'ಪ್ರಧಾನಿ ನರೇಂದ್ರ ಮೋದಿ ದೇಶ ಬಿಟ್ಟು ತೊಲಗಿ'

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 3:42 PM IST
CITU Stage Protest Union Government, Dharwad
Highlights

ಕೇಂದ್ರ ಸರಕಾರದ ವಿರುದ್ಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕೇಂದ್ರ ಸರ್ಕಾ ರೈತ ಮತ್ತು ಕಾರ್ಮಿಕ ವಿರೋಧ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಧಾರವಾಡ(ಆ.9) ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಸಂಘಟನೆಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನವನ್ನು ಮಾಡಲಾಗಿದೆ. ಪ್ರತಿಭಟನೆ ವೇಳೆ 100 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇಶ ಬಿಟ್ಟು ತೊಲಗಿ ಎಂಬ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಹಿಟ್ಲರ್ ಸಂಸ್ಕೃತಿ ಅನುಸರಿಸುತ್ತಿರುವ ನಡೆಯಿಂದ ದೇಶಕ್ಕೆ ಒಳ್ಳೆದಾಗಿಲ್ಲ ಎಂದು ಮಾತನಾಡಿದ ಹೋರಾಟಗಾರ್ತಿ ಕೆ ನೀಲಾ ಆರೋಪಿಸಿದ್ದಾರೆ.

ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ಮಾಡಿದಂತೆ ಮೋದಿ ವಿರುದ್ಧ ದೇಶ ಬಿಟ್ಟುತೋಲಗುವಂತೆ ಇಂದಿನಿಂದ ಚಳುವಳಿ ಆರಂಭವಾಗಿದೆ ಎಂದು ಹೋರಾಟಗಾರ್ತಿ ಕೆ.ನಿಲಾ ಹೇಳಿದ್ದಾರೆ.

loader