Asianet Suvarna News Asianet Suvarna News

ಸಂಸದರ ವಿರುದ್ದ ಆಕ್ರೋಶ, ಚಿತ್ರದುರ್ಗ ಜಿ.ಪಂ ಕಚೇರಿಗೆ ಟ್ಯಾಕ್ಟರ್ ನಿಲ್ಲಿಸಿ ರೈತರ ಪ್ರತಿಭಟನೆ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಬೇಕಿರುವ ದೀಶಾ ಸಭೆಗೆ ರೈತರು ಅಡ್ಡಿಪಡಿಸುವ ನಿಟ್ಟಿನಲ್ಲಿ ಜಿ.ಪಂ.ಕಚೇರಿ ಗೇಟಿಗೆ ಟ್ರಾಕ್ಟರ್ ಅಡ್ಡ ನಿಲ್ಲಿಸಿ ದಿಗ್ಬಂಧನ ಹಾಕಿದ ಘಟನೆ ನಡೆದಿದೆ.

Chitradurga  Farmers protest  against  for Upper Bhadra Project gow
Author
First Published Mar 6, 2024, 9:58 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಮಾ.6): ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಬೇಕಿರುವ ದೀಶಾ ಸಭೆಗೆ ರೈತರು ಅಡ್ಡಿಪಡಿಸುವ ನಿಟ್ಟಿನಲ್ಲಿ ಜಿ.ಪಂ.ಕಚೇರಿ ಗೇಟಿಗೆ ಟ್ರಾಕ್ಟರ್ ಅಡ್ಡ ನಿಲ್ಲಿಸಿ ದಿಗ್ಬಂಧನ ಹಾಕಿದ್ದರಿಂದ ಪೊಲೀಸರು ಹಾಗೂ ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದ ಘಟನೆ ಇಂದು ನಡೆಯಿತು.

ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ‌ ಅನುಷ್ಟಾನ ಗೊಳಿಸಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಕಳೆದ 30 ದಿನಗಳಿಂದ ರೈತ ಹೋರಾಟಗಾರ ಸಿದ್ದವೀರಪ್ಪ‌ ನೇತೃತ್ವದಲ್ಲಿ ಸತತ‌ 31 ದಿನಗಳಿಂದ  ರೈತರು ಅಹೋರಾತ್ರಿ ಧರಣಿ‌ ನಡೆಸುತ್ತಿದ್ದು, ಇಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಬೇಕಿರುವ ದೀಶಾ ಸಭೆ ಅಡ್ಡಿಪಡಿಸಬೇಕು ಎಂದು ರೈತರು ಜಿ.ಪಂ.ಕಚೇರಿ ಗೇಟಿಗೆ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಟ್ರಾಕ್ಟರ್ ಅಡ್ಡಲಾಗಿ ನಿಲ್ಲಿಸಿದರು. 

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿದ ಗೋ ಬ್ಯಾಕ್ ಅಭಿಯಾನ, ಶೋಭಾ ಬಳಿಕ ಹೆಗ್ಡೆ ಟಾರ್ಗೆಟ್

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೇಂದ್ರ ಸಚಿವರ ಸಭೆ ಇದೆ. ಸಭೆಗೆ ಅಡ್ಡಿಪಡಿಸಬೇಡಿ. ನಿಮ್ಮ ಧರಣಿ ಶಾಂತಿಯುತವಾಗಿ ನಡೆಸಿ ಎಂದು ಮನವಿ ಮಾಡಿದರು ಸಹ ಕೇಳದ ರೈತರು, ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ‌ ಅನುಷ್ಟಾನ ಗೊಳಿಸಬೇಕು ಅಲ್ಲಿಯವರೆಗೂ ಯಾವುದೇ ಸಭೆ ನಡೆಸಲು ಅನುವು ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಆಗಮಿಸಿ ರೈತರಿಗೆ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿಕೊಂಡರು. ಯಾವುದೇ ಕಾರಣಕ್ಕೂ ನಾವು ನಿಲ್ಲಿಸಲ್ಲ, ಇಂದು ನಿಮ್ಮ ಪೊಲೀಸರು ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ.‌ ನಾವು ಹೋರಾಟ ಮಾಡೋದು ಜನರಿಗೆ ನೀರು ಕೊಡಿ ಸ್ವಾಮಿ ಎಂದು, ಆದ್ರೆ ನಿಮ್ಮ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಮಾಡ್ತಿರೋದು ಖಂಡನೀಯ ಎಂದು ಎಸ್ಪಿ ಮುಂದೆಯೇ ರೈತ ಮುಖಂಡ ಸಿದ್ದವೀರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಗೇಟಿಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್ ನ್ನು ತೆರುವುಗೊಳಿಸಲು ಮುಂದಾದ ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ‌ ಚಕಮಕಿ‌ ನಡೆಯಿತು. ಸ್ವತಃ ಪೊಲೀಸರೇ ಗೇಟ್ ಬಳಿ ನಿಂತಿದ್ದ ಟ್ರಾಕ್ಟರ್ ಗಳನ್ನು  ತಳ್ಳಿಕೊಂಡು‌ ಬೇರೆಡೆ ನಿಲ್ಲಿಸಿದರು. ನಂತರ ರಸ್ತೆಯಲ್ಲೇ ರೈತರು ಕುಳಿತು ತಿಂಡಿ ಸೇವನೆ ಮಾಡಿದರು. ಇದಕ್ಕೆ ಸಹಕರಿಸುವಂತೆ ಪೊಲೀಸರು ರೈತರ ದಾಹ ತೀರಿಸಲು ನೀರಿನ ವ್ಯವಸ್ಥೆ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಹೆಚ್ವಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸೋಕೆ ಮಹದಾಯಿ ಹೋರಾಟಗಾರರ ಮಾಸ್ಟರ್ ಪ್ಲಾನ್

ಇನ್ನೂ ಘಟನಾ ಸ್ಥಳಕ್ಕೆ ಆಗಮಿಸಿದ ಸಂಸದ ನಾರಾಯಣಸ್ವಾಮಿ ಗೆ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ ಹೋರಾಟದ‌ ಕುರಿತು ಇಂಚಿಂಚು ಮಾಹಿತಿ ನೀಡಿದರು.   ಕೇಂದ್ರ ಘೋಷಿಸಿದ 5.300ಕೋಟಿ ರೂ. ಶೀಘ್ರ ಬಿಡುಗಡೆಗೆ ರೈತರ ಆಗ್ರಹಿಸಿದರು. ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಅಗಬೇಕು. ರಾಜ್ಯ ಸರ್ಕಾರ, ಸಿಎಂ, ಸಚಿವರ ಜತೆ ಚರ್ಚಿಸಿ ಕ್ರಮವಹಿಸಬೇಕು. ಕೇಂದ್ರ, ರಾಜ್ಯ ಸರ್ಕಾರ ಒಟ್ಟಾಗಿ ಭದ್ರಾ ಯೋಜನೆ ಅನುಷ್ಠಾನಕ್ಕೆ ವಾಗಬೇಕು ಎಂದು  ರೈತ ಮುಖಂಡರಾದ ಬಸವರಾಜಪ್ಪ, ಸಿದ್ಧವೀರಪ್ಪ ಸಂಸದರಿಗೆ ಮನವಿ ಮಾಡಿಕೊಂಡರು. ಬಳಿಕ ಮಾತನಾಡಿದ ಸಂಸದ, ರೈತ ಮುಖಂಡರಿಗೆ ಭರವಸೆ ನೀಡಿದ ಸಚಿವ ಎ.ನಾರಾಯಣಸ್ವಾಮಿ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ.

ರಾಜ್ಯದ ಡಿಸಿಎಂ, ಕೇಂದ್ರ ಜಲಶಕ್ತಿ ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಸಿಎಂ, ಪಿಎಂ ಭೇಟಿ ಮಾಡಿ ಈ ಬಗ್ಗೆ ಮಾತಾಡುವ ಪ್ರಯತ್ನ. ರೈತರು ನೀವೆಲ್ಲಾ ಸೇರಿ ಒಂದು ಟೀಂ ರಚನೆ ಮಾಡಿಕೊಳ್ಳಿ ಬೆಂಗಳೂರಿಗೆ ಹೋಗಿ ಸಿಎಂ ಜತೆ ಮಾತಾಡೋಣ, ದೆಹಲಿಗೆ ಹೋಗಿ ಪ್ರಧಾನಿ, ಜಲಶಕ್ತಿ ಮಂತ್ರಿ‌ ಜತೆ ಮಾತಾಡೋಣ  ಎಂದರು.

Follow Us:
Download App:
  • android
  • ios