ಚಾಮರಾಜನಗರ(ನ.30): ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಸಾಗರ್‌ ಸ್ಟಿಚ್‌ ಮಾಲಿಕ ವೈ.ಯು.ಖಾನ್‌ ಅವರಿಗೆ ಇದ್ದ ಸಮಾಜಸೇವಾ ಆಶಾಭಾವನೆಯನ್ನು ವರ್ಷಕ್ಕೆ 40ರಿಂದ 50ಸಾವಿರ ಮಕ್ಕಳಿಗೆ ಶಾಲೆ ಸಮವಸ್ತ್ರಗಳನ್ನು ಅತಿ ಕಡಿಮೆ ದರದಲ್ಲಿ ಹೊಲಿದುಕೊಟ್ಟು ಸಹಾಯ ಮಾಡುವ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ವಿತರಿಸುತ್ತಿರುವ ಶಾಲಾ ಮಕ್ಕಳ ಸಮವಸ್ತ್ರಗಳಿಗೆ 250ರಿಂದ 300 ರು. ನೀಡಿ ಹೊಲಿಗೆ ಹಾಕಿಸುವುದು ಬಡಮಕ್ಕಳ ಪೋಷಕರಿಗೆ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಶಾಲಾ ಮಕ್ಕಳ ಸಮವಸ್ತ್ರಗಳಿಗೆ 300 ರು. ತೆಗೆದುಕೊಳ್ಳುವ ಬದಲು 100 ರು. ತೆಗೆದುಕೊಂಡು ಸಮವಸ್ತ್ರವನ್ನು ಹೊಲಿದುಕೊಡುವುದರಿಂದ ಬಡಮಕ್ಕಳಿಗೆ ಹಾಗೂ ಬಡಮಕ್ಕಳ ಪೋಷಕರಿಗೆ ನೆರವಾಗಬಹುದು ಎಂದು 100 ರು.ಗೆ ಹೊಲಿದುಕೊಡುವ ಮೂಲಕ ಸಮಾಜ ಸೇವೆಗೆ ಮುಂದಾಗಿದ್ದಾರೆ.

ಪೊಲೀಸರೇ ಇತ್ತ ನೋಡಿ, ಗೂಡ್ಸ್‌ ಆಟೋದಲ್ಲಿಯೇ ಕುರಿಗಳಂತೆ ತುಂಬಿದ್ದಾರೆ ಜನ!

ಸರ್ಕಾರಿ ಶಾಲೆ ಮಕ್ಕಳಿಗೆ 100 ರು.ಗೆ ಬಟ್ಟೆಹೊಲಿದು ಕೊಡುತ್ತಿರುವುದರಿಂದ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿರುವ ಸುಮಾರು 35ಕ್ಕೂ ಹೆಚ್ಚು ಶಾಲೆಗಳು ವೈ.ಯು.ಖಾನ್‌ ಅವರನ್ನೇ ಶಾಲೆಗೆ ಕರೆಯಿಸಿ ಶಾಲೆಯಲ್ಲಿರುವ ಮಕ್ಕಳಿಂದ ಅಳತೆ ಕೊಡಿಸಿ ಸಮವಸ್ತ್ರ ಸಿದ್ಧಮಾಡಿಕೊಡಲು ಬೇಡಿಕೆ ಇಡುತ್ತಿದ್ದಾರೆ.

ಪ್ರತಿವರ್ಷ ಒಂದನೇ ಸಮವಸ್ತ್ರ ಮತ್ತು ಎರಡನೇಯ ಸಮವಸ್ತ್ರ ಎಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸುವ ಬಟ್ಟೆಗಳು ಸೇರಿ ವರ್ಷಕ್ಕೆ 40ರಿಂದ 50ಸಾವಿರ ಮಕ್ಕಳ ಸಮವಸ್ತ್ರ ಸಿದ್ಧಪಡಿಸುವಂತಾಗಿದ್ದು, ಇದನ್ನು ಒಬ್ಬರಿಂದಲೇ ಮಾಡಲು ಸಾಧ್ಯವಾಗದಿದ್ದರಿಂದ ಪ್ರತಿದಿನ 10ರಿಂದ 20ಮಹಿಳೆಯರು ವೈ.ಯು.ಖಾನ್‌ ಅವರೊಂದಿಗೆ ಶಾಲೆ ಸಮವಸ್ತ್ರ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ಬೈಎಲೆಕ್ಷನ್: ನಕಲಿ ಅಬಕಾರಿ ಅಧಿಕಾರಿ ಬಂಧನ

12 ವರ್ಷದಿಂದ ಸಮವಸ್ತ್ರ ಹೊಲಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದು, ಸರ್ಕಾರಿ ಶಾಲೆಯ ಮಕ್ಕಳಿಗೆ 100 ರು.ಗೆ ಹೊಲಿದುಕೊಡುತ್ತಿದ್ದು, ಇದೊಂದು ಸೇವೆ ಎನ್ನುವ ರೀತಿಯಲ್ಲಿ ಮಾಡುತ್ತಿದ್ದಾರೆ.

ಖಾಸಗಿ ಶಾಲೆಯ ಮಕ್ಕಳು ನಮಗೂ 100 ರು.ಗೆ ಸಮವಸ್ತ್ರ ಹೊಲಿದು ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.

ಮಹಿಳೆಯರಿಗೆ ಉದ್ಯೋಗ: ಶಾಲೆ ಮಕ್ಕಳ ಸಮವಸ್ತ್ರವನ್ನು 100 ರು. ಹೊಲಿಗೆ ಹಾಕಲು ಮುಂದಾದಾಗ ಹಲವಾರು ಶಾಲೆಗಳ ಮುಖ್ಯಶಿಕ್ಷಕರು ಶಾಲೆಗಳಿಗೆ ಕರೆಯಿಸಿ ಮಕ್ಕಳಿಗೆ ಸಮವಸ್ತ್ರ ಹೊಲಿದುಕೊಡಿ ಎಂದು ಬೇಡಿಕೆ ಇಟ್ಟಾಗ ನಾನೋಬ್ಬನೇ ಮಾಡಲು ಕಷ್ಟವಾಗುತ್ತದೆ ಎಂಬ ದೃಷ್ಟಿಯಿಂದ 20ರಿಂದ 40 ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ತರಬೇತಿ ಪಡೆದ ಮಹಿಳೆಯರು ದಿನಕ್ಕೆ 10ರಿಂದ 15ಸಮವಸ್ತ್ರವನ್ನು ಹೊಲಿಗೆ ಹಾಕುವ ಮೂಲಕ ದಿನಕ್ಕೆ 300ರಿಂದ 500 ರು. ವರೆಗೂ ಸಂಪಾದಿಸಿಕೊಳ್ಳುತ್ತಿದ್ದು, ಇದರಿಂದ ಮಹಿಳೆಯರ ಜೀವನಕ್ಕೂ ನೆರವಾಗಿದ್ದಾರೆ.

ಮನೆ ಅಡವಿಟ್ಟು 18 ಸಿವಿಂಗ್‌ ಮಿಷನ್‌ ಖರೀದಿ:

ಶಾಲೆ ಮಕ್ಕಳ ಸಮವಸ್ತ್ರವನ್ನು ಹೊಲಿಗೆ ಹಾಕಲು 2 ಗುಂಡಿ ಹಾಕುವ ಮಿಷಿನ್‌, 8 ವಿದ್ಯುತ್‌ ಚಾಲಿತ ಮಿಷಿನ್‌, 8 ಸಾಮಾನ್ಯ ಹೊಲಿಗೆ ಮಿಷಿನ್‌ ಅನ್ನು ಖರೀದಿಸಲು ಮನೆಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದಿದ್ದಾರೆ. ಸರ್ಕಾರದಿಂದ ಸಾಲ ಪಡೆಯಲು ಮುಂದಾಗಿದಾದಾಗ ಬ್ಯಾಂಕ್‌ನಲ್ಲಿ ಸಾಲ ನೀಡಲು ಹಿಂದೇಟು ಹಾಕಿದ್ದಾರೆ. ಇದರಿಂದ ಮನೆಯನ್ನು ಬ್ಯಾಂಕಿನಲ್ಲಿ ಅಡವಿಟ್ಟು 5 ಲಕ್ಷ ರು. ಸಾಲ ಪಡೆದುಕೊಂಡು 18 ಸಿವಿಂಗ್‌ ಮಿಷನ್‌ ಖರೀದಿಸಿದ್ದಾರೆ.

ಮಂಡ್ಯ: ಉಪಚುನಾವಣೆ ಹಿನ್ನೆಲೆ ಕಂಟ್ರೋಲ್ ರೂಂ ರಚನೆ

ಶಾಲೆಯಲ್ಲಿ ಉಚಿತವಾಗಿ ವಿತರಿಸುವ ಸಮವಸ್ತ್ರವನ್ನು ಹೊಲಿಗೆ ಹಾಕಿಸಲು ದುಬಾರಿಯಾಗಿತ್ತು. ಇದರಿಂದ ಪೋಷಕರು ಹಿಂದೇಟು ಹಾಕಿ ಮನೆಯಲ್ಲಿ ಇಟ್ಟುಕೊಂಡು ಹಳೆಯ ಸಮವಸ್ತ್ರವನ್ನು ಹಾಕಿ ಕಳುಹಿಸುತ್ತಿದ್ದರು. ಈಗ 100 ರು.ಗೆ ಸಮವಸ್ತ್ರವನ್ನು ಹೊಲಿದುಕೊಡುವ ಮೂಲಕ ಒಳ್ಳೆಯ ಕೆಲಸವನ್ನು ವೈ.ಯು.ಖಾನ್‌ ಮಾಡುತ್ತಿದ್ದಾರೆ. ವೈ.ಯು.ಖಾನ್‌ ಅವರಿಂದ ಮಕ್ಕಳ ಸಮವಸ್ತ್ರದ ಹೊಲಿಸುವ ಹೊರೆ ಬಡಮಕ್ಕಳ ತಂದೆ -ತಾಯಿಗೆ ಕಡಿಮೆಯಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಕವಾಡಿ ಮುಖ್ಯಶಿಕ್ಷಕ ಸಿ.ಬಿ.ಶೇಷಾಚಲ ಹೇಳಿದ್ದಾರೆ.

ಅಮೆರಿಕದಲ್ಲಿ ಶೂಟೌಟ್‌: ಮೈಸೂರು ವಿದ್ಯಾರ್ಥಿ ಬಲಿ

ಬಡಮಕ್ಕಳ ಪೋಷಕರು ಒಂದು ಜೊತೆ ಸಮವಸ್ತ್ರ ಹೊಲಿದುಕೊಟ್ಟರೆ 300 ರು. ಕೊಡುವಾಗ ಅವರು ಅಯ್ಯೋ ಎಂದು ಕೊಡುತ್ತಿರುವುದನ್ನು ನೋಡಿ ಮನಸ್ಸಿಗೆ ತುಂಬ ನೋವುಂಟಾಗಿ 100 ರು. ಮಾತ್ರ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಅಷ್ಟೇ ಅಲ್ಲ, 100 ಮಕ್ಕಳಿಗೆ ಸಮವಸ್ತ್ರವನ್ನು ಹೊಲಿಗೆ ಹಾಕಲು ನೀಡಿದರೆ ಅದೇ ಶಾಲೆಯ 10 ಬಡ ಮಕ್ಕಳನ್ನು ಆಯ್ಕೆ ಮಾಡಿಕೊಟ್ಟರೆ ಅವರಿಗೆ ಉಚಿತವಾಗಿ ಸಮವಸ್ತ್ರವನ್ನು ಹೊಲಿದುಕೊಟ್ಟು ತೃಪ್ತಿ ಕಾಣುತ್ತಿದ್ದೇನೆ ಎಂದು ಚಂದಕವಾಡಿ ಸಾಗರ್‌ ಸ್ಟಿಚ್‌ ಮಾಲಿಕ ವೈ.ಯು. ಖಾನ್‌ ಹೇಳಿದ್ದಾರೆ.

-ಎನ್‌.ರವಿಚಂದ್ರ