ಕಾಲೇಜಿಗೆ ಹೋಗುತ್ತಿದ್ದ ಯುವತಿ ಮೇಲೆ ಹರಿದ ಲಾರಿ, ಪಿಯು ವಿದ್ಯಾರ್ಥಿನಿ ಸಾವು!
ಚಿತ್ರದುರ್ಗದಲ್ಲಿ ಕಾಲೇಜಿಗೆ ಹೋಗಲು ನಿಂತಿದ್ದ ಯುವತಿ ಮೇಲೆ ಲಾರಿ ಹರಿದಿದ್ದು, ವಿದ್ಯಾರ್ಥಿನಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾಳೆ.
ಚಿತ್ರದುರ್ಗ (ಜ.16): ಬೆಳ್ಳಂಬೆಳಗ್ಗೆ ಕಾಲೇಜಿಗೆ ಹೋಗಲು ಬಸ್ ನಿಲ್ದಾಣದ ಬಳಿ ನಿಂತಿದ್ದ ವಿದ್ಯಾರ್ಥಿ ಮೇಲೆ ಲಾರಿ ಹರಿದಿದ್ದು, ಗಂಭೀರ ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಿಸಿದ ನಂತರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಚಿತ್ರದುರ್ಗ ಜಿಲ್ಲೆಯ ವಿಜಾಪುರ ಬಳಿ ವಿದ್ಯಾರ್ಥಿಗೆ ಲಾರಿ ಡಿಕ್ಕಿಯಾಗಿದೆ. ತಕ್ಷಣವೇ ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಪಿಯು ವಿಧ್ಯಾರ್ಥಿನಿ ಸುಚಿತ್ರಾ (19) ಮೃತ ವಿದ್ಯಾರ್ಥಿನಿ ಆಗಿದ್ದಾಳೆ. ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 4 ತಡೆದು ಗ್ರಾಮಸ್ಥರ ಧರಣಿ ಮಾಡುತ್ತಿದ್ದಾರೆ. ಸರ್ವೀಸ್ ರಸ್ತೆಗೆ ಬಸ್ ವ್ಯವಸ್ಥೆ ಕಲ್ಪಿಸದ್ದಕ್ಕೆ ಅಪಘಾತ ಸಂಭವಿಸಿದೆ. ಸರ್ವಿಸ್ ರಸ್ತೆಗೆ ಬಸ್ ಬಂದಿದ್ದರೆ ವಿದ್ಯಾರ್ಥಿನಿಗೆ ಹೀಗೆ ಆಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಲ್ಲಿ ದೆಹಲಿ ಮೂಲದ ಮಹಿಳೆ ಮನೆಯಲ್ಲಿ ಸ್ಪೋಟ: ಐದು ಮನೆಗಳಿಗೆ ಹಾನಿ, ಆರು ಜನರ ಸ್ಥಿತಿ ಗಂಭೀರ
ಸಾರಿಗೆ ಇಲಾಖೆಯಿಂದ ಕೂಡಲೇ ಸರ್ವಿಸ್ ರಸ್ತೆ ಮೂಲಕ ವಿಜಾಪುರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಬೆಳಗ್ಗೆ ಶಾಲೆ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಇನ್ನು ಹೆದ್ದಾರಿ ತಡೆದು ಧರಣಿ ಆರಂಭಿಸಿದ್ದರಿಂದ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಧರಣಿನಿರತರನ್ನು ರಸ್ತೆಯಿಂದ ತೆರವುಗೊಳಿಸಲು ಭರಮಸಾಗರ ಠಾಣೆ ಪೊಲೀಸರು ತೀವ್ರ ಹರಸಾಹಸ ಪಡುತ್ತಿದ್ದಾರೆ. ರಸ್ತೆಯಿಂದ ಗ್ರಾಮಸ್ಥರನ್ನು ತೆರವು ಮಾಡಲು ಮುಂದಾದಾಗ ಪೊಲೀಸರ ಜೊತೆಗೇ ಪ್ರತಿಭಟನಾಕಾರರು ವಾಗ್ವಾದ ಮುಂದುವರೆಸಿದ್ದಾರೆ. ಈ ಘಟನೆ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರಿ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಹಾವೇರಿ ನೈತಿಕ ಪೊಲೀಸ್‌ಗಿರಿ ಹೆಸರಲ್ಲಿ ಗ್ಯಾಂಗ್‌ರೇಪ್ ಸಂತ್ರಸ್ತೆಗೆ ಭದ್ರತೆಯಿಲ್ಲ:
ಹಾವೇರಿಯ ಹಾನಗಲ್ ಪುಂಡ ಯುವಕರಿಂದ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಮಹಿಳೆಯನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿ 6 ಜರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಸ್ವತಃ ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಆಪರಾಧಿಗಳು ಸಾಕ್ಷ್ಯ ನಾಶಕ್ಕಾಗಿ ಸಂತ್ರಸ್ತೆಯ ಜೀವಕ್ಕೆ ಅಪಾಯ ಮಾಡುವ ಸಾಧ್ಯತೆಯಿದ್ದರೂ ಪೊಲೀಸರು, ಸಂತ್ರಸ್ತೆಯನ್ನು ಸ್ಥಳ ಮಹಜರಿಗೆ ಹೋಗೋಣ ಎಮದು ಕರೆತಂದು ಒಬ್ಬಂಟಿಯಾಗಿ ಮನೆಗೆ ಬಿಟ್ಟು ಹೋಗಿದ್ದಾರೆ. ಇದ್ಯಾವ ನ್ಯಾಯವೆಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಹಾವೇರಿ ಗ್ಯಾಂಗ್‌ರೇಪ್ ಸಂತ್ರಸ್ತೆಗೆ ಜೀವ ಭಯವಿದ್ದರೂ, ಒಂಟಿಯಾಗಿ ಮನೆಗೆ ಬಿಟ್ಟು ಹೋದ ಪೊಲೀಸರು
ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಶಿರಸಿಯ ಮಹಿಳೆ ಸ್ವತಃ ತನ್ನ ಮೇಲೆ 6 ಜನ ಮುಸ್ಲಿಂ ಯುವಕರು ಕಾರಿನಲ್ಲಿ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿಕೊಂಡರೂ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪೊಲೀಸ್ ತನಿಖೆಗೂ ಮುನ್ನವೇ ಬಿಜೆಪಿ ನಾಯಕರು ಕಥೆಯನ್ನು ಕಟ್ಟಿ ಆರೋಪಿಗಳೆಂದು ಹೇಳುವುದನ್ನು ನಾವು ನಂಬುವುದಿಲ್ಲ. ಪೊಲೀಸ್ ತನಿಖೆ ಮತ್ತು ಸಂಸತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ಮಾಹಿತಿ ಆಧರಿಸಿ ವರದಿ ಬಂದ ನಂತರ ಈ ಪ್ರಕರಣದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.