Asianet Suvarna News Asianet Suvarna News

ಪೌರ ಕಾರ್ಮಿಕಗೆ ಕೊರೋನಾ ಪಾಸಿಟಿವ್‌..!

ಪುತ್ತೂರು ನಗರಸಭೆಯ ಪೌರಕಾರ್ಮಿಕರೊಬ್ಬರಿಗೆ ಕೊರೋನಾ ದೃಢಪಟ್ಟಹಿನ್ನೆಲೆಯಲ್ಲಿ ಭಯಭೀತರಾಗಿರುವ ಪುತ್ತೂರು ನಗರಸಭೆಯ ಪೌರ ಕಾರ್ಮಿಕರು ಕೆಲಸ ತ್ಯಜಿಸಿ ಊರಿಗೆ ಹೊರಡಲು ಮುಂದಾಗಿದ್ದು, ಇದನ್ನು ಮನಗಂಡ ಶಾಸಕ ಸಂಜೀವ ಮಠಂದೂರು ಅವರು ಪೌರ ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Civic worker in mangalore founf covid19 positive
Author
Bangalore, First Published Jul 1, 2020, 7:50 AM IST

ಮಂಗಳೂರು(ಜು.01): ಪುತ್ತೂರು ನಗರಸಭೆಯ ಪೌರಕಾರ್ಮಿಕರೊಬ್ಬರಿಗೆ ಕೊರೋನಾ ದೃಢಪಟ್ಟಹಿನ್ನೆಲೆಯಲ್ಲಿ ಭಯಭೀತರಾಗಿರುವ ಪುತ್ತೂರು ನಗರಸಭೆಯ ಪೌರ ಕಾರ್ಮಿಕರು ಕೆಲಸ ತ್ಯಜಿಸಿ ಊರಿಗೆ ಹೊರಡಲು ಮುಂದಾಗಿದ್ದು, ಇದನ್ನು ಮನಗಂಡ ಶಾಸಕ ಸಂಜೀವ ಮಠಂದೂರು ಅವರು ಪೌರ ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ ಪೌರ ಕಾರ್ಮಿಕರಲ್ಲಿ ಮಾತುಕತೆ ನಡೆಸಿದ ಶಾಸಕರು ಕೆಲಸದಲ್ಲಿ ಯಾವುದೇ ಚ್ಯುತಿಯಾಗದಂತೆ ನೋಡಿಕೊಳ್ಳಿ ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗದ ಹಾಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ನೀಡಿದರು.

ಪುತ್ತೂರು ಸರ್ಕಾರಿ ಆಸ್ಪತ್ರೆ ವಾರದೊಳಗೆ ಕೊರೋನಾ ಚಿಕಿ​ತ್ಸೆಗೆ ಮೀಸ​ಲು

ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕ ಕಸ ಸಂಗ್ರಹದ ಲಾರಿ ಚಾಲಕನಿಗೆ ಸೋಮವಾರ ಕೊರೋನಾ ದೃಢಪಟ್ಟಕುರಿತು ವರದಿ ಬಂದಿರುವುರಿಂದ ಮಂಗಳವಾರ ಕಸ ಸಂಗ್ರಹದ ಸುಮಾರು 41 ಮಂದಿ ಹೊರಗುತ್ತಿಗೆ ಪೌರಕಾರ್ಮಿಕರಲ್ಲಿ ಭಯದ ವಾತಾವರಣ ಉಂಟಾಗಿತ್ತು. ಇದನ್ನು ಮನಗಂಡ ಶಾಸಕರು ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿ ಆವರಣಕ್ಕೆ ಬಂದು ಎಲ್ಲ ಪೌರಕಾರ್ಮಿಕರಿಗೆ ಕೊರೋನಾ ವಿರುದ್ಧದ ಹೋರಾಟ ಮತ್ತು ಮುನ್ನೆಚ್ಚರಿಕೆ ಕುರಿತು ಧೈರ್ಯ ತುಂಬಿದರು.

ರೋಗ ಉಲ್ಬಣ ಆಗುವ ಸನ್ನಿವೇಶ ನಾವು ತಡೆಗಟ್ಟಬೇಕು. ನಾವು ಜಾಗೃತರಾಗಬೇಕು. ಪ್ರಮುಖವಾಗಿ ನಗರದಲ್ಲಿ ಕೆಲಸ ಮಾಡುವಾಗ ನಮ್ಮ ಜಾಗೃತೆ ನಾವು ಮಾಡಬೇಕು. ಎಚ್ಚರ ತಪ್ಪಿದರೆ ಮತ್ತೆ ಏನು ಮಾಡಲು ಆಗುವುದಿಲ್ಲ. ಖಾಯಿಲೆ ಇವತ್ತು ನಾಳೆಗೆ ಮುಗಿಯವುದಿಲ್ಲ. ಸರಿಯಾದ ಔಷಧಿ ಕಂಡುಹಿಡಿಯವ ತನಕ ಖಾಯಿಲೆಯಿಂದ ಮುಕ್ತಿ ಇಲ್ಲ. ಹಾಗೆಂದು ಮನೆಗೆ ಬೀಗ ಹಾಕಿ ಕಿತ್ತುಕೊಳ್ಳಲು ಆಗುವುದಿಲ್ಲ. ಸಹಜ ಜೀವನಕ್ಕೆ ತೊಡಗಿಸಿಕೊಳ್ಳಬೇಕಾಗುತ್ತದೆ. ಇನ್ನು ಒಂದಷ್ಟುಸಮಯ ಲಾಕ್‌ಡೌನ್‌ ಆದರೆ ಆರ್ಥಿಕ ಶಕ್ತಿಗೆ ಹೊಡೆತ ಬೀಳಬಹುದು. ನಾವು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

'ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ'

ಪೌರಾಯುಕ್ತೆ ರೂಪಾ ಶೆಟ್ಟಿಮಾತನಾಡಿ, ಕೆಲಸವಿಲ್ಲದಿದ್ದರೆ ಜೀವನ ಸಾಗಿಸುವುದು ಕಷ್ಟ. ಆದರೆ ಕೊರೋನಾ ಭಯ ಎಂದು ಕೆಲಸಕ್ಕೆ ಹೋಗದೆ ಇರುವುದು ಸರಿಯಲ್ಲ. ನಿಮಗೆ ಏನೇ ಸಮಸ್ಯೆ ಬಂದರೂ ಅದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಇಲ್ಲಿ ಯಾವುದೇ ಭಯ ಬೇಡ. ನಿಮ್ಮ ಭದ್ರತೆಗೆಗಾಗಿ ಇನ್ನಷ್ಟುಸಲಕರಣೆಗಳನ್ನು ನಿಮಗೆ ನೀಡಲಾಗುವುದು. ಸಲಕರಣೆ ಅಳವಡಿಸಿಕೊಳ್ಳದೆ ಕೆಲಸ ಮಾಡಬೇಡಿ ಎಂದರು.

ಈ ಸಂದರ್ಭ ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್‌ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಮತ್ತು ಶ್ವೇತಾ ಕಿರಣ್‌, ನಗರಸಭೆ ಪೌರಕಾರ್ಮಿಕರ ಮೇಸ್ತ್ರಿ ಐತ್ತಪ್ಪ ಮತ್ತು ನಗರಸಭೆ ಪೌರಕಾರ್ಮಿಕರು ಉಪಸ್ಥಿತರಿದ್ದರು.

Follow Us:
Download App:
  • android
  • ios