Asianet Suvarna News Asianet Suvarna News

ನುಗು ಹಿನ್ನೀರಿನಲ್ಲಿ ತೇಲಿ ಬರುತ್ತಿದೆ ಹಳೆ ಬಟ್ಟೆ, ಪ್ಲಾಸ್ಟಿಕ್‌ ತ್ಯಾಜ್ಯ

ನುಗು ಜಲಾಶಯದ ಹೊಸಬೀರ್ವಾಳು ಗ್ರಾಮದ ಹಿನ್ನೀರು ಪ್ರದೇಶದಲ್ಲಿ ಹಳೆಯ ಬಟ್ಟೆಗಳು, ಪ್ಲಾಸ್ಟಿಕ್‌ ಹಾಗೂ ಇನ್ನಿತರ ಕಸದ ರಾಶಿಯನ್ನು ಗ್ರಾಮದ ಯುವಕರು ಭಾನುವಾರ ಮುಂಜಾನೆ ಅರಣ್ಯ ಇಲಾಖೆಯವರ ಜೊತೆಗೂಡಿ ಶ್ರಮದಾನ ಮೂಲಕ ಸ್ವಚ್ಛಗೊಳಿಸಿದರು.

Cleanliness of old clothes, plastic wastes floating in Nugu backwater snr
Author
First Published Aug 28, 2023, 7:41 AM IST

  ಸರಗೂರು :  ನುಗು ಜಲಾಶಯದ ಹೊಸಬೀರ್ವಾಳು ಗ್ರಾಮದ ಹಿನ್ನೀರು ಪ್ರದೇಶದಲ್ಲಿ ಹಳೆಯ ಬಟ್ಟೆಗಳು, ಪ್ಲಾಸ್ಟಿಕ್‌ ಹಾಗೂ ಇನ್ನಿತರ ಕಸದ ರಾಶಿಯನ್ನು ಗ್ರಾಮದ ಯುವಕರು ಭಾನುವಾರ ಮುಂಜಾನೆ ಅರಣ್ಯ ಇಲಾಖೆಯವರ ಜೊತೆಗೂಡಿ ಶ್ರಮದಾನ ಮೂಲಕ ಸ್ವಚ್ಛಗೊಳಿಸಿದರು.

ಜಲಾಶಯದ ಸುತ್ತಮುತ್ತಲಿನ ಗ್ರಾಮದವರು ಹಳೆಯ ಬಟ್ಟೆಗಳನ್ನು ನೀರಿನಲ್ಲಿ ಬಿಟ್ಟಿದ್ದರ ಪರಿಣಾಮ ಅಲ್ಲಿನ ಪರಿಸರ ಹಾಳಾಗುತ್ತಿದೆ. ಹಳೆ ಬಟ್ಟೆ, ಪ್ಲಾಸ್ಟಿಕ್‌ ತ್ಯಾಜ್ಯಗಳು ನೀರಿನಲ್ಲಿ ತೇಲಿಬಂದು ನದಿ ದಡದಲ್ಲಿ ರಾಶಿ ಗಟ್ಟಲೇ ಸಂಗ್ರಹವಾಗಿದೆ. ಇದನ್ನು ಗಮನಿಸಿದ ಗ್ರಾಮೀಣ ಮಹೇಶ್‌ ನೇತೃತ್ವದಲ್ಲಿ ಸಂತೋಷ್‌, ಪ್ರಸಾದ್‌, ಕುಮಾರ್‌, ಶಿವು, ದಚ್ಚು, ಚಂದು, ಅಜಯ್‌ ಹಾಗೂ ಇತರರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ತಮಿಳುನಾಡಿಗೆ ನೀರು ಹರಿಯುವುದು ಸ್ಥಗಿತ

ಮಂಡ್ಯ(ಆ.26):  ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಹರಿಸಲಾಗುತ್ತಿದ್ದ ನೀರನ್ನು ಗುರುವಾರ ಮಧ್ಯರಾತ್ರಿಯಿಂದ ಸ್ಥಗಿತಗೊಳಿಸಲಾಗಿದೆ. ಕಳೆದ 11 ದಿನಗಳಿಂದ ತಮಿಳುನಾಡಿಗೆ 10 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಲಾಗಿದೆ.

ನಿತ್ಯ ತಮಿಳುನಾಡಿಗೆ 13 ಸಾವಿರ ಕ್ಯುಸೆಕ್‌ನಿಂದ 15,500 ಕ್ಯುಸೆಕ್‌ವರೆಗೆ ಬಿಡುಗಡೆ ಮಾಡಲಾಗುತ್ತಿದ್ದ ನೀರನ್ನು ಶುಕ್ರವಾರ ಬೆಳಗ್ಗೆಯಿಂದ 7654 ಕ್ಯುಸೆಕ್‌ಗೆ ಇಳಿಸಲಾಗಿದೆ. ಕಾವೇರಿ ನದಿಗೆ 5038 ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಗುರುವಾರ ರಾತ್ರಿಯವರೆಗೆ ನದಿಗೆ ನಿತ್ಯ 11 ಸಾವಿರ ಕ್ಯುಸೆಕ್‌ ನೀರನ್ನು ಹರಿ ಬಿಡಲಾಗುತ್ತಿತ್ತು.

ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಖಂಡನೆ; ಕನ್ನಡಪರ ಸಂಘಟನೆಗಳಿಂದ ಕೆಆರ್‌ಎಸ್‌ ಮುತ್ತಿಗೆ ಯತ್ನ

ಆ.9ರಂದು ಕೃಷ್ಣರಾಜಸಾಗರ ಜಲಾಶಯ ಅಣೆಕಟ್ಟೆಯಲ್ಲಿ 35.175 ಟಿಎಂಸಿ ಅಡಿ ಇದ್ದ ನೀರು ಸಂಗ್ರಹ ಆ.25ಕ್ಕೆ 25.035 ಟಿಎಂಸಿ ಅಡಿಗೆ ಕುಸಿದಿದೆ. ಅಂದು ಜಲಾಶಯದ ನೀರಿನ ಮಟ್ಟ113.30 ಅಡಿ ಇದ್ದರೆ, ಪ್ರಸ್ತುತ ಜಲಾಶಯದಲ್ಲಿ 102.74 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 10 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದುಹೋದಂತಾಗಿದೆ.

ಹಾಲಿ ಬಿಡುಗಡೆ ಮಾಡಿರುವ 7654 ಕ್ಯುಸೆಕ್‌ ನೀರಿನಲ್ಲಿ ನದಿಗೆ 5038 ಕ್ಯುಸೆಕ್‌, ವಿಶ್ವೇಶ್ವರಯ್ಯ ನಾಲೆಗೆ 2008 ಕ್ಯುಸೆಕ್‌, ಆರ್‌ಬಿಎಲ್‌ಎಲ್‌ ನಾಲೆಗೆ 100 ಕ್ಯುಸೆಕ್‌, ಎಲ್‌ಬಿಎಎಲ್‌ಎಲ್‌ ನಾಲೆಗೆ 58 ಕ್ಯುಸೆಕ್‌, ದೇವರಾಜ ಅರಸು ನಾಲೆಗೆ 400 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ 3276 ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದರೂ ಕಾಂಗ್ರೆಸ್‌ ಸರ್ಕಾರ ನಿರ್ಭೀತಿಯಿಂದ ಕೆಆರ್‌ಎಸ್‌ನಿಂದ ನೀರನ್ನು ಹರಿಯಬಿಟ್ಟಿತು. ಮೊನ್ನೆಯಷ್ಟೇ ಸರ್ವಪಕ್ಷ ಸಭೆ ನಡೆಸಿದ ಸರ್ಕಾರ ಸುಪ್ರೀಂಕೋರ್ಚ್‌ಗೆ ಇದೀಗ ಮೇಲ್ಮನವಿ ಸಲ್ಲಿಸಿದೆ. 10 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಿ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಂಡಿರುವ ರಾಜ್ಯಸರ್ಕಾರ ಬೀಸೋ ದೊಣ್ಣೆಯಿಂದ ಸದ್ಯಕ್ಕೆ ಪಾರಗಿದೆ.

ಮಂಡ್ಯದಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳ: ಬೆಲ್ಲದ ಪರಿಷೆ ವಿಶೇಷತೆ ಇಲ್ಲಿದೆ ನೋಡಿ..

ತಮಿಳುನಾಡಿಗೆ ನೀರು ಹರಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಸಂಸದರಾದ ಸುಮಲತಾ ಅಂಬರೀಶ್‌, ಪಿ.ಸಿ.ಮೋಹನ್‌ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು. ವಿವಿಧ ರೈತ ಸಂಘಟನೆಗಳು ಕಾಂಗ್ರೆಸ್‌ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕೂಡ ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿತು.

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ರೈತರಿಗೆ ಭತ್ತ, ಕಬ್ಬು ಬೆಳೆ ಬೆಳೆಯದಂತೆ ಸೂಚಿಸಿರುವ ಸರ್ಕಾರ, ಅರೆ ಖುಷ್ಕಿ ಬೆಳೆ ಬೆಳೆಯುವಂತೆ ಮನವಿ ಮಾಡಿದೆ. ನಾಲ್ಕು ವರ್ಷಗಳಿಂದ ಸಮೃದ್ಧ ನೀರನ್ನು ಕಂಡಿದ್ದ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಬರಗಾಲವನ್ನು ಎದುರಿಸುವಂತಾಗಿದೆ

Follow Us:
Download App:
  • android
  • ios