ಮಂಡ್ಯ(ನ.30): ಕೆ.ಆರ್‌ .ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕರು ದೂರು ದಾಖಲಿಸಲು ಅನುಕೂಲವಾಗುವಂತೆ ಕಂಟ್ರೋಲ್ ರೂಂ ತೆರೆಯಲಾಗಿದೆ.

ನವೆಂಬರ್‌ 5 ರಂದು ಮತದಾನ ಮತ್ತು ನ.9 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಯನ್ನು ಮುಕ್ತ, ಶಾಂತಿಯುತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಕಂಟ್ರೋಲ್ ರೂಂ ತೆರೆಯಲಾಗಿದೆ.

'ಬ್ಯಾಂಕ್‌ಗಳಿಗೆ ಹೊರೆಯಾಗ್ತಿದ್ದಾರೆ ಪ್ರಧಾನಿ ಮೋದಿ'..!

ಚುನಾವಣೆಯಲ್ಲಿ ಅಕ್ರಮ ಮದ್ಯ ಚಲಾವಣೆ ಹಾಗೂ ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ, ಸಾರ್ವಜನಿಕರು ಸಂಬಂಧಪಟ್ಟಕಂಟ್ರೋಲ್ ರೂಂಗಳಿಗೆ ಮಾಹಿತಿ ನೀಡಬಹುದು ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

ಕಾಡಿಬೇಡಿ ಟಿಕೆಟ್‌ ಪಡೆದು ಗೆದ್ದು ಕೈಕೊಟ್ಟ ಅನರ್ಹ ಶಾಸಕ..!

ಸಾರ್ವಜನಿಕರು ದೂರುಗಳಿದ್ದಲ್ಲಿ ದೂ-08232-220313, ಅಬಕಾರಿ ಉಪ ಅಧೀಕ್ಷಕರ ಕಛೇರಿ ಪಾಂಡವಪುರ ದೂ-08236-255652, ಕೆ.ಆರ್‌ .ಪೇಟೆ ದೂ-08230-263524, ಮಂಡ್ಯ ದೂ-08232-230439, ಮದ್ದೂರು ದೂ-08237-236126, ಮಳವಳ್ಳಿ ದೂ-08231-243938, ಶ್ರೀರಂಗಪಟ್ಟಣ ದೂ-08236-252559, ನಾಗಮಂಗಲ ದೂ-08234-286225 ಗೆ ಸಂಪರ್ಕಿಸಬಹುದು.

ಬಿಎಸ್‌ವೈ ತವರಿನಲ್ಲಿ ಬಿಜೆಪಿಗೆ ಕಠಿಣ ಪರೀಕ್ಷೆ; 2 ಸೋಲಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌