ಚಿತ್ರದುರ್ಗ(ನ.19) : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಪೊಲೀಸ್ ಪೇದೆ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಕೊಟ್ಟ ಹಣ ವಾಪಸ್ ಕೊಡು ಎಂದು ಕೇಳಿದಾಕೆಯನ್ನು ಮನೆಗೆ ಕರೆಸಿಕೊಂಡ ಪೇದೆ ಬ್ಲ್ಯಾಕ್ ಮೇಲೆ ಮಾಡಿದ್ದಾನೆ.

ಪೊಲೀಸ್ ಪೇದೆ ವಿರುದ್ಧ ವಂಚನೆ, ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಡಿಎಆರ್ ಪೇದೆ ರೇಣುಕಪ್ಪ ವಿರುದ್ಧ ಆರೋಪ ಕೇಳಿ ಬಂದಿದೆ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆ ವಿರುದ್ಧ ಡಿಎಆರ್ ಪೊಲೀಸ್ ಪೇದೆ ಸಂಚು ಮಾಡಿದ್ದಾನೆ.

ಚೆನ್ನಾಗಿ ಕಾಣ್ತೀಯಾ ಎಂದು ಕಿಸ್ ಕೊಡ್ತಾನೆ ಈ ಪ್ರಿನ್ಸಿಪಲ್, ವಿದ್ಯಾರ್ಥಿನಿಯರ ಕಣ್ಣೀರು

ಹಣ ಹಿಂತಿರುಗಿಸುವುದಾಗಿ ಮನೆಗೆ ಕರೆಸಿಕೊಂಡ ಪೇದೆ ವ್ಯವಸ್ಥಿತ ಸಂಚು ರೂಪಿಸಿದ್ದಾನೆ. ಮತ್ತು ಬರುವ ಔಷಧಿ ಮಿಶ್ರಿತ ಜ್ಯೂಸ್ ಕುಡಿಸಿ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಅಶ್ಲೀಲ್ ವಿಡಿಯೋ ಮಾಡಿಕೊಂಡಿರುವುದಾಗಿ ಹೇಳಿದ ಪೊಲೀಸ್ ಪೇದೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ವಿಡಿಯೋ ವೈರಲ್ ಮಾಡುವುದಾಗಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ತಾರಸಿಯಲ್ಲಿ ಪ್ಲಾಸ್ಟಿಕ್ ಟ್ರೇನಲ್ಲೇ ಗಂಧಸಾಲೆ ಭತ್ತ ಬೆಳೆದ ಕೃಷಿ ಪ್ರೇಮಿ ಕೃಷ್ಣಪ್ಪ ಗೌಡ್ರು!

ಸಂತ್ರಸ್ತ ಮಹಿಳೆ ನ್ಯಾಯ ಕೊಡಿಸಿ ಎಂದು ಎಸ್‌ಪಿ ಕಚೇರಿಗೆ ಮನವಿ ಮಾಡಿದ್ದಾರೆ. ದೂರು ದಾಖಲಾಗಿ ತಿಂಗಳುಗಳೇ ಕಳೆದರೂ ನ್ಯಾಯ ಸಿಕ್ಕಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಜೂನ್ 3, 2019 ರಂದು ಪೇದೆ ರೇಣುಕಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಚಿತ್ರದುರ್ಗ ಮಹಿಳಾ ಠಾಣೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ ಆರೋಪ ಕೇಳಿ ಬಂದಿದೆ.

ಬೆಂಬಲ ಬಿಜೆಪಿಗೋ, ಕಾಂಗ್ರೆಸ್‌ಗೋ..? ಸುಮಲತಾ ನಡೆ ನಿಗೂಢ