88 ವರ್ಷಗಳ ಬಳಿಕ ವಾಣಿ ವಿಲಾಸ ಸಾಗರ ಡ್ಯಾಂ ಕೋಡಿ, ಹರಿದು ಬರ್ತಿರೋ ಜನಸಾಗರ
88 ವರ್ಷಗಳ ಬಳಿಕ ಕೋಡಿ ಬಿದ್ದ ವಾಣಿ ವಿಲಾಸ ಸಾಗರ ಡ್ಯಾಂ. ಕೋಡಿ ಬಿದ್ದು ಹರಿಯುತ್ತಿರುವ ನೀರನ್ನು ನೋಡಲು ಹರಿದು ಬರ್ತಿರೋ ಜನಸಾಗರ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಸೆಪ್ಟೆಂಬರ್.11): ಮೈಸೂರಿನ ಮಹಾರಾಜರು ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಯೋಗ್ಯವಾಗಲಿ ಎಂದು ನಿರ್ಮಿಸಿದ್ದ ಐತಿಹಾಸಿಕ ಡ್ಯಾಂ ಇದು. ಸುಮಾರು ೮೮ ವರ್ಷಗಳ ಬಳಿಕ ಈ ಡ್ಯಾಂ ಮೈ ದುಂಬಿದ್ದು, ಕೋಡಿ ಬಿದ್ದು ಹರಿಯುತ್ತಿರುವ ನೀರಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಆಗಮಿಸಿ ಜನರು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಅಷ್ಟಕ್ಕೂ ಆ ಡ್ಯಾಂ ಯಾವುದು? ಅದು ಇರೋದಾದ್ರು ಎಲ್ಲಿ ಅಂತೀರಾ! ಈ ಸ್ಟೋರಿ ನೋಡಿ..
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರವ ವಾಣಿ ವಿಲಾಸ ಸಾಗರ ನೀರು ಹರಿದುಬರುತ್ತಿದೆ. ಇದರ ಪರಿಣಾಮವಾಗಿ ಹಲವು ವರ್ಷಗಳ ಬಳಿಕ ಡ್ಯಾಂ ತುಂಬಿದ್ದು ಜಿಲ್ಲೆಯ ಜನರ ಖುಷಿಗೆ ಪಾರವೇ ಇಲ್ಲದಂತಾಗಿದೆ.
Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ
ಈ ಹಿಂದೆ 128 ಅಡಿ ನೀರು ಹರಿದು ಬಂದಿದ್ದೇ ದೊಡ್ಡ ಸಾಧನೆಯಾಗಿತ್ತು. ಆದ್ರೆ ಈ ಬಾರಿ ಬರೋಬ್ಬರಿ 135 ಅಡಿ ನೀರು ಡ್ಯಾಂ ನಲ್ಲಿ ಶೇಖರಣೆ ಆಗಿರೋದು ಅತಿದೊಡ್ಡ ಇತಿಹಾಸವಾಗಿದೆ. ಈ ಹಿಂದೆ ಎರಡು ತಲೆಮಾರಿನ ಜನರು ಈ ತರ ಡ್ಯಾಂ ತುಂಬಿದ್ದನ್ನು ಕಣ್ಣಾರೆ ಕಂಡಿದ್ರು, ಅದನ್ನು ಹೊರತು ಪಡಿಸಿದ್ರೆ ಇದೇ ಮೊದಲ ಬಾರಿಗೆ ಇಷ್ಟೊಂದು ನೀರು ಹರಿದು ಬಂದಿರೋದು ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ VVS ಡ್ಯಾಂ ಹೀಗೆ ಮೈದುಂಬಿ ತುಳುಕ್ತಿರೋದಕ್ಕೆ ಜಲಾಶಯ ಕೋಡಿ ಬಿದ್ದಿದೆ. ಕೋಡಿ ಬಿದ್ದು ಹರಿಯುತ್ತಿರುವ ಡ್ಯಾಂನ ನೀರಂತು ಯಾವುದೋ ಸಮುದ್ರದ ನೀರಿನ ರೀತಿ ಹರಿಯುತ್ತಿರೋದು ಪ್ರವಾಸಿಗರನ್ನು ಇನ್ನಷ್ಟು ಹುಚ್ಚೆಬ್ಬಿಸಿದೆ. ಗಗನಚುಕ್ಕಿ, ಬರಚುಕ್ಕಿ, ಜೋಗ ಜಲಪಾತದ ನೀರಿನ ರಭಸದ ರೀತಿ ರಸ್ತೆ ಮೇಲೆ ಕೋಡಿ ಬಿದ್ದು ಹರಿಯುತ್ತಿರೋ ನೀರನ್ನು ನೋಡಿ ಕಣ್ತುಂಬಿಕೊಳ್ಳಲು ನಾನಾ ಜಿಲ್ಲೆ ಹಾಗೂ ಅನೇಕ ಬೇರೆ ಬೇರೆ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಅದ್ರಲ್ಲಂತೂ ಇಂದು ಸಂಡೆ ಆಗಿದ್ರಿಂದ ಅನೇಕ ಪ್ರವಾಸಿಗರು ತಮ್ಮ ಕುಟುಂಬ ಸಮೇತ ಆಗಮಿಸಿ ಡ್ಯಾಂ ಹಾಗೂ ಕೋಡಿ ಬಿದ್ದು ಹರಿಯುತ್ತಿರುವ ನೀರನ್ನು ಕಂಡು ಮಸ್ತ್ ಎಂಜಾಯ್ ಮಾಡಿದರು.
ಕೋಟೆನಾಡಿನ ಜನರ ಅಕ್ಷಯಪಾತ್ರೆ ಆಗಿರುವ ವಿವಿ ಸಾಗರ ಡ್ಯಾಂ ಮೈ ತುಂಬಿ ಹರಿಯುತ್ತಿರೋದಕ್ಕೆ ಈ ಭಾಗದ ರೈತರು ಫುಲ್ ಖುಷ್ ಆಗಿದ್ದಾರೆ. ಅದೇ ರೀತಿ ಕೋಡಿ ಬಿದ್ದ ಸ್ಥಳದಲ್ಲಿ ಹಾಗು ಡ್ಯಾಂ ವೀಕ್ಷಣೆ ಮಾಡುವ ವೇಳೆ ಪ್ರವಾಸಿಗರು ಎಚ್ಚರಿಕೆ ವಹಿಸಿ ವೀಕ್ಷಣೆ ಮಾಡಲಿ ಎಂಬುದೇ ಎಲ್ಲರ ಆಶಯ.