ಚಾಮರಾಜನಗರ(ನ.30): ಗುಂಡ್ಲುಪೇಟೆ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಆಟೋ ಹಾಗೂ ಗೂಡ್ಸ್‌ ಆಟೋಗಳ ಹಾವಳಿ ಮಿತಿ ಮೀರಿದೆ. ಕುರಿಗಳಂತೆ ತುಂಬಿಕೊಂಡು ತೆರಳುತ್ತಿದ್ದಾರೆ.

ಗೂಡ್ಸ್‌ ಆಟೋಗಳಲ್ಲಿ ಸಾಮಗ್ರಿಗಳ ಸಾಗಾಣಿಕೆ ಪರವಾನಗಿ ಇದ್ದರೂ ಜನರನ್ನು ತುಂಬಿಕೊಂಡು ತೆರಳುತ್ತಿರುವುದು ಹೆಚ್ಚಾಗಿ ಗ್ರಾಮಾಂತರ ಪ್ರದೇಶದಲ್ಲಿ ಕಂಡು ಬಂದಿದೆ.

ಇನ್ನೂ ಪ್ಯಾಂಸೆಜರ್‌ ಆಟೋದಲ್ಲಿ ಮೂರು ಜನರ ಬದಲಾಗಿ 10ರಿಂದ 12 ಜನರನ್ನು ತುಂಬಿಕೊಂಡು ಪೊಲೀಸ್‌ ಠಾಣೆಗಳ ಮುಂದೆಯೇ ತೆರಳುತ್ತಿರೂ ಪೊಲೀಸರು ಜಾಣ ಮೌನ ವಹಿಸಿದ್ದಾರೆ.

ಬೈಎಲೆಕ್ಷನ್: ನಕಲಿ ಅಬಕಾರಿ ಅಧಿಕಾರಿ ಬಂಧನ

ತಾಲೂಕಿನ ಬೇಗೂರು, ತೆರಕಣಾಂಬಿ ಹಾಗೂ ಗುಂಡ್ಲುಪೇಟೆ ಠಾಣೆಯ ಸರಹದ್ದಿನಲ್ಲಿ ಸಂಚರಿಸುವ ಬಹುತೇಕ ಪ್ಯಾಂಸೆಜರ್‌ ಹಾಗೂ ಗೂಡ್ಸ್‌ ಆಟೋಗಳ ಚಾಲಕರಿಗೆ ಡ್ರೈವಿಂಗ್‌ ಲೈಸನ್ಸ್‌, ಇನ್ಸೂರೆನ್ಸ್‌ ಇಲ್ಲ.

ಗೂಡ್ಸ್‌ ಹಾಗೂ ಪ್ಯಾಸೆಂಜರ್‌ ಆಟೋಗಳಲ್ಲಿ ಮಿತಿ ಮೀರಿದ ಜನರನ್ನು ತುಂಬಿಕೊಂಡು ಅತಿ ವೇಗವಾಗಿ ಹೋಗುತ್ತಾರೆ. ಅಲ್ಲದೆ, ಅಪಘಾತ ಸಂಭವಿಸಿದರೆ ಪ್ರಯಾಣಿಕರ ಪಾಡು ಹೇಳತೀರದಾಗಿದೆ.

‘ಅಪಾರ್ಟ್‌ಮೆಂಟ್‌ಗಳಿಗೆ ಕೆರೆ ನೀರು ತಪ್ಪಿಸಲು ಏರಿ ಒಡೆದರು’

ಶುಕ್ರವಾರ ಬೆಳಗ್ಗೆ ಪಟ್ಟಣದಲ್ಲಿ ಕೇರಳ ರಸ್ತೆಯಲ್ಲಿ ಗೂಡ್ಸ್‌ ಆಟೋದಲ್ಲಿ ಮಹಿಳೆರನ್ನು ತುಂಬಿಕೊಂಡು ಹಿಂಬದಿಯ ಡೋರ್‌ ಹಾಕದೆ ಸಾಗುವ ದೃಶ್ಯ ಕಂಡು ತೆರಳುತ್ತಿದ್ದ ದೃಶ್ಯ ಕನ್ನಡಪ್ರಭಕ್ಕೆ ಸೆರೆ ಸಿಕ್ಕಿದೆ.

ಕಾನೂನು ಬಾಹಿರವಾಗಿ ಜನರನ್ನು ತುಂಬಿಕೊಂಡು ತೆರಳುವ ಗೂಡ್ಸ್‌ ಆಟೋ ಹಾಗೂ ಪ್ಯಾಂಸೆಂಜರ್‌ ಆಟೋದಲ್ಲಿ ಅಧಿಕ ಜನರನ್ನು ತುಂಬಿಕೊಂಡು ತೆರಳುವುದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ.

'ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಮ್ಮ ಪಾಲಿಗೆ ಸುವರ್ಣಯುಗ'

ಪೊಲೀಸರು ಠಾಣೆಯ ವ್ಯವಹಾರದಲ್ಲೇ ತೊಡಗಿಕೊಳ್ಳುವ ಬದಲಾಗಿ ಸಂಚಾರ ಪಾಲನೆಗೂ ಸ್ವಲ್ಪ ಸಮಯ ಮೀಸಲಿಟ್ಟು ಜನರ ಪ್ರಾಣ ಉಳಿಸುವ ಕೆಲಸ ಆಗಲಿ ಎಂಬುದು ಜನರ ಕಳಕಳಿ.

ಗೂಡ್ಸ್‌ ಆಟೋದಲ್ಲಿ ಜನರ ಸಂಚಾರ ಹಾಗೂ ಪ್ಯಾಸೆಂಜರ್‌ ಆಟೋದಲ್ಲಿ ಅಧಿಕ ಜನರನ್ನು ತುಂಬಿಕೊಂಡು ಪೊಲೀಸ್‌ ಠಾಣೆಯ ಮುಂದೆಯೇ ತೆರಳುತ್ತಿದ್ದರೂ ಪೊಲೀಸರು ಮಾತ್ರ ಕ್ರಮ ವಹಿಸುತ್ತಿಲ್ಲ ಎಂದು ಗುಂಡ್ಲುಪೇಟೆಯ ಮಾದೇಶ ಹೇಳಿದ್ದಾರೆ.