Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ

ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ತತ್ತರಿಸಿಹೋಗಿದೆ. ಕೆರೆಕೋಡಿ ಹರಿದು, ಹಳ್ಳಗಳು ತುಂಬಿ ಮತ್ತು ಜಲಾಶಯದಿಂದ ಹರಿಬಿಟ್ಟನೀರು ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ ವಿಧಿಸಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕ ಅನಾಹುತ ಸಂಭವಿಸಿದೆ. ಮುಂದಿನ ಕೆಲವು ದಿನಗಳವರೆಗೆ ಭಾರೀ ಮಳೆಯಾಗಲಿದ್ದು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

Karnataka floods  rain Water blockade for hundreds of villages rav

ಬೆಂಗಳೂರು (ಸೆ.7) ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ತತ್ತರಿಸಿಹೋಗಿದೆ. ಕೆರೆಕೋಡಿ ಹರಿದು, ಹಳ್ಳಗಳು ತುಂಬಿ ಮತ್ತು ಜಲಾಶಯದಿಂದ ಹರಿಬಿಟ್ಟನೀರು ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ ವಿಧಿಸಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕ ಅನಾಹುತ ಸಂಭವಿಸಿದ್ದು, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

Cyclone Alert | ಕರ್ನಾಟಕ ಸೇರಿ 4 ರಾಜ್ಯಕ್ಕೆ ಮತ್ತೆ ಮಹಾಮಳೆ : ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ

ಗದಗ ನಗರ, ರೋಣ, ಲಕ್ಷ್ಮೇಶ್ವರ, ಶಿರಹಟ್ಟಿತಾಲೂಕಿನಲ್ಲಿ 600ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ನರಗುಂದ ತಾಲೂಕಲ್ಲಿ 22 ಮನೆಗಳು ಕುಸಿದುಬಿದ್ದಿವೆ. ಬೆಟಗೇರಿಯಲ್ಲಿ ರಾಜಕಾಲುವೆ ಪಕ್ಕದಲ್ಲಿನ 100ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ರೋಣ ತಾಲೂಕಿನ ಕರುವಿನಕೊಪ್ಪ, ಹೊಳೆಆಲೂರು ಸಂಪೂರ್ಣ ಜಲಾವೃತವಾಗಿವೆ. ಮದಗಾನೂರಿನಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ 450 ಹಾಗೂ ಅಣ್ಣಿಗೇರಿಯಲ್ಲಿ ತಾಲೂಕಿನಲ್ಲಿ 600 ಸಂತ್ರಸ್ತರಾಗಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹೆಸರೂರು ಗ್ರಾಮದ ರಸ್ತೆಗಳು ನದಿಯಂತಾಗಿವೆ. ಸಿದ್ದಾಪುರ ಗ್ರಾಮದಲ್ಲಿ 40 ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿದ್ದು, ಊರೊಳಗೆ ನೀರು ನುಗ್ಗಿದೆ. ಹುಬ್ಬಳ್ಳಿ ತಾಲೂಕಿನ ಹೆಬಸೂರು, ಕಿರೇಸೂರು ಗ್ರಾಮದಲ್ಲಿ ಹಲವಾರು ಮನೆ, ಶಾಲೆಗೆ ಬೆಣ್ಣಿ ಹಳ್ಳದ ನೀರು ನುಗ್ಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 155ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಬಾದಾಮಿಯ ಅಗಸ್ತ್ಯತೀರ್ಥ ಸಂಪೂರ್ಣ ತುಂಬಿ ಹರಿದಿದೆ.

ಇನ್ನೂ 5 ದಿನ ರಾಜ್ಯದಲ್ಲಿ ಮಳೆಯಾರ್ಭಟ: ನದಿಪಾತ್ರಗಳಲ್ಲಿ ಹೈ ಅಲರ್ಟ್

ಶಿವಮೊಗ್ಗದಲ್ಲಿ ರಾಜಕಾಲುವೆ ಪಕ್ಕದ ಚೌಡೇಶ್ವರಿ ಕಾಲೋನಿಯಲ್ಲಿ 150 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಬಡಾವಣೆ ಸಂಪೂರ್ಣ ದ್ವೀಪದಂತಾಗಿತ್ತು. ಚಿತ್ರದುರ್ಗದಲ್ಲಿ 89 ವರ್ಷಗಳ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿದ್ದು, ಹೊಸದುರ್ಗ ತಾಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಸ್ವಗ್ರಾಮ ಲಿಂಗಸಗೂರು ತಾಲೂಕು ಗುಂತಗೋಳದ ಸಂಪರ್ಕ ಕಡಿತಗೊಂಡಿದೆ.

Latest Videos
Follow Us:
Download App:
  • android
  • ios