ಚಿತ್ರದುರ್ಗ: ಮಳೆಗೆ ಪ್ರಾರ್ಥಿಸಿ ಗಣಪತಿಗೆ 101 ಬಿಂದಿಗೆ ಜಲಾಭಿಷೇಕ
ಮಲೆನಾಡು, ಉತ್ತರ ಕರ್ನಾಟ, ಕೊಡಗು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಹೆಚ್ಚಾಗಿ, ನೆರೆ ಬಂದು ಜನರ ಬದುಕು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದರೆ, ಚಿತ್ರದುರ್ಗದ ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಹೊಳಲ್ಕೆರೆಯಲ್ಲಿ ರೈತರು ಮಳೆಗಾಗಿ ಪ್ರಾರ್ಥಿಸಿದ ಬಯಲು ಗಣಪತಿ ಮೂರ್ತಿಗೆ ನೂರಾ ಒಂದು ಬಿಂದಿಗೆ ಅಮೃತಾ ಜಲಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.
ಚಿತ್ರದುರ್ಗ(ಆ.13): ಹೊಳಲ್ಕೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿದ ಪಟ್ಟಣದ ರೈತರು ಸೋಮವಾರ ಬಯಲು ಗಣಪತಿ ಮೂರ್ತಿಗೆ ನೂರಾ ಒಂದು ಬಿಂದಿಗೆ ಅಮೃತಾ ಜಲಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ತೀವ್ರವಾದ ಬರಗಾಲ ಮುಂದುವರಿದ ಪರಿಣಾಮ ಬರ ಛಾಯೆ ಹೆಚ್ಚುತ್ತಿದೆ. ಬಿದ್ದ ತುಂತುರು ಮಳೆ ಬೆಳೆಗಳಿಗೆ ಸಾಕಾಗುತ್ತಿಲ್ಲ. ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿಲ್ಲ. ಕಳೆದ ಎರಡು ತಿಂಗಳಿಂದ ಸಮರ್ಪಕ ಮಳೆ ಇಲ್ಲದೆ ತೋಟಗಾರಿಕೆ ಸೇರಿದಂತೆ ಕೃಷಿ ಬೆಳೆಗಳು ಸಂಪೂರ್ಣ ಒಣಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಕರುಣಿಸುವಂತೆ ಪ್ರಾರ್ಥಿಸಿದ ನೂರಾರು ರೈತರು ಪಟ್ಟಣದ ಗಣಪತಿಗೆ ನೂರೊಂದು ಬಿಂದಿಗೆ ಅಮೃತಾ ಜಲಾಭಿಷೇಕ ನಡೆಸಿದರು.
ಪ್ರವಾಹದಲ್ಲಿ ಕೊಚ್ಚಿ ಹೋಯ್ತು ವಿದ್ಯಾರ್ಥಿನಿ ಕನಸು!
ಮುಂಜಾನೆ ಪಟ್ಟಣದ ಕಾಲಭೈರವ ದೇವಸ್ಥಾನದ ಕನ್ನೇಕೆರೆ ಭಾವಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು, 101 ಕುಂಭ ಹೊತ್ತು ಮೆರವಣಿಗೆಯಲ್ಲಿ ಪಟ್ಟಣದ ಮುಖ್ಯ ರಸ್ತೆ, ಗಣಪತಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಗಿದರು. ನಂತರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಆಭಿಷೇಕ, ಪೂಜೆ ಸಲ್ಲಿಸುವ ಮೂಲಕ ಅಮೃತ ಜಲಾಭಿಷೇಕ ನಡೆಸಲಾಯಿತು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ