ಚರ್ಚ್ಗಳಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳದಂತೆ ಪ್ರಚಾರ   ತಮ್ಮ ಹೇಳಿಕೆಗೆ ತಾನು ಈಗಲೂ ಬದ್ಧಳಿದ್ದೇನೆ ಎಂದ ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನ ಆಲ್ದೂರು, ಮೂಡಿಗೆರೆಯ ಕೆಲ ಚರ್ಚ್ಗಳಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ 

ಕುಂದಾಪುರ (ಮೇ.27): ಕೆಲವು ಚರ್ಚ್ಗಳಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳದಂತೆ ಪ್ರಚಾರ ಮಾಡಲಾಗುತ್ತಿದೆ ಎಂಬ ತಮ್ಮ ಹೇಳಿಕೆಗೆ ತಾನು ಈಗಲೂ ಬದ್ಧಳಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ನಿಲುವು ಸ್ಪಷ್ಟವಿದೆ. ಚಿಕ್ಕಮಗಳೂರಿನ ಆಲ್ದೂರು, ಮೂಡಿಗೆರೆಯ ಕೆಲ ಚರ್ಚ್ಗಳಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ಮಾಡಲಾಗಿದೆ. 

ರಾಜ್ಯದಲ್ಲಿ ಮತ್ತೆ ಸೋಂಕು ಏರಿಕೆ, ರೈತರ ನೆರವಿಗೆ ಬರಬೇಕಿದೆ ಸರ್ಕಾರ

ಈ ಚರ್ಚುಗಳು ಕೆಥೋಲಿಕ್‌ ಅಥವಾ ಪ್ರೊಟೆಸ್ಟಂಟ್‌ ಪಂಗಡಕ್ಕೆ ಸೇರಿದವುಗಳಲ್ಲ. ಹೊಸದಾಗಿ ಆರಂಭವಾಗಿರುವ ಪೆಂಟಕೋಸ್‌್ತ, ಸೆವೆನ್‌್ತ ಡೇ ಎಡ್ವೆಂಟಿಸ್ಟ್‌ ಗುಂಪಿಗೆ ಸೇರಿದ ಚಚ್‌ರ್‍ಗಳು. ಪರಿಶಿಷ್ಟಜಾತಿಯವರನ್ನು ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ. 

ಇಲ್ಲಿನ ಧರ್ಮಗುರು ಲಸಿಕೆ ಪಡೆಯಬೇಡಿ, ಏಸು ಗುಣಪಡಿಸುತ್ತಾನೆ ಎಂದು ದಾರಿ ತಪ್ಪಿಸುತ್ತಿದ್ದಾರೆ’ ಎಂದವರು ಆರೋಪಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona