ಮೈಸೂರು(ಮೇ 28): ಒಂದೆಡೆ ಕೊರೋನಾ ಸೋಂಕಿನ ಭೀತಿ, ಮತ್ತೊಂದೆಡೆ ಭಾರತ- ಚೀನಾ ಗಡಿಯಲ್ಲಿ ಯುದ್ದೋನ್ಮಾದ ವಾತಾವರಣ ಇರುವ ನಡುವೆಯೇ ಚೀನಾ ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂದಾಗಿದ್ದು, ಅವರಿಗಾಗಿಯೇ ಮೈಸೂರು ವಿವಿ ಹತ್ತು ದಿನ ಮುಂಚಿತವಾಗಿ ಪರೀಕ್ಷೆ ನಡೆಸುತ್ತಿದೆ.

ಮೈಸೂರು ವಿವಿಯ ಎಂ.ಎಸ್ಸಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ನೂರಕ್ಕೂ ಹೆಚ್ಚು ಚೀನಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪೂರ್ವ ನಿಗದಿಯಂತೆ ಜೂ. 15 ರಂದು ಪರೀಕ್ಷೆ ನಡೆಸಲು ವಿವಿಯು ಸಿದ್ಧತೆ ನಡೆಸಿತ್ತು. ಆದರೆ ಚೀನಾ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಆ ದೇಶ ತೀರ್ಮಾನಿಸಿರುವುದರಿಂದ ಪರೀಕ್ಷೆಯನ್ನು ಮುಂಚಿತವಾಗಿಯೇ ನಡೆಸಲಾಗುತ್ತಿದೆ.

ಅಕೌಂಟೆಂಟ್‌ ಕೆಲ್ಸ ಹೋಯ್ತು: ಸೊಪ್ಪು ಮಾರಿ ಬದುಕು ಕಟ್ಟಿಕೊಳ್ತಿದ್ದಾರೆ ದಿಟ್ಟ ಯುವತಿಯರು

ಚೀನಾ ರಾಯಭಾರ ಕಚೇರಿಯಿಂದ ಸೋಮವಾರ ದೂರವಾಣಿ ಕರೆ ಮಾಡಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕಳುಹಿಸುವಂತೆ ಕೋರಲಾಯಿತು. ನಾವು ಜೂ. 15 ರಂದು ಪರೀಕ್ಷೆ ನಡೆಸುತ್ತಿರುವುದಾಗಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ತಿಳಿಸಿದೆವು. ಆದರೆ ಅವರು ಪಿಜಿ ಪರೀಕ್ಷೆಯನ್ನು ಹತ್ತು ದಿನ ಮೊದಲೇ ನಡೆಸುವಂತೆ ಕೋರಿದರು. ಬಳಿಕ ಈ ಬಗ್ಗೆ ಚರ್ಚಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂಚೆಯೇ ನಡೆಸಲು ತೀರ್ಮಾನಿಸಲಾಯಿತು ಎಂದು ಮೈಸೂರು ವಿವಿ ಕುಲಪತಿ ಪೊ›.ಜಿ. ಹೇಮಂತಕುಮಾರ್‌ ಹೇಳಿದರು.

ಯುದ್ಧೋನ್ಮಾದ ಬಿಟ್ಟು ಮೆತ್ತಗಾದ ಚೀನಾ!

ಜೂ. 1 ರಿಂದ ಪರೀಕ್ಷೆ ಆರಂಭಿಸಿ, ಜೂ. 6ಕ್ಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಸ್ನಾತಕೋತ್ತರ ಪದವಿ ಪರೀಕ್ಷೆ (ಚೀನಾ ವಿದ್ಯಾರ್ಥಿಗಳಿಗೆ) ಪೂರ್ಣಗೊಳ್ಳಲಿದ್ದು, ಜೂ. 7 ಮತ್ತು 8 ರಂದು ಚೀನಾ ವಿದ್ಯಾರ್ಥಿಗಳು ಮೈಸೂರಿನಿಂದ ಸ್ವದೇಶಕ್ಕೆ ಹಿಂದಿರುಗುವರು ಎಂದು ವಿವಿ ತಿಳಿಸಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣದಿಂದಾಗಿ ಚೀನಾ ಸರ್ಕಾರ ತನ್ನ ನಾಗರಿಕರನ್ನು ಇಲ್ಲಿಂದ ಸ್ಥಳಾಂತರಿಸಲು ಬಯಸಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ. ಅಲ್ಲದೆ ಭಾರತ- ಚೀನಾ ನಡುವಿನ ಗಡಿ ಉದ್ವಿಗ್ನತೆಗೂ ಚೀನಿಯರನ್ನು ಭಾರತದಿಂದ ಸ್ಥಳಾಂತರಿಸುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚೀನಾ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಆದರೆ ಗಡಿಯಲ್ಲಿ ತನ್ನ ಸೇನೆ ನಿಯೋಜಿಸಿದ ಮೇಲೆಯೇ ಈ ನೋಟಿಸ್‌ ಅನ್ನು ವೆಬ…ಸೈಟ್‌ನಲ್ಲಿ ಪ್ರಕಟಿಸಿರುವುದು ಅನುಮಾನಕ್ಕೆ ಅವಕಾಶ ಕಲ್ಪಿಸಿದೆ.

ಚೀನಾ ಕುತಂತ್ರಕ್ಕೆ ಬದಲಿಯಾಗಿ ಅಮೆರಿಕ, ಜರ್ಮನಿ ತಂತ್ರ

ಚೀನಾದ ರಾಯಭಾರ ಕಚೇರಿಯು ಸೋಮವಾರ, ಭಾರತದಲ್ಲಿ ನೆಲೆಸಿರುವ ತನ್ನ ನಾಗರೀಕರಿಗೆ ಅಗತ್ಯ ನೋಟಿಸ್‌ ಮೂಲಕ ಸ್ವದೇಶಕ್ಕೆ ಹಿಂದಿರುಗುವಂತೆ ಮತ್ತು ಅದಕ್ಕಾಗಿ ವಿಶೇಷ ವಿಮಾನ ವ್ಯವಸ್ಥೆ ಇದೆ ಎಂದು ಸೂಚಿಸಿತ್ತು.