಾರು ಜೀವನವನ್ನು ಬ್ಯಾಲೆನ್ಸ್‌ ಆಗಿ ನಡೆಸಿರುತ್ತಾರೋ ಅವರು ಸಂತೃಪ್ತರಾಗಿ ಈ ಜಗತ್ತನ್ನು ಬಿಟ್ಟು ಹೋಗುತ್ತಾರೆ. ಅಪ್ಪು ಅಂತಹ ವ್ಯಕ್ತಿ ಎಂದ​ರು.

ನಟ ಶಿವರಾಜಕುಮಾರ್‌ ಮಾತನಾಡಿ, ಅಪ್ಪುವನ್ನು ಇಲ್ಲಿನ ಮಕ್ಕಳಲ್ಲಿ ಮತ್ತು ಅಭಿಮಾನಿಗಳಲ್ಲಿ ನೋಡುತ್ತಿದ್ದೇನೆ. ಇಲ್ಲಿನ ಮಕ್ಕಳು ನಾನು ಬಂದರೆ ಅಣ್ಣಾ ಅಂತಾರೆ, ಅಪ್ಪಾ ಅಂತಾರೆ. ಆದ್ದರಿಂದ ನನ್ನ ಉಸಿರು ಇರುವವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು. ಟ್ರಸ್ಟ್‌ನ ಅಧ್ಯಕ್ಷೆ ಗೀತಾ ಶಿವರಾಜಕುಮಾರ್‌ ಮಾತನಾಡಿ, ಜೂನ್‌ ತಿಂಗಳಿನಿಂದ ಶಾಲೆ ಆರಂಭವಾಗುತ್ತಿದೆ. ಸದ್ಯಕ್ಕೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲೇ 1ರಿಂದ 8ನೇ ತರಗತಿವರೆಗೆ ಶಾಲೆ ನಡೆಯಲಿದೆ ಎಂದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Latest Videos
Follow Us:
Download App:
  • android
  • ios