ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿದ ಗೋ ಬ್ಯಾಕ್ ಅಭಿಯಾನ, ಶೋಭಾ ಬಳಿಕ ಹೆಗ್ಡೆ ಟಾರ್ಗೆಟ್
ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದ್ದ ಕೈ ನಾಯಕರಿಗೆ ಚಿಕ್ಕಮಗಳೂರು ಜಿಲ್ಲೆಯಿಂದ ಶಾಕ್ ಎದುರಾಗಿದೆ. ಬಿಜೆಪಿಗೆ ಟಕ್ಕರ್ ಕೊಡೋಕೆ ಜಯಪ್ರಕಾಶ್ ಹೆಗ್ಡೆ ಕಣಕ್ಕಿಳಿಸೋ ಪ್ಲಾನ್ ನಲ್ಲಿದ್ದ ಕೈ ಪಾಳ್ಯಕ್ಕೆ ಗೋ ಬ್ಯಾಕ್ ಜಯಪ್ರಕಾಶ್ ಹೆಗ್ಡೆ ಸ್ವಪಕ್ಷಿಯರಿಂದಲೇ ಶುರುವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.6): ಕಾಫಿನಾಡಲ್ಲಿ ಕಳೆದೊಂದು ತಿಂಗಳನಿಂದ ಬಿಜೆಪಿಗೆ ಗೋ ಬ್ಯಾಕ್ ಶೋಭಾ ದೊಡ್ಡ ತಲೆನೋವೇ ಅಗಿತ್ತು. ಹಾಲಿ ಸಂಸದೆ ಶೋಭಾಕರಂದ್ಲಾಜೆ ವಿರುದ್ದ ನಿರಂತರವಾಗಿ ಗೋಬ್ಯಾಕ್ ಅಭಿಯಾನ ನಡೆಸುತ್ತಿರುವ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಪಾಳದಲ್ಲೂ ಗೋಬ್ಯಾಕ್ ಅಭಿಯಾನ ಶುರುವಾಗಿದೆ. ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದ್ದ ಕೈ ನಾಯಕರಿಗೆ ಚಿಕ್ಕಮಗಳೂರು ಜಿಲ್ಲೆಯಿಂದ ಶಾಕ್ ಎದುರಾಗಿದೆ. ಬಿಜೆಪಿಗೆ ಟಕ್ಕರ್ ಕೊಡೋಕೆ ಜಯಪ್ರಕಾಶ್ ಹೆಗ್ಡೆ ಕಣಕ್ಕಿಳಿಸೋ ಪ್ಲಾನ್ ನಲ್ಲಿದ್ದ ಕೈ ಪಾಳ್ಯಕ್ಕೆ ಗೋ ಬ್ಯಾಕ್ ಜಯಪ್ರಕಾಶ್ ಹೆಗ್ಡೆ ಸ್ವಪಕ್ಷಿಯರಿಂದಲೇ ಶುರುವಾಗಿದೆ.
ಗೋ ಬ್ಯಾಕ್ ಜಯಪ್ರಕಾಶ್ ಹೆಗ್ಡೆ ಅಭಿಯಾನ:
ಕಾಫಿನಾಡು ಕೃಷ್ಣನೂರಿನಲ್ಲಿ ಬಿಜೆಪಿಗೆ ಟಕ್ಕರ್ ಕೊಡೋಕೆ ಕಾಂಗ್ರೆಸ್ ಮುಂದಾಗಿದೆ. ಕಾಫಿ ನಾಡಲ್ಲಿ ನಾಲ್ವರು ಶಾಸಕರ ಬಲ ಮತ್ತೊಂದೆಡೆ ಬಿಜೆಪಿಯ ಭದ್ರಕೋಟೆಯಾಗಿರೋ ಉಡುಪಿಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿಗಾಗಿ ಅಭ್ಯರ್ಥಿ ಹುಡುಕಾಟ ಶುರುವಾಗಿದೆ. ಅದ್ರಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದು ಜಯಪ್ರಕಾಶ್ ಹೆಗ್ಡೆ ಹೆಸ್ರು. ಈಗ ಬಿಜೆಪಿಯಲ್ಲಿರೋ ಜಯಪ್ರಕಾಶ್ ಹೆಗ್ಡೆಯನ್ನ ಕಾಂಗ್ರೆಸ್ ಕರ್ಕೊಂಡು ಬಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಕ್ಕರ್ ಕೋಡೋಕೆ ಪ್ಲಾನ್ ಗಳು ನಡೆಯುತ್ತಿವೆ . 2012ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಬಿಜೆಪಿ ವಿರುದ್ದ ಜಯಗಳಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷವನ್ನು ಜಯಪ್ರಕಾಶ್ ಹೆಗ್ಡೆ ಸೇರಿದ್ದರು. ಇದೀಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷದಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಮಾಡಲು ಕೈ ಪಾರ್ಟಿ ತಯಾರಿ ಆರಂಭಿಸಿದೆ. ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿ ಎನ್ನುತ್ತಿರುವಾಗ್ಲೇ ಅತೀ ದೊಡ್ಡ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು.ಅದು ಗೋ ಬ್ಯಾಕ್ ಜಯಪ್ರಕಾಶ್ ಹೆಗ್ಡೆ ಅಂತಾ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿ ಅಭಿಯಾನ ಆರಂಭಿಸಿದ್ದಾರೆ.
ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸೋಕೆ ಮಹದಾಯಿ ಹೋರಾಟಗಾರರ ಮಾಸ್ಟರ್ ಪ್ಲಾನ್
ಕಾಂಗ್ರೆಸ್ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಕೊಡಿ:
ಇನ್ನೂ ಉಪಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಉಡುಪಿ ಚಿಕ್ಕಮಗಳೂರು ಸಂಸದರಾಗಿದ್ರು ಅದಾದ ನಂತ್ರ 2014 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ದಿಸಿ ಸೋಲು ಕಂಡಿದ್ರು. 2017 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ರು ಜಯಪ್ರಕಾಶ್ ಹೆಗ್ಡೆ. ಈಗ 2023ಕ್ಕೆ ಮತ್ತೆ ಅವ್ರ ಹೆಸ್ರು ಕೇಳ್ತಾನೇ ಇತ್ತು.ಇನ್ನೇನೂ ಕಾಂಗ್ರೆಸ್ ಮೊದಲ ಟಿಕೆಟ್ ಆನೌಂನ್ಸ್ ಅಗೋ ಸಾಧ್ಯತೆಯಿರುವಾಗ್ಲೇ ಗೋ ಬ್ಯಾಕ್ ಜಯಪ್ರಕಾಶ್ ಹೆಗ್ಡೆ ಅಭಿಯಾನ ಶುರುವಾಗಿದೆ.
ರಾಜ್ಯದಲ್ಲಿ ಸೈಬರ್ ಸೆಕ್ಯೂರಿಟಿ ನಿಯಮ ಶೀಘ್ರ ಜಾರಿಗೆ: ಗೃಹ ಸಚಿವ ಪರಮೇಶ್ವರ್
ಅವಕಾಶವಾದಿ ಜೆಪಿಹೆಗ್ಡೆ ಗೋ ಬ್ಯಾಕ್, ಈ ಬಾರಿ ಕಾಂಗ್ರೆಸ್ ಟಿಕೆಟ್ ಚಿಕ್ಕಮಗಳೂರು ಜಿಲ್ಲೆಗೆ, ಕಷ್ಟ ಕಾಲದಲ್ಲಿ ಕೈಕೊಟ್ಟವರು ಈಗ ಬೇಡ, ಕಾಂಗ್ರೆಸ್ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಕೊಡಿ ಅನ್ನೋ ಪೋಸ್ಟರ್ ನೊಂದಿಗೆ ಗೋ ಬ್ಯಾಕ್ ಅಭಿಯಾನ ಶುರುವಾಗಿದೆ.ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಬೇಟಿ ನೀಡಿದಾಗ ಶೃಂಗೇರಿ ಶಾಸಕ, ಕಿಮ್ಮಣೆ ರತ್ನಾಕರ್ ಸೇರಿ 50ಕ್ಕೂ ಕಾಫಿ ನಾಡು ಹಾಗೂ ಉಡುಪಿಯ ಘಟಾನುಘಟಿಗಳು ಬೇಟಿ ಮಾಡಿ ಮನವಿಯೊಂದನ್ನ ಸಲ್ಲಿಸಿದ್ರು.ಅದು ಜಿಲ್ಲೆಯ ಸುಧೀರ್ ಮುರೋಳ್ಳಿಗೆ ಟಿಕೆಟ್ ಕೊಡ್ಸಿ ಅಂತಾ. ಇದ್ರ ಬೆನ್ನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಜಯಪ್ರಕಾಶ್ ಹೆಗ್ಡೆ ಗೋ ಬ್ಯಾಕ್ ಅಭಿಯಾನವೂ ಶುರುವಾಗೋ ಮೂಲಕ ಪಕ್ಷದಲ್ಲಿದ್ದೋರಿಗೆ ಟಿಕೆಟ್ ನೀಡಿ ಅನ್ನೋ ಅಭಿಯಾನಕ್ಕೂ ಚಾಲನೆ ಸಿಕ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.